ಆರ್ಡಿಸಿಯ ಪಾಸಿಫ್ಲೋರ Heyne ex Roxb. - ಮಿರ್ಸಿನೇಸಿ

Vernacular names : Malayalam: Muttamaram

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 6 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಮುಖ್ಯ ಕಾಂಡದ ಕೋನಕ್ಕೆ ಸಮಕೋನದಲ್ಲಿರುತ್ತವೆ;ಎಳೆಯ ಕಿರುಕೊಂಬೆಗಳು ಉಪ-ದುಂಡಾಗಿದ್ದು ದಟ್ಟವಾಗಿ ಶಲ್ಕೆಗಳಿಂದ ಆವರಿಸಿಕೊಂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು ಅಂದಾಜು 0.5 -0.7ಸೆಂ.ಮೀ. ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಮತ್ತು ಎಳೆಯದಾಗಿದ್ದಾಗ ಶಲ್ಕೆಗಳಿಂದ ಕೂಡಿರುತ್ತವೆ;ಪತ್ರಗಳು 6 - 13 X 3.8 – 4 ಸೆಂ.ಮೀ.ವರೆಗಿನ ಗಾತ್ರವಿದ್ದು ಸಂಕುಚಿತ ಅಂಡವೃತ್ತದ ಆಕಾರ ಹೊಂದಿದ್ದು, ಮೊಂಡಾಗ್ರವುಳ್ಳ ಕ್ರಮೇಣವಾಗಿ ಚೂಪಾಗುವ ತುದಿ,ಬೆಣೆಯಾಕಾರದ ಬುಡ ,ನಯವಾದ ಅಂಚು ಹೊಂದಿರುತ್ತವೆ ಹಾಗೂ ಪಾರದರ್ಶಕ ಚುಕ್ಕೆಗಳಿಂದ ಕೂಡಿರುತ್ತವೆ;ಮಧ್ಯ ನಾಳ ಮೇಲ್ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಕಾಲುವೆ ಗೆರೆ ಸಮೇತವಾಗಿರುತ್ತವೆ; ಎರಡನೇ ದರ್ಜೆಯ ನಾಳಗಳು 16 ರಿಂದ 20 ಜೋಡಿಗಳಿದ್ದು ತೆಳುವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ / ಹೂಗಳು : ಪುಷ್ಪ ಮಂಜರಿಗಳು ಅಕ್ಷಾಕಂಕುಳಿನಲ್ಲಿ ಅಥವಾ ಪಾರ್ಶ್ವದಲ್ಲಿದ್ದು ಕೆಲವು ಹೂಗಳನ್ನೊಳಗೊಂಡ ಪೀಠಛತ್ರ ಅಥವಾ ಮಧ್ಯಾರಂಭಿ ಮಾದರಿಯಲ್ಲಿರುತ್ತವೆ; ಹೂಗಳು ಬಿಳಿ ಬಣ್ಣದವು.
ಕಾಯಿ / ಬೀಜ : ಬೆರ್ರಿ ಫಲಗಳು ಗೋಳಾಕಾರದಲ್ಲಿದ್ದು ಕೆಂಪು ಬಣ್ಣದವು;ಬೀಜ ಒಂದು.

ಜೀವಪರಿಸ್ಥಿತಿ :

800 ಮತ್ತು 1600 ಮೀ.ನಡುವಿನ ಮಧ್ಯಮ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಸಾಮಾನ್ಯವಾಗಿ ಕಂಡು ಬರುತ್ತದೆ.

ವ್ಯಾಪನೆ :

ದಕ್ಷಿಣ ಭಾರತ ಮತ್ತು ಶ್ರೀಲಂಕಾ;ಪಶ್ಚಿಮ ಘಟ್ಟದಲ್ಲಿ ಈ ಪ್ರಭೇದ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿಯ ಕೊಡಗು ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Roxb., Fl. Ind. 2: 279.1824;Gamble, Fl. Madras 2:755.1998(rep.ed.); Sasidharan, Biodiversity documentation for Kerala- Flowering Plants, part 6:265.2004; Saldanha, Fl. Karnataka 1: 348.1984..

Top of the Page