ಆರ್ಡಿಸಿಯ ಸೊಲನಾಸಿಯ Roxb. - ಮಿರ್ಸಿನೇಸಿ

:

Vernacular names : Tamil: ಕಕಂಜರ;ಕೊಲರಕ್ಕು;ಕುಳಿಮುಡನ್;ಮೊಲಕ್ಕMalayalam: ಬೋಡೆ;ಬೋಡಿನ ಗಿಡ;ಹವಳದ ಗಿಡ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 6 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲದ್ದು ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪ-ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು ಅಂದಾಜು 1ಸೆಂ.ಮೀ. ಉದ್ದವಿದ್ದು ದೃಢವಾಗಿರುತ್ತವೆ ಮತ್ತು ಕಾಲುವೆಗೆರೆ ಸಮೇತವಿದ್ದು ರೋಮರಹಿತವಾಗಿರುತ್ತವೆ;ಪತ್ರಗಳು 10 – 21.5(34) X4 – 7.5(11.5) ಸೆಂ.ಮೀ.ವರೆಗಿನ ಗಾತ್ರವಿದ್ದು ಅಂಡವೃತ್ತದ- ಬುಗುರಿ ಅಥವಾ ಬುಗುರಿ-ಭರ್ಜಿ ಆಕಾರ ಹೊಂದಿದ್ದು, ಚೂಪಾದುದರಿಂದ ಕ್ರಮೇಣವಾಗಿ ಚೂಪಾಗುವ ತುದಿ, ಒಳಬಾಗಿದ ಅಥವಾ ಬೆಣೆಯಾಕಾರದ ಬುಡ,ಅಂಚು ನಯವಾಗಿ ಅಥವಾ ಅಗ್ರದ ಕಡೆಗೆ ಹೋದಂತೆ ಅಸ್ಪಷ್ಟವಾದ ಸೂಕ್ಷ್ಮ ದುಂಡೇಣುಗಳನ್ನು ಹೊಂದಿರುತ್ತವೆ,ಪತ್ರಗಳು ರೋಮರಹಿತವಾಗಿದ್ದು ತಳಭಾಗದಲ್ಲಿ ಮಾಸಲು ಬೂದು ಹಸಿರು ಬಣ್ಣ ಹೊಂದಿರುತ್ತವೆ,ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ಚುಕ್ಕೆ ರೂಪದ ರಸಗ್ರಂಥಿಗಳ ಸಮೇತವಿರುತ್ತವೆ; ಮಧ್ಯ ನಾಳ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತವೆ; ಎರಡನೇ ದರ್ಜೆಯ ನಾಳಗಳು 9 ರಿಂದ 20 ಜೋಡಿಗಳಿದ್ದು ತೆಳುವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ ಅಥವಾ ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪ ಮಂಜರಿಗಳು ಅಕ್ಷಾಕಂಕುಳಿನ ಅಥವಾ ಪಾರ್ಶ್ವದಲ್ಲಿರುವ ಪೀಠಛತ್ರ ಮಾದರಿಯಲ್ಲಿರುತ್ತವೆ; ಹೂಗಳು ನಸುಗೆಂಪು ;ವೃಂತ 12 ಸೆಂ.ಮೀ. ವರೆಗಿನ ಉದ್ದವನ್ನು ಹೊಂದಿರುತ್ತದೆ.
ಕಾಯಿ / ಬೀಜ : ಬೆರ್ರಿ ಫಲಗಳು ಗೋಳಾಕಾರದಲ್ಲಿದ್ದು 0.8 ಸೆಂ.ಮೀ. ಅಡ್ಡಗಲತೆ ಹೊಂದಿದ್ದು ಕಡುಕೆಂಪಾಗಿರುತ್ತದೆ; ಬೀಜ ಒಂದು.

ಜೀವಪರಿಸ್ಥಿತಿ :

1200 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ಭಗ್ನಗೊಂಡ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಸಾಮಾನ್ಯವಾಗಿ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ಪಶ್ಚಿಮ ಚೈನ; ಪಶ್ಚಿಮ ಘಟ್ಟದಲ್ಲಿ ಈ ಪ್ರಭೇದ ದಕ್ಷಿಣ, ಮಧ್ಯ ಮತ್ತು ಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Roxb.,Pl. Corom. T. 27. 1795;Gamble, Fl. Madras 2:756.1998(rep.ed.); Sasidharan, Biodiversity documentation for Kerala- Flowering Plants, part 6:265.2004; Saldanha, Fl. Karnataka 1: 348.1984.

Top of the Page