ಅಗ್ಲೇಯಿಯ ಏಪಿಯೋಕಾರ್ಪ (Thw.) Hiern - ಮೀಲಿಯೇಸಿ

Synonym : ಮಿಲ್ನಿಯ ಏಪಿಯೋಕಾರ್ಪ Thw.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆಗೆ ಬೆಳೆಯುವ ಆನಿಕೆಗಳನ್ನುಳ್ಳ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ತೆಳು ನಸುಗೆಂಪು ಮಿಶ್ರಿತ ಕಂದು ಬಣ್ಣದಲ್ಲಿದ್ದು ಶಲ್ಕೆಗಳ ಸಮೇತವಿರುತ್ತದೆ; ಕಚ್ಚು ಮಾಡಿದ ಜಾಗ ಕೆಂಪಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ದಟ್ಟವಾದ ಮಧ್ಯ ಭಾಗದಲ್ಲಿ ತೊಟ್ಟಿರುವ ಮತ್ತು ಕೆಂಪು ಮಿಶ್ರಿತ ಕಂದು ಬಣ್ಣ ಹೊಂದಿರುವ ಹಾಗೂ ಅಂಚುಳ್ಳ ಶಲ್ಕೆಗಳ ಸಮೇತವಾಗಿರುತ್ತವೆ ಹಾಗೂ ವಾಯುವಿನಿಮಯ ಬೆಂಡು ರಂಧ್ರಗಳನ್ನು ಹೊಂದಿರುತ್ತವೆ.
ಜಿನುಗು ದ್ರವ : ಸಸ್ಯ ಕ್ಷೀರ ಬಿಳಿ ಬಣ್ಣದಲ್ಲಿದ್ದು ವಿಫುಲವಾಗಿರುವುದಿಲ್ಲ.
ಎಲೆಗಳು : ಎಲೆಗಳು ಸಂಯುಕ್ತಪರ್ಣಿಗಳಾಗಿದ್ದು ಗರಿರೂಪದಲ್ಲಿರುತ್ತವೆ ಮತ್ತು 42ಸೆಂ.ಮೀ. ಉದ್ದ ಮತ್ತು 26ಸೆಂ.ಮೀ. ಅಗಲ ಹೊಂದಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ತೊಟ್ಟುಗಳು 15 ಸೆಂ.ಮೀ. ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಮತ್ತು ಶಲ್ಕೆಗಳಿಂದ ಆವೃತವಾಗಿದ್ದು ಉದುರುವ ರೀತಿಯಲ್ಲಿರುತ್ತವೆ;ಕಿರುತೊಟ್ಟುಗಳು ಪಾರ್ಶ್ವದ ಕಿರುಎಲೆಗಳಲ್ಲಿ0.2 -1.2 ಸೆಂ.ಮೀ. ಉದ್ದವಿದ್ದು ತುದಿಯಲ್ಲಿನ ಕಿರುಎಲೆಯಲ್ಲಿ 1.6 ಸೆಂ.ಮೀ.ವರೆಗಿನ ಉದ್ದವನ್ನು ಹೊಂದಿರುತ್ತವೆ;ಕಿರುಎಲೆಗಳು(3) 5- 9ಇರುತ್ತವೆ ಮತ್ತು ಸಾಮಾನ್ಯವಾಗಿ ಉಪಅಭಿಮುಖಿಗಳಾಗಿರುತ್ತವೆ ಅಪರೂಪವಾಗಿ ಪರ್ಯಾಯ ರೀತಿಯಲ್ಲಿರುತ್ತವೆ, ಪತ್ರಗಳು ವಿಶಾಲ ಅಂಡವೃತ್ತದ ಆಕಾರದಲ್ಲಿದ್ದು ಮೊಂಡಾಗ್ರವುಳ್ಳ ಕ್ರಮೇಣವಾಗಿ ಚೂಪಾಗುವ ರೀತಿಯ ತುದಿ ಹೊಂದಿದ್ದು ಬೆಣೆಯಾಕಾರದ ಬುಡ ಸಮೇತವಾಗಿರುತ್ತದೆ;ಪತ್ರಗಳು ತೊಗಲವನ್ನೋಲುವ ಮಾದರಿಯಲ್ಲಿರುತ್ತವೆ;ಅಂಚು ಹಿಂಬಾಗಿರುತ್ತದೆ;ಎಳೆಯದಾದ ಎಳೆಯ ಎಲೆಗಳ ಎರಡೂ ಬದಿಗಳು ಸಂಪೂರ್ಣವಾಗಿ ಮಧ್ಯಭಾಗದಲ್ಲಿ ತೊಟ್ಟಿರುವ ಶಲ್ಕೆಗಳಿಂದ ಆವೃತವಾಗಿರುತ್ತವೆ;ಮಧ್ಯನಾಳ ಮತ್ತು ಇತರೆ ನಾಳಗಳು ಪತ್ರದ ಎರಡೂ ಬದಿಗಳು ಮಧ್ಯಭಾಗದಲ್ಲಿ ತೊಟ್ಟಿರುವ ಶಲ್ಕೆಗಳಿಂದ ಆವೃತವಾಗಿರುತ್ತವೆ ಬಲಿತ ಪತ್ರಗಳ ತಳಭಾಗದಲ್ಲಿ ಶಲ್ಕೆಗಳು ವಿರಳವಾಗಿರುತ್ತವೆ;ಎರಡನೇ ದರ್ಜೆಯ ನಾಳಗಳು 7-10 ಜೋಡಿಗಳಿದ್ದು ಪ್ರಮುಖವಾಗಿರುವುದಿಲ್ಲ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲ ಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಹೊಟ್ಟು ರೂಪದ ಶಲ್ಕೆಗಳಿಂದ ಕೂಡಿದ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯ ಪುಷ್ಪಮಂಜರಿಗಳಲ್ಲಿರುತ್ತವೆ;ಗಂಡು ಹೂಗಳ ಪುಷ್ಪಮಂಜರಿ 9-26 ಸೆಂ.ಮೀ. ಉದ್ದವಿದ್ದು ಹೆಣ್ಣು ಹೂಗಳ ಪುಷ್ಪ ಮಂಜರಿ 5.5 ಸೆಂ.ಮೀ. ಉದ್ದವಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು 4 ಸೆಂ.ಮೀ. ಉದ್ದವಿದ್ದು ಬುಗುರಿ ಅಥವಾ ಉಪಗೋಳಾಕಾರದಲ್ಲಿದ್ದು ಅಗ್ರದಲ್ಲಿ ಸೂಕ್ಷ್ಮವಾದ ಮುಳ್ಳನ್ನು ಹೊಂದಿರುತ್ತವೆ ಮತ್ತು ಬಣ್ಣದಲ್ಲಿ ಕೆಂಪಾಗಿರುತ್ತವೆ ಹಾಗೂ 2 ಕೋಶಗಳನ್ನು ಹೊಂದಿದ್ದು ಒಂದು ಬೀಜವನ್ನೊಳಗೊಂಡಿರುತ್ತವೆ.

ವ್ಯಾಪನೆ :

ದಕ್ಷಿಣ ಭಾರತ ಮತ್ತು ಶ್ರೀಲಂಕಾ.

ಸ್ಥಿತಿ :

ದುರ್ಬಲ ಸ್ಥಿತಿ(IUCN 2000)

ಗ್ರಂಥ ಸೂಚಿ :

Hooker, Fl. Brit.India 1:555.1875;Panell, A taxonomic monograph of the genus Aglaia Lour.(Meliaceae),173.1992.

Top of the Page