ಟೆರಿಗೋಟ ಅಲೇಟ (Roxb.) R. Brown - ಸ್ಟರ್ಕ್ಯೂಲಿಯೇಸಿ

ಪರ್ಯಾಯ ನಾಮ : ಸ್ಟರ್ಕ್ಯೂಲಿಯ ಅಲೇಟ Roxb.

Vernacular names : Tamil: ಆನತೊಂಡಿ, ಕಾವಲಂ,ಕೊಡತಣ್ಣಿ,ಪೋತೊಂಡಿ,ಪೂಲ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ. ಎತ್ತರದವರೆಗಿನ ಎಲೆಯುದುರು ಮಾದರಿಯ,ಆನಿಕೆಗಳನ್ನುಳ್ಳ ದೊಡ್ಡ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು,ಉದ್ದ ಸಾಲಿನಲ್ಲಿ ವ್ಯವಸ್ಥಿತಗೊಂಡ ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ;ಕಚ್ಚು ಮಾಡಿದ ಜಾಗ ಹಳದಿ ಮಿಶ್ರಿತ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದೃಢವಾಗಿದ್ದು,ದುಂಡಾಗಿರುತ್ತವೆ, ಚಿನ್ನದ -ಕಂದು ಬಣ್ಣದ ದಟ್ಟವಾದ ನಕ್ಷತ್ರರೂಪದ ರೋಮಗಳಿಂದ ಕೂಡಿದ್ದು,ನಂತರ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಕಾವಿನೆಲೆಗಳು ಪಾರ್ಶ್ವದಲ್ಲಿದ್ದು, ಉದುರಿದ ನಂತರ ಗುರುತು ಉಳಿಸುವ ಮಾದರಿಯವುಗಳಾಗಿರುತ್ತವೆ; ತೊಟ್ಟುಗಳು 5-10 ಸೆಂ.ಮೀ. ಉದ್ದವಿದ್ದು, ದುಂಡಾಗಿರುತ್ತವೆ,ಮೇಲಿನ ತುದಿಯಲ್ಲಿ ಉಬ್ಬಿಕೊಂಡಿರುತ್ತವೆ; ಪತ್ರಗಳು10–20(-30)X 7.6 – 14(20) ಸೆಂ.ಮೀ. ಗಾತ್ರ, ವಿಶಾಲವಾದ ಅಂಡ ಅಥವಾ ಚತುರಸ್ರ-ಅಂಡದ ಆಕಾರ ಹೊಂದಿದ್ದು,ಚೂಪಾದ ಅಥವಾ ಸ್ವಲ್ಪ ಮಟ್ಟಿಗೆ ಕ್ರಮೇಣ ಚೂಪಾಗುವ ತುದಿ, ಹೃದಯದ ಆಕಾರದ ಅಥವಾ ಉಪ-ಛಿನ್ನಾಗ್ರದ ಮಾದರಿಯ ಬುಡ, ನಯವಾದ ಅಥವಾ ಕೊಂಚ ತರಂಗಿತವಾದ ಅಂಚು ಹೊಂದಿರುತ್ತವೆ,ಪತ್ರದ ಮೇಲ್ಮೈ ತೆಳು ತೊಗಲನ್ನೋಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ;ಪತ್ರದ ಬುಡದಲ್ಲಿ 5 ನಾಳಗಳಿರುತ್ತವೆ;ಎರಡನೇ ದರ್ಜೆಯ ನಾಳಗಳು 3 - 4 ಜೋಡಿಗಳಿದ್ದು ಆರೋಹಣ ಮಾದರಿಯಲ್ಲಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಂತರ ಹೊಂದಿದ ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಕಿರು ಗಾತ್ರದ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯಲ್ಲಿದ್ದು ಹಳೆಯ ಕವಲುಗಳ ಮೇಲೆ ಇರುತ್ತವೆ ಹಾಗೂ ತುಕ್ಕು ಛಾಯೆಯುಳ್ಳ ಕಂದು ಬಣ್ಣದ ದಟ್ಟ ಮೃದುತಪ್ಪಳದಿಂದ ಕೂಡಿರುತ್ತವೆ;ಹೂಗಳು ಸಂಕೀರ್ಣಲಿಂಗಿಗಳು.
ಕಾಯಿ / ಬೀಜ : ಸೋತ ಫಲಗಳು 3-5, ಇದ್ದು ,12.5 X 9 ಸೆಂ.ಮೀ. ಗಾತ್ರ ಹೊಂದಿದ್ದು,ಗೋಳಾಕಾರ ಅಥವಾ ಅಂಡಾಕಾರದಲ್ಲಿರುತ್ತವೆ ಮತ್ತು ದಾರುವಿನ ಮಾದರಿಯಲ್ಲಿರುತ್ತವೆ; ಬೀಜಗಳ ಸಂಖ್ಯೆ 30 ಇದ್ದು ರೆಕ್ಕೆಯುಕ್ತವಾಗಿರುತ್ತವೆ.

ಜೀವಪರಿಸ್ಥಿತಿ :

700 ಮೀ. ವರೆಗಿನ ಎತ್ತರದ ಪ್ರದೇಶಗಳ ಭಗ್ನಗೊಂಡ ನಿತ್ಯ ಹರಿದ್ವರ್ಣ ಕಾಡುಗಳ ಹೊರಹೊಮ್ಮುವ ಅಥವಾ ಮೇಲ್ಛಾಣಿ ಮರಗಳಾಗಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ದಕ್ಷಿಣ ಏಷ್ಯಾ ಮತ್ತು ಮ್ಯಾನ್ಮಾರ್; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Bennett & Br., Pl. Jav. Rar. 234. 1844; Gamble, Fl. Madras 1: 104. 1997 (re. ed); Sasidharan, Biodiversity documentation for Kerala- Flowering Plants, part 6: 59. 2004.

Top of the Page