ಅಪೊಲ್ಲೋನಿಯಾಸ್ ಆರ್ನಾಟ್ಟಿಯೈ Nees - ಲಾರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 6 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿರುತ್ತದೆ ಮತ್ತು ಕಂದು ಬಣ್ಣದ ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು “ಆಬ್ರೆವಿಲ್ಲೆ” ವಿನ್ಯಾಸದಲ್ಲಿರುತ್ತವೆ; ಕಿರುಕೊಂಬೆಗಳು ದುಂಡಾಕಾರದಲ್ಲಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿರುತ್ತವೆ; ತೊಟ್ಟುಗಳು 0.5- 1.2 ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ಅಡ್ಡ ಪತ್ರದ ಮೇಲ್ಭಾಗದಲ್ಲಿ ಹಗುರವಾದ ಕಾಲುವೆಗೆರೆ ಸಮೇತವಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ; ಪತ್ರಗಳು 8-18 x 1.7-3.8 ಸೆಂ.ಮೀ ಗಾತ್ರ ಹೊಂದಿದ್ದುಸಾಮಾನ್ಯವಾಗಿ ಅಂಡವೃತ್ತ ಕೆಲವು ವೇಳೆ ಬುಗುರಿ-ಭರ್ಜಿಯ ಆಕಾರದಲ್ಲಿರುತ್ತವೆ. ಪತ್ರದ ತುದಿ ಸಂಕುಚಿತವಾಗಿ ಮತ್ತು ಹಂತ ಹಂತವಾಗಿ ಉದ್ದನೆಯ ಕ್ರಮೇಣ ಚೂಪಾಗುವ ಮಾದರಿಯಲ್ಲಿರುತ್ತದೆ; ಬುಡ ಚೂಪಾದುದರಿಂದ ಬೆಣೆಯಾಕಾರದವರೆಗಿನ ಮಾದರಿಯಲ್ಲಿರುತ್ತದೆ;ಅಂಚು ನಯವಾಗಿರುತ್ತದೆ;ಪತ್ರಗಳ ಮೇಲ್ಮೈಕಾಗದವನ್ನೋಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತದೆ ಮತ್ತು ತಳಭಾಗದಲ್ಲಿ ಕೊಂಚ ಮಾಸಲು ಬೂದು ಹಸಿರು ಬಣ್ಣ ಹೊಂದಿರುತ್ತದೆ ಮತ್ತು ವಿರಳವಾಗಿ ಸೂಕ್ಷ್ಮ ಮೃದು ತುಪ್ಪಳವನ್ನು ಹೊಂದಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಹಗುರವಾದ ಕಾಲುವೆಗೆರೆಯನ್ನು ಹೊಂದಿರುತ್ತದೆ;ಎರಡನೇ ದರ್ಜೆಯ ನಾಳಗಳು 8-14 ಜೋಡಿಗಳಿದ್ದು ಕ್ರಮೇಣವಾಗಿ ಬಾಗಿರುತ್ತವೆ ಮತ್ತು ಆರೋಹಣ ಮಾದರಿಯಲ್ಲಿರುತ್ತವೆ.ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸ ಹೊಂದಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವ ರೀತಿಯವು.
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿರುವ ಅಥವಾ ಉಪ-ತುದಿಯಲ್ಲಿನ ಮಧ್ಯಾಭಿಸರ ಪುಷ್ಪಮಂಜರಿ -ಯಲ್ಲಿರುತ್ತವೆ;ಹೂತೊಟ್ಟುಗಳು ಉದ್ದವಾಗಿದ್ದು ದಾರದ ರೂಪದಲ್ಲಿರುತ್ತವೆ; ಪರಾಗಾಶಯ 2 ಕೋಶಗಳನ್ನು ಹೊಂದಿರುತ್ತದೆ.
ಕಾಯಿ /ಬೀಜ : ಬೆರ್ರಿಗಳು ಗೋಳಾಕಾರ ಅಥವಾ ಅಂಡಾಕಾರದಲ್ಲಿದ್ದು ಶಾಶ್ವತವಾದ ಪುಷ್ಪಾವರಣ ದಳಗಳ ಮೇಲೆ ಆಸೀನವಾಗಿರುತ್ತವೆ ಮತ್ತು ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

ಸಾದಾರಣವಾಗಿ 700 ಮತ್ತು 1800 ಮೀ. ನಡುವಿನ ಎತ್ತರದವರೆಗಿನ ಮಧ್ಯಮ ಹಾಗೂ ಉನ್ನತ ಎತ್ತರದ ಪ್ರದೇಶಗಳ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿಒಳಛಾವಣಿ ಮರಗಳಾಗಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿಯಲ್ಲಿ ಮತ್ತು ಪಾಲಕ್ಕಾಡು ಬೆಟ್ಟಗಳು ಮತ್ತು ವಯನಾಡಿನ ಪ್ರದೇಶಗಳಲ್ಲಿನ ಎಲ್ಲೆಡೆ ಕಂಡುಬರುತ್ತದೆ.

ಗ್ರಂಥ ಸೂಚಿ :

Nees, Syst. Laurin.670.1836;Gamble,Fl.Madras 2:1219. 1993(rep.ed.); Sasidharan, Biodiversity documentation for Kerala Plants, part 6, 395.2004.

Top of the Page