ಆಂಟಿಡೆಸ್ಮ ಅಲೆಕ್ಸಿಟೇರಿಯ L. - ಯೂಫೊರ್ಬಿಯೇಸಿ

Synonym : ಆಂಟಿಡೆಸ್ಮ ಜೇಲಾನಿಕಮ್ Lam.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು ಸೀಳಿಕಾ ವಿನ್ಯಾಸ ಹೊಂದಿರುತ್ತವೆ; ಕಚ್ಚು ಮಾಡಿದ ಜಾಗ ತೆಳು ಹಳದಿ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು, ಜೋತಾಡುವಂತಿದ್ದು, ಹರಡಿಕೊಂಡಿರುತ್ತವೆ ಮತ್ತು ಉಪ-ರೋಮಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿ ಹೊಂದಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ. ಕಾವಿನೆಲೆಗಳು ಕಿರು ಗಾತ್ರದವುಗಳಾಗಿದ್ದು 0.2 ಸೆಂ.ಮೀ ಉದ್ದವಿದ್ದು ಅಂಡಾಕಾರ-ತ್ರಿಕೋನ ಆಕಾರದವುಗಳಾಗಿದ್ದು ಕೊಂಚ ಮೃದು ತುಪ್ಪಳ ವನ್ನು ಹೊಂದಿರುತ್ತವೆ. ತೊಟ್ಟುಗಳು ಅಂದಾಜು 0.15-0.3 ಸೆಂ.ಮೀ. ಉದ್ದವಿದ್ದು ಕಾಲುವೆ ಗೆರೆಗಳನ್ನು ಹೊಂದಿರುತ್ತವೆ ಹಾಗೂ ಉಪ-ರೋಮಸಹಿತವಾಗಿರುತ್ತವೆ; ಪತ್ರಗಳು 5 - 9 X 1.4 – 2.7 ಸೆಂ ಮೀ. ವರೆಗಿನ ಗಾತ್ರ; ಸಂಕುಚಿತ ಅಂಡವೃತ್ತ ಮಾದರಿಯ ಆಕಾರ, ಅಗ್ರದಲ್ಲಿ ಮೊನಚು ಮುಳ್ಳನ್ನು ಹೊಂದಿದ ಹಾಗೂ ಕ್ರಮೇಣವಾಗಿ ಮೊಂಡು ಚೂಪಾಗುವ ತುದಿ, ಚೂಪಾದುದರಿಂದ ಹಿಡಿದು ಬೆಣೆಯಾಕಾರದ ಅಥವಾ ಸ್ವಲ್ಪ ಮಟ್ಟಿಗೆ ಓರೆಯಾದ ಬುಡ, ನಯವಾದ ಅಂಚು, ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 10 ಜೋಡಿಗಳಿದ್ದು ಕುಣಿಕೆಗೊಂಡಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿರುತ್ತವೆ; ಹೂಗಳು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ.
ಕಾಯಿ /ಬೀಜ : ಡ್ರೂಪ್ಗಳು ಕೆಂಪು ಬಣ್ಣದವುಗಳಾಗಿದ್ದು ಅಂಡಾಕಾರದಲ್ಲಿದ್ದು, ಕಿರುಗಾತ್ರ ಹೊಂದಿರುತ್ತವೆ ಮತ್ತು ಒಂದು ಬೀಜವನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

1000 ಮೀ. ವರೆಗಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳಾಗಿ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದಲ್ಲಿ ಈ ಪ್ರಭೇದ ದಕ್ಷಿಣ ಸಹ್ಯಾದ್ರಿಯಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Sp.Pl. 1027.1753 p.p.; Gamble, Fl. Madras 2:1297.1993(rep.ed.); Sasidharan, Biodiversity documentation for Kerala – Flowering plants, part 6. 409.2004.

Top of the Page