ಅಗ್ಲೇಯಿಯ ಪರ್ವಿರಿಡಿಸ್ Hiern - ಮೀಲಿಯೇಸಿ

ಪರ್ಯಾಯ ನಾಮ : ಅಗ್ಲೇಯಿಯ ಮೇಯಿಯೆ Bourd.; ಅಗ್ಲೇಯಿಯ ಕೆನರೆನ್ಸಿಸ್ Gamble

Vernacular names : Tamil: ಚೆರುಚೊಕ್ಲ;ಕರಕಿಲ್

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ ಹೊಂದಿದ್ದು,ಪದರ ಕಳಚುವ ಅಥವಾ ಅವ್ಯವಸ್ಥಿತವಾದ ದೊಡ್ಡ ಚಕ್ಕೆ ರೂಪದಲ್ಲಿರುತ್ತದೆ,ಸೂಕ್ಷ್ಮ ವಾಯುವಿನಿಮಯ ಬೆಂಡು ರಂಧ್ರಗಳನ್ನು ಹೊಂದಿರುತ್ತದೆ; ಕಚ್ಚು ಮಾಡಿದ ಜಾಗ ಕೆಂಪುಮಿಶ್ರಿತ ಕಂದು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ಸೂಕ್ಷ್ಮ ವಾಯುವಿನಿಮಯ ಬೆಂಡು ರಂಧ್ರಗಳನ್ನು ಹೊಂದಿದ್ದು ಕೆಂಪುಮಿಶ್ರಿತ-ಕಂದು ಬಣ್ಣದ ಕೋಚ ಕೋಚವಾಗಿ ಸೀಳಿದ ಶಲ್ಕೆಗಳಿಂದ ದಟ್ಟವಾಗಿ ಆವೃತಗೊಂಡಿರುತ್ತದೆ.
ಜಿನುಗು ದ್ರವ : ಕತ್ತರಿಸಿದ ತೊಗಟೆಯ ತುದಿ ವಿಪುಲವಾಗಿರದ ಬಿಳಿ ಬಣ್ಣದ ಕ್ಷೀರವನ್ನು ಒಸರುತ್ತದೆ
ಎಲೆಗಳು : ಎಲೆಗಳು ಸಂಯುಕ್ತ ಮಾದರಿಯಲ್ಲಿದ್ದು ಸಾಮಾನ್ಯವಾಗಿ ಅಸಮ ಸಂಖ್ಯಾ ಗರಿ ರೂಪಿಗಳಾಗಿರುತ್ತವೆ, ಅಂದಾಜು 54 ಸೆಂ.ಮೀ. ಉದ್ದವಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ ಮತ್ತು ಉಬ್ಬಿದ ಎಲೆ ಬುಡದ ಸಮೇತವಿರುತ್ತದೆ ;ನಡುಕಾಂಡ ಮತ್ತು ಕಿರುತೊಟ್ಟುಗಳು (ಅಂದಾಜು 1 ಸೆಂ.ಮೀ. ಉದ್ದ) ಕೋಚ ಕೋಚವಾಗಿ ಸೀಳಿದ ಶಲ್ಕೆಗಳಿಂದ ಕೂಡಿರುತ್ತವೆ ;ಕಿರು ಎಲೆಗಳು 11 ರಿಂದ 13 ದ್ದು ಉಪ-ಅಭಿಮುಖಿಗಳಾಗಿದ್ದು, 7.5 - 23 X 2 -6 ಸೆಂ. ಮೀ.ವರೆಗಿನ ಗಾತ್ರ, ಚತುರಸ್ರ – ಈಟಿಯ ಆಕಾರ, ಕ್ರಮೇಣ ಚೂಪಾಗುವುದರಿಂದ ಬಾಲರೂಪಿ-ಕ್ರಮೇಣ ಚೂಪಾಗುವ ತುದಿ ,ಅಸಮ್ಮಿತಿಯಾದ ಬುಡ,ನಯವಾದ ಅಂಚು ಹೊಂದಿದ್ದು ತಳಭಾಗದಲ್ಲಿ ಮಧ್ಯನಾಳದ ಮೇಲೆ ಮಾತ್ರ ಶಲ್ಕೆಗಳಿದ್ದು ಉಳಿದಂತೆ ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 12 ರಿಂದ 18;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾಭಿಸರ ಮಾದರಿಯಲ್ಲಿದ್ದು ಕೆಲವು ಅಥವಾ ದಟ್ಟವಾಗಿ ಆವೃತಗೊಂಡ ಕೋಚ ಕೋಚವಾಗಿ ಸೀಳಿದ ಕೆಂಪು ಮಿಶ್ರಿತ ಕಂದು ಶಲ್ಕೆಗಳ ಸಮೇತವಿರುತ್ತವೆ; ಹೂಗಳು ಸಂಕೀರ್ಣ ಲಿಂಗಿಗಳಾಗಿದ್ದು ದ್ವಿಲಿಂಗಿ, ಹೆಣ್ಣು ಮತ್ತು ದ್ವಿಲಿಂಗಿ ಹಾಗೂ ಗಂಡು ಹೂಗಳು ಬೇರೆ ಬೇರೆ ಸಸ್ಯಗಳಲ್ಲಿರುತ್ತವೆ ಮತ್ತು ಉಪ-ತೊಟ್ಟು ಸಹಿತವಾಗಿರುತ್ತವೆ,ಹೂಗಳ ಬಣ್ಣ ಹಳದಿ; ಹೂಗಳು ಹಸಿರು ಮಿಶ್ರಿತ ಹಳದಿ ಬಣ್ಣ ಹೊಂದಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು ಅಂಡವೃತ್ತದ ಆಕಾರದಲ್ಲಿದ್ದು 3 ಸೆಂ.ಮೀ ವರೆಗಿನ ಉದ್ದವಿರುತ್ತವೆ ಮತ್ತು ಕೋಚ ಕೋಚವಾಗಿ ಸೀಳಿದ ಕೆಂಪು ಮಿಶ್ರಿತ ಕಂದು ಬಣ್ಣದ ಶಲ್ಕೆಗಳಿಂದ ದಟ್ಟವಾಗಿ ಆವೃತಗೊಂಡಿರುತ್ತವೆ; ಬೀಜಗಳು 1.

ಜೀವಪರಿಸ್ಥಿತಿ :

450 ರಿಂದ 900ಮೀ.ಎತ್ತರದವರೆಗಿನ ಪ್ರದೇಶಗಳಲ್ಲಿನ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಉಪಛಾವಣಿಯಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ಚೈನಾ; ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಸ್ಥಿತಿ :

ದುರ್ಬಲ ಸ್ಥಿತಿ (IUCN 2000).

ಗ್ರಂಥ ಸೂಚಿ :

Hooker, Fl. Brit. India 1:556. 1875;Pannell, A taxonomic monograph of the Genus Aglaia Lour. (Meliaceae), 198.1992;Gamble, Fl. Madras 180.1997(rep.ed.) ; Sasidharan, Biodiversity documentation for Kerala- Flowering Plants, part 6:88.2004.

Top of the Page