ಸೈಝೀಸಿಯಂ ಕ್ಯುಮಿನಿ (L.) Skeels - ಮಿರ್ಟೇಸಿ

ಪರ್ಯಾಯ ನಾಮ : ಮಿರ್ಟಸ್ ಕ್ಯುಮಿನಿ L.; ಯೂಜೀನಿಯ ಜಾಂಬೋಲಾನ Lam.; ಸೈಝೀಸಿಯಂ ಜಾಂಬೋಲಾನ (Lam..)DC.

Vernacular names : Tamil: ನರ,ನರಕುರುನ್ನು,ನರತೋಲಿ,ನವಲ್,ನವಲ್ ಪಳಂ,ಪೆರಿನ್ನಾರಲ್,ವಳಿಯನವಲ್,ಕಾಟ್ಟುಚಂಪ,ನಗMalayalam: ಜಂಬು ನೇರಳೆ,ನಾಯಿನೇರಳೆ,ನೇರಳೆ,ನೇರಳು

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆಗೆ ಬೆಳೆಯುವ ದೊಡ್ಡ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಅಥವಾ ಕಂದು ಬಣ್ಣ ಹೊಂದಿದ್ದು ಅನಿಯತವಾಗಿ ಚಕ್ಕೆಯೇಳುತ್ತವೆ;ಕಚ್ಚು ಮಾಡಿದ ಜಾಗ ಕಂದು ಬಣ್ಣದಲ್ಲಿರುತ್ತದೆ
ಕವಲುಗಳು ಮತ್ತು ಕಿರುಕೊಂಬೆಗಳು : ಎಳ ಕಿರುಕೊಂಬೆಗಳು ಉಪದುಂಡಾಗಿರುವುದರಿಂದ ಹಿಡಿದು ಕೊಂಚ 4-ಕೋನಗಳನ್ನು ಒಳಗೊಂಡ ಮಾದರಿಯಲ್ಲಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖವಾಗಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ; ತೊಟ್ಟುಗಳು 1 -2.5 ಸೆಂ.ಮೀ. ವರೆಗಿನ ಉದ್ದಹೊಂದಿದ್ದು ಕಾಲುವೆಗೆರೆ ಸಮೇತವಿರುತ್ತವೆ ಮತ್ತುರೋಮರಹಿತವಾಗಿರುತ್ತವೆ;ಪತ್ರಗಳು7 – 15 X 3 – 7 ಸೆಂ.ಮೀ.ವರೆಗಿನ ಗಾತ್ರವಿದ್ದು ಆಕಾರದಲ್ಲಿ ವೈವಿಧ್ಯತೆ ಹೊಂದಿರುತ್ತವೆ, ಅಂಡವೃತ್ತದಿಂದ ಹಿಡಿದು ಅಗಲವಾದ ಅಂಡವೃತ್ತ ಅಥವಾ ಸಂಕುಚಿತ ಅಂಡ- ಚತುರಸ್ರದವರೆಗಿನ ಆಕಾರ ಹೊಂದಿದ್ದು, ಮೊಂಡಾಗ್ರವುಳ್ಳ ಕ್ರಮೇಣ ಚೂಪಾಗುವ ಮಾದರಿಯ ತುದಿ,ಚೂಪಾದುದರಿಂದ ಹಿಡಿದು ಒಳಬಾಗಿದ ಅಥವಾ ದುಂಡಾದ ಮಾದರಿವರೆಗಿನ ಬುಡ,ನಯವಾದ ಅಂಚು,ಪ್ರಕಾಶ ಭೇಧ್ಯ ರಸಗ್ರಂಥಿ ಚುಕ್ಕೆಗಳನ್ನು ಹೊಂದಿದ್ದು (ಕೆಲವು ವೇಳೆ ರಸಗ್ರಂಥಿಗಳು ದಪ್ಪವಾದ ಎಲೆಗಳಲ್ಲಿ ಅಸ್ಪಷ್ಟವಾಗಿರುತ್ತವೆ) ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ;ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ; ಅಂಚಿನ ನಾಳಗಳು ಇರುತ್ತವೆ; ಎರಡನೇ ದರ್ಜೆಯ ನಾಳಗಳು ಅನೇಕವಿದ್ದು ಹತ್ತಿರವಾಗಿರುತ್ತವೆ ಹಾಗೂ ಸಮಾಂತರದಲ್ಲಿರುತ್ತವೆ ;ಮೂರನೇ ದರ್ಜೆಯ ನಾಳಗಳು ಎಲೆಯ ಅಕ್ಷದ ಕಡೆಗೆ ಕವಲುಗೊಂಡಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಉದುರಿದ ಎಲೆಗಳ ಅಕ್ಷಾಕಂಕುಳಿಲ್ಲಿದ್ದು , ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾರಂಭಿ ನೀಳ ಛತ್ರ ಮಾದರಿಯಲ್ಲಿರುತ್ತವೆ;ಹೂಗಳು ಬಿಳಿ ಬಣ್ಣದಲ್ಲಿರುತ್ತವೆ.
ಕಾಯಿ / ಬೀಜ : ಬೆರ್ರಿ ಫಲಗಳು ಗೋಳಾಕಾರ ಅಥವಾ ಚತುರಸ್ರದ ಆಕಾರದಲ್ಲಿದ್ದು ಮುಕುಟದಲ್ಲಿ ಶಾಶ್ವತವಾಗಿ ಉಳಿಯುವ ಪುಷ್ಪಪಾತ್ರೆಯ ಸಮೇತವಿರುತ್ತವೆ ಮತ್ತು ಕೆನ್ನೀಲಿ ಬಣ್ಣ ಹೊಂದಿದ್ದು ತಿನ್ನಲು ಯೋಗ್ಯವಾಗಿರುತ್ತವೆ;ಬೀಜ ಒಂದು

ಜೀವಪರಿಸ್ಥಿತಿ :

ನಿತ್ಯ ಹರಿದ್ವರ್ಣ ಕಾಡುಗಳಿಂದ ಹಿಡಿದು ಯೆಲೆಯುದುರು ಮಾದರಿಯ ಕಾಡುಗಳವರೆಗೆ ಪಶ್ಚಿಮ ಘಟ್ಟದಲ್ಲಿನ ಅಡ್ಡಗಲಕ್ಕೂ ವ್ಯಾಪಕವಾಗಿದ್ದು ಬಯಲು ಸೀಮೆಯಲ್ಲೂ ಈ ಪ್ರಭೇದ ಕಂಡುಬರುತ್ತದೆ ಹಾಗೂ ಈ ಪ್ರಭೇದಗವನ್ನು ಶಾಲುಮರಗಳಾಗಿ ಬೆಳೆಸುತ್ತಾರೆ.

ವ್ಯಾಪನೆ :

ಇಂಡೋಮಲೇಸಿಯ;ಪಶ್ಚಿಮ ಘಟ್ಟದಲ್ಲಿನ ಎಲ್ಲಾ ಫ್ರದೇಶಗಳಲ್ಲಿ ಈ ಸಸ್ಯ ವ್ಯಾಪಿಸಿದೆ.

ಗ್ರಂಥ ಸೂಚಿ :

Bur. Pl. Industr. Bull. 248:2.1912;Gamble, Fl. Madras 1:481.1997(rep.ed.); Sasidharan, Biodiversity documentation for Kerala- Flowering Plants, part 6:176.2004.

Top of the Page