ಟ್ರೈಕ್ಯಾಲಿಸಿಯ ಎಪಿಯೋಕಾರ್ಪ (Dalz.) Gamble - ರೂಬಿಯೇಸಿ

Synonym :

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗಿನ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ಕೊರಕಲುಗಳ ಸಮೇತವಿರುತ್ತವೆ;ತೊಗಟೆ ಬೂದು ಬಣ್ಣ ಹೊಂದಿದ್ದು, ಪ್ರಮುಖವಾಗಿ ಸೀಳಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಚತುಷ್ಕೋನಯಕ್ತವಾಗಿರುತವಾಗಿರುತ್ತವೆ,ರೋಮರಹಿತ -ವಾಗಿರುತ್ತವೆ; ಅಂಕುರ ಮೊಗ್ಗು ಸಾಮಾನ್ಯವಾಗಿ ಹಳದಿ ಬಣ್ಣದ ಅಂಟು ದ್ರವನ್ನು ಒಸರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ, ಕಾವಿನೆಲೆಗಳು ಸಂಕುಚಿತ ತ್ರಿಕೋನಾಕಾರದಲ್ಲಿದ್ದು 0.7 ಸೆಂ.ಮೀ ವರೆಗಿನ ಉದ್ದ ಹೊಂದಿರುತ್ತವೆ;ತೊಟ್ಟು 0.6 –1.5 ಸೆಂ.ಮೀ.ವರೆಗಿನ ಉದ್ದವಿದ್ದು, ಸ್ವಲ್ಪಮಟ್ಟಿಗೆ ಮೇಲ್ಭಾಗದಲ್ಲಿ ಕಾಲುವೆ ಗೆರೆಯನ್ನು ಹೊಂದಿರುತ್ತದೆ ಹಾಗೂ ರೋಮರಹಿತವಾಗಿರುತ್ತವೆ; ಪತ್ರಗಳು 5 -10 X 1.5 – 3.5 ಸೆಂ.ಮೀ. ಗಾತ್ರ ಹೊಂದಿದ್ದು, ಅಂಡವೃತ್ತದಿಂದ ಅಂಡವೃತ್ತ-ಅಂಡದವರೆಗಿನ ಆಕಾರ ಹೊಂದಿದ್ದು, ಮೊಂಡಾಗ್ರವುಳ್ಳ ಕ್ರಮೇಣ ಚೂಪಾಗುವ ತುದಿ, ಒಳಬಾಗಿದ ಬುಡ, ನಯವಾದ ಅಂಚು ಹೊಂದಿದ್ದು ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ತಳಭಾಗದಲ್ಲಿ ರೋಮರಹಿತವಾಗಿರುತ್ತವೆ ಮತ್ತು ಎರಡನೇ ದರ್ಜೆಯ ನಾಳಗಳ ಅಕ್ಷಾಕಂಕುಳಿನಲ್ಲಿ ರೋಮಸಹಿತವಾದ ಸೂಕ್ಷ್ಮ ಸಹಜೀವಿ ಗೂಡುಗಳ ಸಮೇತವಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತವೆ;ಎರಡನೇ ದರ್ಜೆಯ ನಾಳಗಳು 5 ರಿಂದ 6 ಜೋಡಿಗಳಿದ್ದು;ಮೂರನೇ ದರ್ಜೆಯ ನಾಳಗಳು ಲಂಬರೇಖೆಗೆ ಸಮಕೋನದಲ್ಲಿರುತ್ತವೆ ಮತ್ತು ಜಾಲಬಂಧ ವಿನ್ಯಾಸ ಹೊಂದಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತಹವುಗಳು.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಸಣ್ಣ ಗಾತ್ರದ ಮಧ್ಯಾರಂಭಿ ಮಾದರಿಯವು;ಹೂಗಳು ಸಂಕೀರ್ಣಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣುಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ,ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು ಅಂಡ ಅಥವಾ ಗೋಳಾಕಾರದಲ್ಲಿರುತ್ತವೆ;ಬೀಜಗಳ ಸಂಖ್ಯೆ ಹಲವಾರು ಇದ್ದು ಅನಿಯತವಾಗಿ ಸಂಕುಚಿತವಾಗಿರುತ್ತವೆ ಮತ್ತು ಸ್ವಲ್ಪ ಮಟ್ಟಿಗೆ ಸುಕ್ಕು ಸುಕ್ಕಾದ ಮೇಲ್ಮೈ ಹೊಂದಿರುತ್ತವೆ.

ಜೀವಪರಿಸ್ಥಿತಿ :

900 ಮತ್ತು 1200ಮೀ. ನಡುವಿನ ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣದಿಂದ ಒಣ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ,ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರ ಸಹ್ಯಾದ್ರಿಯಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಸ್ಥಿತಿ :

ಉಳಿವಿನ ಅತ್ಯಂತ ಆತಂಕಕಾರಿ ಸ್ಥಿತಿ(IUCN,2000).

ಗ್ರಂಥ ಸೂಚಿ :

Bot. Tidsskr. 24: 332. 1902; Gamble, Fl. Madras 2: 613. 1993 (re. ed); Sasidharan, Biodiversity documentation for Kerala- Flowering Plants, part 6: 237. 2004; Almeida, Fl. Maharashtra 3:59. 2001;Cooke, Fl. Bombay 1: 604.1903.

Top of the Page