ಪ್ಲೂರೋಸ್ಟೈಲಿಯ ಆಪೋಸಿಟ (Wall.) Alston - ಸೆಲಾಸ್ಟ್ರೇಸಿ

Synonym : ಸೆಲಾಸ್ಟ್ರಸ್ ಆಪೋಸಿಟ Wall.; ಪ್ಲೂರೋಸ್ಟೈಲಿಯ ವೈಟಿಯೈ Wt. & Arn.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ ಎತ್ತರದವರೆಗೆ ಬೆಳೆಯುವ ಸಣ್ಣ ಗಾತ್ರದ ನಿತ್ಯಹರಿದ್ವರ್ಣಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು ಸಣ್ಣ ಶಲ್ಕೆಗಳಿಂದ ಕೂಡಿರುತ್ತವೆ; ಕಚ್ಚು ಮಾಡಿದ ಜಾಗ ಕೆಂಪಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ನಾಲ್ಕು ಕೋನಗಳನ್ನು ಹೊಂದಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ತೆ ಯಲ್ಲಿದ್ದು 0.3 ಸೆಂ.ಮೀ ಉದ್ದದ ಎಲೆತೊಟ್ಟುಗಳನ್ನು ಹೊಂದಿರುತ್ತವೆ; ಎಲೆಪತ್ರಗಳು 4-6 X1-2 ಸೆಂ.ಮೀ ಗಾತ್ರ ಹೊಂದಿದ್ದು, ಸಾಮಾನ್ಯವಾಗಿ ಬುಗುರಿಯ ಆಕಾರ ಕೆಲವು ವೇಳೆ ಅಂಡ ವೃತ್ತಾಕಾರದಲ್ಲಿರುತ್ತವೆ, ಎಲೆಗಳು ಚೂಪಲ್ಲದ ಮಾದರಿಯ ತುದಿಯನ್ನೂ, ಬೆಣೆಯಾಕಾರದ ಬುಡವನ್ನೂ ಹೊಂದಿದ್ದು, ತೊಗಲಿನ್ನೋಲುವ ಮಾದರಿಯಲ್ಲಿದ್ದು, ನಯವಾದ ಅಂಚನ್ನು ಹೊಂದಿರುತ್ತವೆ, ಒಣಗಿದ ಎಲೆಗಳ ತಳಭಾಗ ಹಾಗೂ ಮೇಲ್ಭಾಗ ಬೂದು ಬಣ್ಣದಲ್ಲಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ತುಸು ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು 4 ರಿಂದ 6 ಜೋಡಿಗಳು; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿರುವ ಮಧ್ಯಾರಂಭಿ ಮಾದರಿಯವು;ಹೂಗಳು ಸೂಕ್ಷ್ಮ ಗಾತ್ರದವುಗಳಾಗಿದ್ದು ಬಿಳಿ ಬಣ್ಣ ಹೊಂದಿರುತ್ತವೆ.
ಕಾಯಿ /ಬೀಜ : ಕಾಯಿಗಳು ಬಿರಿಯದ ಮಾದರಿಯವು; ಕೋಶಗಳು 1ರಿಂದ 2 ಇದ್ದು, ಏರಿಲ್ ಮಾದರಿಯ ಹೊರಕವಚದಿಂದ ಆವೃತವಾಗಿರುವ ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ 650 ಮೀ ಎತ್ತರದವರೆಗಿನ ಪ್ರದೇಶಗಳ ಒಣ ನಿತ್ಯಹರಿದ್ವರ್ಣ ಕಾಡುಗಳು ಮತ್ತುಕರಾವಳಿ ಈ ಪ್ರ ದೇಶಗಳಲ್ಲಿನ ಜಂಬು ಮಣ್ಣಿನಲ್ಲಿ ಈ ಪ್ರಭೇಧ ಬೆಳೆಯುತ್ತದೆ.

ವ್ಯಾಪನೆ :

ದಕ್ಷಿಣ ಏಷ್ಯಾ ಮತ್ತು ಹಿಂದೂಮಹಾಸಾಗರದ ದ್ವೀಪಗಳು; ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿ, ಮಲಬಾರು ಮತ್ತು ಕರ್ನಾಟಕದ ಕರಾವಳಿ

ಗ್ರಂಥ ಸೂಚಿ :

Trimen,Handb.Fl Ceylon 6Lsuppl.)48.1931; Gamble,Fl.Madras1:211.1997(re.ed.);Sasidharan, Biodiversity documentation for Kerala-Flowering Plants, part 6:98.2004;Saldanha, Fl.Karnataka 2:98.1996;Cooke, Fl. Bombay 1:230.1902

Top of the Page