ಅಲ್ಸಿಯೋಡ್ಯಾಫ್ನೆ ಸೆಮೆಕಾರ್ಪೆಫೋಲಿಯ Nees - ಲಾರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 18 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿರುತ್ತದೆ ಶಲ್ಕೆ ಹಾಗೂ ಚಕ್ಕೆ ರೂಪದಲ್ಲಿರುತ್ತದೆ; ಕಚ್ಚು ಮಾಡಿದ ಜಾಗ ತೆಳು ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಧೃಢವಾಗಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿರುತ್ತವೆ; ತೊಟ್ಟುಗಳು ದೃಢವಾಗಿದ್ದು0.7- 2 ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ; ಪತ್ರಗಳು 7-16 x 4-8.5 ಸೆಂ.ಮೀ ಗಾತ್ರ ಹೊಂದಿದ್ದು ಬುಗುರಿಯ ಆಕಾರದಲ್ಲಿರುತ್ತವೆ. ಪತ್ರದ ತುದಿ ಚೂಪಲ್ಲದ ಅಥವಾ ದುಂಡಾಗಿರುತ್ತದೆ, ಕೆಲವು ವೇಳೆ ಅಗ್ರದಲ್ಲಿ ಆಳವಾದ ಕಚ್ಚನ್ನು ಹೊಂದಿರುತ್ತದೆ, ಬುಡ ಬೆಣೆಯಾಕಾರದಿಂದ ಚೂಪಾದ ಮಾದರಿಯಲ್ಲಿರುತ್ತದೆ; ಅಂಚು ನಯವಾಗಿರುತ್ತದೆ;ಪತ್ರಗಳ ಮೇಲ್ಮೈತೊಗಲನ್ನೋಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತದೆ ಮತ್ತು ತಳಭಾಗದಲ್ಲಿಮಾಸಲು ಬೂದು ಹಸಿರು ಬಣ್ಣ ಹೊಂದಿರುತ್ತದೆ;ಪತ್ರಗಳು ಎಳೆಯದಾಗಿದ್ದಾಗ ಸೂಕ್ಷ್ಮವಾದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ತುಸು ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 6-10 ಜೋಡಿಗಳಿದ್ದು ಕವಲೊಡೆದಿರುತ್ತವೆ ಮತ್ತು ಆರೋಹಣ ಮಾದರಿಯಲ್ಲಿರುತ್ತವೆ.ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸ ಹೊಂದಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವ ರೀತಿಯವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು.
ಕಾಯಿ /ಬೀಜ : ಬೆರ್ರಿಗಳು ಅಂಡವೃತ್ತದ ಆಕಾರದಲ್ಲಿದ್ದು 1.4 ಸೆಂ.ಮೀ. ಉದ್ದ ಹೊಂದಿರುತ್ತವೆ ಮತ್ತು ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

800 ಮೀ. ಎತ್ತರದವರೆಗಿನ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಬೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟ ಮತ್ತು ಶ್ರೀ ಲಂಕಾ; ಪಶ್ಚಿಮ ಘಟ್ಟದಲ್ಲಿನ ಮಧ್ಯ ಸಹ್ಯಾದ್ರಿಯಲ್ಲಿ ಆಗಾಗ್ಗೆಯೂ ದಕ್ಷಿಣ ಸಹ್ಯಾದ್ರಿಯಲ್ಲಿ ಅಪರೂಪವಾಗಿಯೂ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Wall., Pl. Asiat.. Rar. 2: 72.1831 ;Gamble,Fl.Madras 2:1226. 1993(rep.ed.); Sasidharan, Biodiversity documentation for Kerala Plants, part 6, 395.2004; Saldanha, Fl. Karnataka 1:59.1984..

Top of the Page