ಟೆಟ್ರಾಮೆಲಿಸ್ ನ್ಯೂಡಿಫ್ಲೋರ R.Br. - ಡ್ಯಾಟಿಸ್ಕೇಸಿ

Synonym : ಟೆಟ್ರಾಮೆಲಿಸ್ ಗ್ರಹಾಮಿಯಾನ Wt.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 40 ಮೀ. ಎತ್ತರದವರೆಗೆ ಬೆಳೆಯುವ, ಆನಿಕೆಯುಳ್ಳ, ಎಲೆಯುದುರುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಬಿಳಿ ಬಣ್ಣ ಹೊಂದಿದ್ದು ನಯವಾಗಿರುತ್ತದೆ ; ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು,ಸೂಕ್ಷ್ಮ ವಾಯುವಿನಿಮಯ ಬೆಂಡುರಂಧ್ರಸಮೇತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ತೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿರುತ್ತವೆ;ತೊಟ್ಟುಗಳು10ಸೆಂ.ಮೀ.ಉದ್ದವಾಗಿದ್ದು,ಮೃದುತುಪ್ಪಳದಿಂದ ಕೂಡಿರುತ್ತವೆ; ಪತ್ರಗಳು12X10ಸೆಂ.ಮೀ.ವರೆಗಿನ ಉದ್ದವಿದ್ದು, ವಿಶಾಲವಾದ ಅಂಡಾಕಾರದಿಂದ ಹಿಡಿದು ದುಂಡಾಕಾರ- ದವರೆಗಿನ ಆಕಾರದಲ್ಲಿರುತ್ತವೆ, ತುದಿ ಕ್ರಮೇಣ ಚೂಪಾಗುವ ರೀತಿಯಲ್ಲಿದ್ದು ಬುಡ ಹೃದಯಾಕಾರದಲ್ಲಿರುತ್ತದೆ, ಅಂಚು ಅನಿಯತವಾಗಿ ದಂತಿತವಾಗಿರುತ್ತದೆ, ಮೇಲ್ಮೈ ಉಪ-ತೊಗಲಿನ ಮಾದರಿಯಲ್ಲಿದ್ದು ಪತ್ರದ ಮೇಲ್ಭಾಗ ರೋಮರಹಿತವಾಗಿದ್ದು ತಳಭಾಗ ಮೃದುತುಪ್ಪಳದಿಂದ ಕೂಡಿರುತ್ತದೆ;ಪತ್ರದ ಬುಡಭಾಗದಲ್ಲಿ ಮೂರರಿಂದ 5 ನಾಳಗಳಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಹೆಣ್ಣು ಮತ್ತು ಗಂಡು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ;ಗಂಡು ಹೂಗಳು ಹಸಿರು ಮಿಶ್ರಿತ ಹಳದಿ ಬಣ್ಣ ಹಾಗೂ ಉಪ-ತೊಟ್ಟು ರಹಿತವಾಗಿರುತ್ತವೆ ಹಾಗೂ ಮೃದುತುಪ್ಪಳದಿಂದ ಕೂಡಿದ ಪುನರಾವೃತ್ತಿಯಾಗಿ ಕವಲೊಡೆಯುವ ಪುಷ್ಪಮಂಜರಿಯಲ್ಲಿರುತ್ತವೆ;ಹೆಣ್ಣು ಹೂಗಳು ತೊಟ್ಟು ರಹಿತವಾಗಿದ್ದು ಕದಿರು ಮಂಜರಿಯಲ್ಲಿರುತ್ತವೆ
ಕಾಯಿ /ಬೀಜ : ಕಾಯಿಗಳು 0.4 ಸೆಂ.ಮೀ,ವರೆಗಿನ ಉದ್ದವನ್ನು ಹೊಂದಿದ್ದು ಸಂಪುಟ ಮಾದರಿಯಲ್ಲಿರುತ್ತವೆ ಹಾಗೂ ತೀರಾ ತೆಳುವಾದ 8 ಉಬ್ಬಿದ ಗೆರೆಗಳ ಸಮೇತವಿರುತ್ತವೆ ಮತ್ತು ಹೂಜಿ ಆಕಾರದಲ್ಲಿರುತ್ತವೆ;ಬೀಜಗಳು ಅನೇಕವಿದ್ದು ಸೂಕ್ಷ್ಮವಾದ ಗಾತ್ರವನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

900 ಮೀ. ಎತ್ತರದವರೆಗಿನ ನಿತ್ಯಹರಿದ್ವರ್ಣ ಹಾಗೂ ಅರೆ ನಿತ್ಯಹರಿದ್ವರ್ಣ ಕಾಡುಗಳ ತೆರೆದ ಭಾಗಗಳಲ್ಲಿ ಹೊರಹೊಮ್ಮಿ ಕಾಣುವ ಮರಗಳಾಗಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಹಳೆಯ ಉಷ್ಣವಲಯ;ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ

ಗ್ರಂಥ ಸೂಚಿ :

Benn.Pl. Jav.Rar.79.17.1838;Gamble,Fl.Madras 1:544.1997(re.ed.); Sasidharan, Biodiversity documentation for Kerala- Flowering Plants, part 6:201.2004; Saldanha, Fl.Karnataka 2;291.1996

Top of the Page