ಸ್ಪಾಂಡಿಯಾಸ್ ಪಿನ್ನೇಟ (L. f.) Kurz. - ಅನಕಾರ್ಡಿಯೇಸಿ

Synonym : ಮ್ಯಾಂಜಿಫೆರ ಪಿನ್ನೇಟ (L.f.) ಮತ್ತು ಸ್ಪಾಂಡಿಯಾಸ್ ಮ್ಯಾಂಜಿಫೆರ Willd.

ಕನ್ನಡದ ಪ್ರಾದೇಶಿಕ ಹೆಸರು : ಅಬಟ್ಟಿ ಮರ, ಅಮಟೆಕಾಯಿಮರ, ಗೊಡ್ಡಮಟೆ, ಗೊಡ್ಡದ ಕಾಯಿ, ಕಾಡಂಬಟ್ಟಿ, ಕೊಡಲಿ ಮಾವು, ಮರಹುಣಿಸೆ, ಮುತ್ತಿಗ, ಪೂಂಡಿ, ವೃಕ್ಷಾಮ್ಲ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 27 ಮೀ ಎತ್ತರದವರೆಗೂ ಬೆಳೆಯುವ, ಎಲೆಯುದುರುವ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ಮತ್ತು ತೊಗಟೆ ನಯವಾಗಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಗುಂಡಾಕಾರದಲ್ಲಿದ್ದು ರೋಮರಹಿತವಾಗಿರುತ್ತದೆ.
ಎಲೆಗಳು : 18 ರಿಂದ 50ಸೆಂ.ಮೀ. ಉದ್ದವಿದ್ದು, ಎಲೆಗಳು ಅಸಮಸಂಖ್ಯೆಯ ಸಂಯುಕ್ತಗರಿ ರೂಪಿ ಸಂಯುಕ್ತ ಮಾದರಿಯಲ್ಲಿದ್ದು ಪರ್ಯಾಯವಾಗಿ ಜೋಡಣೆಯಾಗಿದ್ದು, ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ. ಎಲೆ ತೊಟ್ಟು 5 ರಿಂದ 15 ಸೆಂ.ಮೀ. ಉದ್ದವಿರುತ್ತದೆ. ಕಿರುಎಲೆಗಳು 4 ರಿಂದ 5 ಜೋಡಿಗಳಿದ್ದು ಒಂದುಕಿರು ಎಲೆ ಅಗ್ರಸ್ಥಾನದಲ್ಲಿರುತ್ತದೆ. ಕಿರು ಎಲೆಗಳ ತೊಟ್ಟು 1 ಸೆಂ.ಮೀ. ವರೆಗಿನ ಉದ್ದವಾಗಿರುತ್ತದೆ. ಕಿರುಎಲೆ ಪತ್ರಗಳು 6 - 14 × 5-7 ಸೆಂ.ಮೀ. ಗಾತ್ರ ಹಾಗೂ ಅಂಡ ವೃತ್ತಾಕೃತಿಯಿಂದ ದೀರ್ಘ ಚತುರಸ್ರಾಕಾರದವರೆಗಿನ ಆಕಾರದಲ್ಲಿರುತ್ತದೆ. ಕಿರುಎಲೆ ಪತ್ರಗಳು ಬಾಲರೂಪಿಯಿಂದ ಕ್ರಮೇಣ ಚೂಪಾಗುವ ತುದಿ ಹಾಗೂ ಓರೆಯಾಗಿ ಗುಂಡಾದ ಬುಡ, ನಯವಾದ ಅಂಂಚು, ಪೊರೆ ರೀತಿಯ ಅಥವಾ ಉಪತೊಗಲಿನಂತಹ ಮೇಲ್ಮೈ ಹೊಂದಿರುತ್ತವೆ. ಎರಡನೇ ದರ್ಜೆಯ ನಾಳಗಳು ಸುಮಾರು 18 ಜೋಡಿಯಿದ್ದು ಅಂತರ ಅಂಚಿನ ನಾಳಗಳನ್ನು ಸಂಧಿಸುತ್ತವೆ. ಮೂರನೇ ದರ್ಜೆಯ ನಾಳಗಳು ಎಲೆಯ ಅಕ್ಷದ ದಿಕ್ಕಿಗಿರುತ್ತದೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಪುನರಾವೃತ್ತಿಯಾಗಿ ಕವಲೊಡೆಯುವ ಅಕ್ಷಾಕಂಕುಳನಲ್ಲಿರುತ್ತವೆ. ಹೂಗಳು ಬಿಳಿಯ ಬಣ್ಣದವು. ಹಾಗೂ ಸಂಕೀರ್ಣ ಲಿಂಗಿಗಳಾಗಿದ್ದು ತೊಟ್ಟು ರಹಿತವಾಗಿರುತ್ತವೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯವು, ಹಾಗೂ ಗುಂಡಾಗಿದ್ದು 1.5-5 × 1-3.5 ಸೆಂ.ಮೀ. ಗಾತ್ರ ಹೊಂದಿದ್ದು, ಸುವಾಸನಾಯುಕ್ತವಾಗಿದ್ದು 1 ರಿಂದ 3 ಬೀಜಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

ನಿತ್ಯ ಹರಿದ್ವರ್ಣದ ಹಾಗೂ ತೇವಾಂಶಯುಕ್ತ ಉದುರೆಲೆ ಕಾಡುಗಳಲ್ಲಿ ಆಗಾಗ ಕಾಣಸಿಗುತ್ತವೆ.

ವ್ಯಾಪನೆ :

ಪೂರ್ವಾರ್ಧ ಗೋಳದ ಉಷ್ಣ ಪ್ರದೇಶಗಳು; ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲೂ ಈ ಸಸ್ಯ ಕಂಡುಬರುತ್ತವೆ.

ಗ್ರಂಥ ಸೂಚಿ :

Prelim. Rep. For. & Veg. Pegu. App. A. 44 & B.42. 1875; Keshava Murthy and Yoganarasimhan, Fl. Coorg (Kodagu)126. 1990.; Gamble, Fl. Madras 1: 259.1997 (re.ed); Cook, Fl. Bombay 1:281. 1902; Sasidharan, Biodiversity documentation for Kerala- Flowering Plants, part 6: 114. 2004; Saldanha, Fl. Karnataka 2: 209. 1996

Top of the Page