ಅಗ್ಲೇಯಿಯ ಟೊಮೆಂಟೋಸ Teijm & Binn. - ಮೀಲಿಯೇಸಿ

ಪರ್ಯಾಯ ನಾಮ : ಅಗ್ಲೇಯಿಯ ಎಕ್ಸ್ಟಿಪ್ಯುಲೇಟ (Griffith) Balakr.

Vernacular names : Tamil: ನೀರ್ಮುಳಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ.ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಆಳ ಹೊಂದಿರದ ಸೀಳಿಕಾ ವಿನ್ಯಾಸ ಹೊಂದಿದ್ದು ಕಂದು ಬಣ್ಣದಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕಂದು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ಕೆಂಪುಮಿಶ್ರಿತ ಬಣ್ಣದ,ದಟ್ಟವಾದ ಕೋಚ ಕೋಚವಾಗಿ ಸೀಳಿದ ಶಲ್ಕೆಗಳು ಮತ್ತು ನಕ್ಷತ್ರ ರೂಪದ ರೋಮಗಳಿಂದ ಕೂಡಿದ ರೋಮಾವರಣವನ್ನು ಹೊಂದಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ ಮಾದರಿಯವು, ಸಾಮಾನ್ಯವಾಗಿ ಅಸಮಸಂಖ್ಯಾ ಗರಿ ರೂಪಿಗಳಾಗಿದ್ದು ಅಂದಾಜು 60 ಸೆಂ.ಮೀ.ಉದ್ದ ಹೊಂದಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಉಬ್ಬಿದ ಎಲೆ ಬುಡವನ್ನು ಹೊಂದಿರುತ್ತವೆ;ಸಂಯುಕ್ತ ಪರ್ಣದ ನಡು ದಿಂಡು ಮತ್ತು ಕಿರುತೊಟ್ಟು(0.2 ಸೆಂ.ಮೀ. ಉದ್ದ)ಗಳು ಕೋಚ ಕೋಚವಾಗಿ ಸೀಳಿದ ಶಲ್ಕೆಗಳು ಮತ್ತು ನಕ್ಷತ್ರ ರೂಪದ ರೋಮಗಳ ಸಮೇತವಿರುತ್ತದೆ;ಕಿರುಪತ್ರಗಳು 5 ರಿಂದ 15ಇದ್ದು ಅಭಿಮುಖಿ ಅಥವಾ ಉಪ-ಅಭಿಮುಖಿಗಳಾಗಿರುತ್ತವೆ , ಗಾತ್ರ 7-15 X 2.5-5 ಸೆಂ.ಮೀ., ಆಕಾರದಲ್ಲಿ ಸಂಕುಚಿತ ಅಂಡಾಕೃತಿ ಅಥವಾ ಧೀರ್ಘ ಚತುರಸ್ರ-ಈಟಿಯ ಆಕಾರ ಹೊಂದಿದ್ದು, ಕ್ರಮೇಣವಾಗಿ ಚೂಪಾಗುವ ತುದಿ,ಉಪ-ಹೃದಯಾಕಾರದ ,ದುಂಡಾದ ಅಥವಾ ಬೆಣೆಯಾಕಾರದ ಬುಡ,ನಯವಾದ ಅಥವಾ ಅವ್ಯವಸ್ಥಿತವಾಗಿ ದಂತಿತವಾಗಿರುವ ಅಂಚು ಹೊಂದಿರುತ್ತವೆ, ಪತ್ರಗಳು ಬಲಿತಾಗ ಬಿಟ್ಟರೆ ಮಿಕ್ಕ ವೇಳೆಯಲ್ಲಿ ರೋಮರಹಿತ,ಪತ್ರದ ತಳಭಾಗ ದಟ್ಟವಾಗಿ ನಕ್ಷತ್ರ ರೂಪದ ರೋಮಗಳಿಂದ ಕೂಡಿರುತ್ತದೆ;ಮಧ್ಯನಾಳ ಕಾಲುವೆಗೆರೆ ಸಮೇತವಿರುತ್ತವೆ;ಎರಡನೇ ದರ್ಜೆಯ ನಾಳಗಳು 10 ರಿಂದ 14 ಜೋಡಿಗಳಿದ್ದು ಪ್ರಮುಖವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಓರೆಯಾಗಿ ಎಲೆದಿಂಡಿಗೆ ಅಡ್ಡವಾಗಿ ಕೂಡುವಂತಹವು.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಪುನರಾವೃತ್ತಿ ಯಾಗಿ ಕವಲೊಡೆಯುವ ಮಾದರಿಯಲ್ಲಿದ್ದು 18 ಸೆಂ.ಮೀ. ವರೆಗಿನ ಉದ್ದವಿರುತ್ತದೆ;ಹೂಗಳು ಗೋಳಾಕಾರ ಹಾಗೂ ಬಹು ಸಣ್ಣದಾಗಿದ್ದು ಸುವಾಸನೆಯನ್ನು ಹೊಂದಿರುತ್ತವೆ;ತೊಟ್ಟುಗಳು ತೆಳುವಾಗಿದ್ದು ಕೆಂಪುಮಿಶ್ರಿತ-ಕಂದು ಬಣ್ಣದ ಕೋಚ ಕೋಚವಾಗಿ ಸೀಳಿದ ಶಲ್ಕೆಗಳು ಮತ್ತು ನಕ್ಷತ್ರ ರೂಪದ ರೋಮಗಳಿಂದ ದಟ್ಟವಾಗಿ ಆವೃತಗೊಂಡಿರುತ್ತವೆ.
ಕಾಯಿ / ಬೀಜ : ಬೆರ್ರಿ ಉಪಗೋಳಾಕಾರವಾಗಿದ್ದು 2.5 ಸೆಂಮೀ.ವರೆಗಿನ ಉದ್ದವಿರುತ್ತದೆ ಮತ್ತು ಕೆಂಪುಮಿಶ್ರಿತ-ಕಂದು ಬಣ್ಣದ ಕೋಚ ಕೋಚವಾಗಿ ಸೀಳಿದ ಶಲ್ಕೆಗಳು ಮತ್ತು ನಕ್ಷತ್ರ ರೂಪದ ರೋಮಗಳಿಂದ ದಟ್ಟವಾಗಿ ಆವೃತಗೊಂಡಿರುತ್ತದೆ;ಬೀಜ ಒಂದಿದ್ದು ಪತ್ರೆ ಸಮೇತವಾಗಿರುತ್ತದೆ.

ಜೀವಪರಿಸ್ಥಿತಿ :

450 ರಿಂದ 900 ಮೀ. ನಡುವಿನ ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಉಪ-ಮೇಲ್ಛಾವಣಿ ಮರಗಳಾಗಿ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯದಿಂದ ಆಸ್ಟ್ರೇಲಿಯ; ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿಯಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Nat. Tijdsch. Ned.Ind. 27:43,1864:Pannell, a taxonomic monograph of the Genus Aglaia Lour.(Meliaceae),331.1992;Gamble, Fl. Madras 1:181.1997(re.ed.);Sasidharan, Biodiversity documentation for Kerala-Flowering Plants, part 6:88.2004.

Top of the Page