ಅಫನಾಂತೆ ಕಸ್ಪಿಡೇಟ (Bl.) Planch. - ಅಲ್ಮೇಸಿ

ಪರ್ಯಾಯ ನಾಮ : ಸೈಕ್ಲೋಸ್ಟೆಮಾನ್ ಕಸ್ಪಿಡೇಟಮ್ Bl.;ಗಿರೋನ್ನಿಯೆರ ಕಸ್ಪಿಡೇಟ (Bl.)Planch. ex Kurz.; ಗಿರೋನ್ನಿಯೆರ ರೆಟಿಕ್ಯುಲೇಟ Thw.

Vernacular names : Tamil: ಬೂತಿಯನಾರ್ತಿ,ತೊಂಡುಪೊಲಿಯಾನ್,ಕಾಟ್ಟುಪಿಲ್ಲಿMalayalam: ಗಬ್ಬು ಚಕ್ಕೆ, ನಾರು ಭೂತಾಳ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ. ಎತ್ತರದವರೆಗಿನ ಆನಿಕೆಯುಳ್ಳ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ,ಆಯತಾಕಾರದ ರೀತಿಯಲ್ಲಿ ಪದರ ಕಳಚುವ ಚಕ್ಕೆ ರೂಪದಲ್ಲಿರುತ್ತವೆ;ಕಚ್ಚು ಮಾಡಿದ ಜಾಗ ಕೆಂಪು ಛಾಯೆಯಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪದುಂಡಾಗಿದ್ದು, ಎಳೆಯದಾಗಿದ್ದಾಗ ಸೂಕ್ಷ್ಮವಾದ ಅಪ್ಪು ಮೃದುತುಪ್ಪಳದಿಂದ ಕೂಡಿರುತ್ತವೆ ನಂತರ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ; ತೊಟ್ಟುಗಳು 0.6-1.2 ಸೆಂ.ಮೀ. ಉದ್ದವಿದ್ದು, ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತವೆ,ರೋಮರಹಿತವಾಗಿರುತ್ತವೆ;ಪತ್ರಗಳು 10 – 17.5 X3-7 ಸೆಂ.ಮೀ. ಗಾತ್ರ, ಅಂಡ - ಚತುರಸ್ರ ಅಥವಾ ಅಂಡವೃತ್ತ-ಭರ್ಜಿಯ ಆಕಾರ ಹೊಂದಿದ್ದು,ಶೃಂಗಾಗ್ರ ಮಾದರಿಯಿಂದ ಬಾಲರೂಪಿ - ಕ್ರಮೇಣ ಚೂಪಾಗುವ ತುದಿ, ದುಂಡಾಗಿರುವುದರಿಂದ ಸ್ವಲ್ಪಮಟ್ಟಿಗೆ ಒಳಬಾಗಿದ ರೀತಿಯವರೆಗಿನ ಬುಡ,ನಯವಾದ ಅಂಚು(ಸಸಿಗಳಲ್ಲಿ ಅಗ್ರದ ಬಳಿ ಹೋದಂತೆ ಗರಗಸ ದಂತಿತವಾಗುತ್ತವೆ),ತೊಗಲನ್ನೋಲುವ ಮೇಲ್ಮೈ ಹೊಂದಿದ್ದು,ಪತ್ರಗಳ ಮೇಲ್ಭಾಗ ಕಡುಹಸಿರು ಮತ್ತು ಹೊಳಪನ್ನು ಹೊಂದಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಸ್ವಲ್ಪಮಟ್ಟಿಗೆ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 8 - 14 ಜೋಡಿಗಳಿರುತ್ತವೆ,ಆರೋಹಣ ಮಾದರಿಯಲ್ಲಿ ಬಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದವುಗಳಾಗಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಉಪತೊಟ್ಟುಗಳ ಸಮೇತವಿರುತ್ತವೆ;ಗಂಡು ಹೂಗಳು ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಮಂಜರಿಯಲ್ಲಿರುತ್ತವೆ ;ಹೆಣ್ಣು ಹೂಗಳು ಒಂಟಿಯಾಗಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಅಂಡಾಕಾರದಲ್ಲಿ ಇರುತ್ತವೆ, ಕೊಕ್ಕಿನ ಸಮೇತವಿದ್ದು ರೋಮರಹಿತ ವಾಗಿರುತ್ತವೆ ; ಬೀಜಗಳ ಸಂಖ್ಯೆ 1.

ಜೀವಪರಿಸ್ಥಿತಿ :

300 ಮತ್ತು 1000 ಮೀ. ಎತ್ತರದಲ್ಲಿನ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಬೆಳೆಯುವ ಮರಗಳು.

ವ್ಯಾಪನೆ :

ಭಾರತ,ಮ್ಯಾನ್ಮಾರ್,ಶ್ರೀಲಂಕಾ ಮತ್ತು ಇಂಡೋಚೈನ;ಪಶ್ಚಿಮ ಘಟ್ಟದ ಮಧ್ಯ ಸಹ್ಯಾದ್ರಿಯಲ್ಲಿ ಆಗಾಗ್ಗೆ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

DC., Prodr. 17: 209. 1873; Gamble, Fl. Madras 3: 1349. 1998 (re. ed); Sasidharan, Biodiversity documentation for Kerala- Flowering Plants, part 6: 436. 2004

Top of the Page