ಟಬರ್ನೆಮೊಂಟಾನ ಗ್ಯಾಂಬ್ಲಿಯೈ Subram. & Henry - ಅಪೋಸೈನೇಸಿ

Synonym : ಎರ್ವಟಾಮಿಯ ಕಾಡೇಟ Gamble

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5ಮೀ ಎತ್ತರದವರೆವಿಗೆ ಬೆಳೆಯುವ ಸಣ್ಣ ಮರಗಳು ಅಥವಾ ಪೊದೆಗಳು.
ಜಿನುಗು ದ್ರವ : ಸಸ್ಯಕ್ಷೀರ ಹಾಲಿನ ಶ್ವೇತಬಣ್ಣ ಹೊಂದಿರುತ್ತದೆ.
ಎಲೆಗಳು : ಎಲೆಗಳು ಸರಳ ಮತ್ತು ಅಭಿಮುಖಿಗಳಾಗಿದ್ದು, ಜೋಡಿಗಳು ಅಸಮ ಹಾಗೂ ಕತ್ತರಿಯಾಕಾರದ ಜೋಡನಾ ವ್ಯವಸ್ಥೆಯಲ್ಲಿರುತ್ತವೆ. ಎಲೆತೊಟ್ಟು 1ಸೆಂ.ಮೀ ಉದ್ದವಿದ್ದು ಬುಡದಲ್ಲಿ ಚಿಕ್ಕದಾದ ಅಪ್ಪು ಒರೆಗಳನ್ನು ಹೊಂದಿರುತ್ತದೆ; ಪತ್ರಗಳು 6.5 - 12 x 2.4 - 4.5ಸೆಂ.ಮೀ. ಗಾತ್ರದಲ್ಲಿದ್ದು, ಅಂಡವೃತ್ತ ಅಥವಾ ಅಂಡವೃತ್ತ ಭರ್ಜಿಯಾಕಾರ ಹೊಂದಿರುತ್ತವೆ. ಎಲೆತುದಿ ಬಾಲರೂಪಿ-ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು 2 ಸೆಂ.ಮೀ. ವರೆಗಿನ ಉದ್ದದ ಅಗ್ರವನ್ನು ಹೊಂದಿರುತ್ತದೆ. ಎಲೆಬುಡ ಚೂಪಾಗಿರುತ್ತದೆ, ಪತ್ರವು ರೋಮರಹಿತವಾಗಿರುತ್ತದೆ. ಹಾಗೂ ತಳಭಾಗದಲ್ಲಿ ಮಬ್ಬಾದ ಬಣ್ಣವನ್ನು ಹೊಂದಿರುತ್ತದೆ; ಮಧ್ಯನಾಳಗಳು ಪತ್ರದ ಮೇಲ್ಭಾಗದಲ್ಲಿ ಉಬ್ಬಿಕೊಂಡಿರುತ್ತವೆ; ಎರಡನೇ ದರ್ಜೆಯ ನಾಳಗಳು 7-9 ಜೋಡಿಗಳಿದ್ದು ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ದ್ವಿಲಿಂಗಿಗಳು ಹಾಗೂ ಶ್ವೇತ ವರ್ಣದವುಗಳಾಗಿದ್ದು ತುದಿಯಲ್ಲಿರುವ ಮಧ್ಯಾರಂಭಿ ನೀಳಛತ್ರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು ಫಾಲಿಕಲ್ ಪುಂಜಫಲ ಮಾದರಿಯವು. 4 x 1ಸೆಂ.ಮೀ. ಗಾತ್ರವನ್ನು ಹೊಂದುವ ಕಾಯಿಗಳು ಚತುರಸ್ರಾಕಾರದಲ್ಲಿದ್ದು ಬಾಲರೂಪಿ ಅಗ್ರವನ್ನು ಹೊಂದಿರುತ್ತವೆ ಹಾಗೂ ಹೆಚ್ಚಿನ ಸಂಖ್ಯೆಯ ಪತ್ರೆಯಿಂದ ಕೂಡಿದ ಬೀಜಗಳ ಸಮೇತವಿರುತ್ತವೆ.

ಜೀವಪರಿಸ್ಥಿತಿ :

ಒಳಛಾವಣಿಯ ಮರಗಳಾಗಿ ಅಥವಾ ಪೊದೆಗಳಾಗಿ ಬೆಳೆಯುವ ಈ ಪ್ರಬೇಧ 600 ರಿಂದ 1400ಮೀ ಮಧ್ಯಮ ಎತ್ತರದ ಪ್ರದೇಶಗಳಲ್ಲಿನ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮಘಟ್ಟದ ದಕ್ಷಿಣ ಸಹ್ಯಾದ್ರಿ ಪ್ರದೇಶಕ್ಕೆ ಈ ಪ್ರಭೇದ ಸೀಮಿತ.

ಸ್ಥಿತಿ :

ಕಡಿಮೆ ಅಪಾಯ ಸಂಭವ ಸ್ಥಿತಿ: ರಕ್ಷಣೆ ಮೇಲೆ ಈ ಪ್ರಭೇದ ಉಳಿವು ಅವಲಂಬಿಸಿದೆ.

ಗ್ರಂಥ ಸೂಚಿ :

Bull. Bot. Sur. India 12: 1. 1970; Gamble, Fl. Madras 2: 813. 1997 (re. ed); Sasidharan, Biodiversity documentation for Kerala- Flowering Plants, part 6: 285-286. 2004.

Top of the Page