ಆರ್ಡಿಸಿಯ ರಾಂಬಾಯ್ಡಿಯ Wt. - ಮಿರ್ಸಿನೇಸಿ

Vernacular names : Tamil: Nirkarai

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಮುಖ್ಯ ಕಾಂಡದ ಕೋನಕ್ಕೆ ಸಮಕೋನದಲ್ಲಿರುತ್ತವೆ;ಎಳೆಯ ಕಿರುಕೊಂಬೆಗಳು ಉಪ-ದುಂಡಾಗಿದ್ದು ದಟ್ಟವಾಗಿ ಶಲ್ಕೆಗಳಿಂದ ಆವರಿಸಿಕೊಂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು ಅಂದಾಜು 0.4 -0.8ಸೆಂ.ಮೀ. ಉದ್ದವಿದ್ದುತೆಳುವಾಗಿರುತ್ತವೆ ಮತ್ತುಬಲಿತಾಗ ರೋಮರಹಿತವಾಗಿರುತ್ತವೆ;ಪತ್ರಗಳು 2.3 - 6 X 1.3 – 2.8 ಸೆಂ.ಮೀ.ವರೆಗಿನ ಗಾತ್ರವಿದ್ದು ವಜ್ರಾಕೃತಿ ಅಥವಾ ಅಂಡವೃತ್ತದ-ಬುಗುರಿ-ಭರ್ಜಿ ಆಕಾರ ಹೊಂದಿದ್ದು, ಚೂಪಾದುದರಿಂದ ಮೊಂಡಾಗ್ರವುಳ್ಳ ಕ್ರಮೇಣವಾಗಿ ಚೂಪಾಗುವ ತುದಿ, ಒಳಬಾಗಿದ ಅಥವಾ ಬೆಣೆಯಾಕಾರದ ಬುಡ,ಅಂಚು ನಯವಾಗಿ ಅಥವಾ ಅಸ್ಪಷ್ಟವಾದ ಸೂಕ್ಷ್ಮ ದುಂಡೇಣುಗಳನ್ನು ಹೊಂದಿದ್ದು ಸುರುಳಿಗೊಂಡಿರುತ್ತದೆ,ಪತ್ರಗಳು ರೋಮರಹಿತವಾಗಿದ್ದು ಎರಡೂ ಬದಿಯಲ್ಲಿ ಚದುರಿದ ಕಂದು ಬಣ್ಣದ ರಸಗ್ರಂಥಿಗಳ ಸಮೇತವಿರುತ್ತವೆ ಮತ್ತು ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ; ಮಧ್ಯ ನಾಳ ಮೇಲ್ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಕಾಲುವೆ ಗೆರೆ ಸಮೇತವಾಗಿರುತ್ತವೆ; ಎರಡನೇ ದರ್ಜೆಯ ಮತ್ತು ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ / ಹೂಗಳು : ಪುಷ್ಪ ಮಂಜರಿಗಳು ಅಕ್ಷಾಕಂಕುಳಿನಲ್ಲಿರುವ ಪೀಠಛತ್ರ ಮಧ್ಯಾರಂಭಿ ಮಾದರಿಯಲ್ಲಿರುತ್ತವೆ; ಹೂಗಳು ನಸುಗೆಂಪು - ಬಿಳಿ ಬಣ್ಣದವು;ವೃಂತ 1 – 1.5 ಸೆಂ.ಮೀ. ಉದ್ದವಿರುತ್ತದೆ;ತೊಟ್ಟುಗಳು 0.6 – 0.8 ಸೆಂ.ಮೀ. ಉದ್ದವಿದ್ದು ತೆಳುವಾಗಿರುತ್ತವೆ.
ಕಾಯಿ / ಬೀಜ : ಬೆರ್ರಿ ಫಲಗಳು ಅಂದಾಜು 0.6 ಸೆಂ.ಮೀ. ಅಡ್ಡಗಲತೆ ಹೊಂದಿದ್ದು ಶಾಶ್ವತವಾಗಿ ಉಳಿದುಕೊಂಡ ಶಲಾಕೆಯ ಬುಡದ ಸಮೇತವಿರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ 1400 ಮತ್ತು 1800 ಮೀ.ನಡುವಿನ ಅತಿಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಸಾಮಾನ್ಯವಾಗಿ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಗಸ್ತ್ಯಮಲೈ,ಅಣ್ಣಾಮಲೈ ಮತ್ತು ನೀಲಗಿರಿ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Wight Ic.t. 1213.1848;Gamble, Fl. Madras 2:755.1998(rep.ed.); Sasidharan, Biodiversity documentation for Kerala- Flowering Plants, part 6:265.2004.

Top of the Page