ಅರೆಂಗ ವೈಟಿಯೈ Griff. - ಅರೆಕೇಸಿ

ಕನ್ನಡದ ಪ್ರಾದೇಶಿಕ ಹೆಸರು : ದಡಿಸೆ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಉಭಯಲಿಂಗಿ ಪುಷ್ಪಗಳನ್ನೊಳಗೊಂಡ ತೆಂಗು ಜಾತಿಯ ಮರಗಳು; ಕಾಂಡ 6ಮೀ. ಎತ್ತರದವರೆಗೆ ಬೆಳೆಯುತ್ತವೆ.
ಕಾಂಡ ಮತ್ತು ತೊಗಟೆ : ಕಾಂಡ ಬೂದು ಬಣ್ಣದ್ದಾಗಿರುತ್ತದೆ. ಕಾಂಡವು ಶೇಷವಾಗುಳಿದ ಎಲೆ ಒರೆಯ ದಟ್ಟವಾದ ಕಪ್ಪು ಬಣ್ಣದ ನಾರಿನಿಂದ ಆವೃತವಾಗಿರುತ್ತವೆ.
ಜಿನುಗು ದ್ರವ :
ಎಲೆಗಳು : ಎಲೆಗಳು ಸಂಯುಕ್ತ, ಗರಿರೂಪಿ ಮಾದರಿಯದ್ದಾಗಿದ್ದು 3.5 ರಿಂದ 8ಮೀ ಉದ್ದವಿರುತ್ತದೆ. ಕಿರು ಎಲೆಗಳು 30 ರಿಂದ 100ಸೆಂ.ಮೀ. ಉದ್ದ, 2 ರಿಂದ 2.5ಸೆಂ.ಮೀ. ಅಗಲಹೊಂದಿದ್ದು ರೇಖಾತ್ಮಕ ಕತ್ತಿಯಾಕಾರದಲ್ಲಿರುತ್ತವೆ. ತುತ್ತ ತುದಿಯ ಕಿರು ಎಲೆಗಳು ಹಲವು ವೇಳೆ ಸಂಧಿಸುತ್ತವೆ. ಹಾಗೂ ತಲಕೆಳಗಾದ ಶಂಖುವಿನಾಕಾರ ಹೊಂದಿರುತ್ತವೆ. ಕಿರು ಎಲೆಗಳು ತುದಿ ಇಕ್ಕಟ್ಟಾದ ರೂಪದಲ್ಲಿರುತ್ತವೆ. ಕಿರು ಎಲೆಗಳು ಅಸಮವಾಗಿ 2-ಹಾಲೆಗಳಾಗಿದ್ದು, ಬುಡಭಾಗದಲ್ಲಿ ಅಸಮಕಿವಿಯಾಕಾರ ಚಾಚುಗಳನ್ನೊಳಗೊಂಡಿರುತ್ತದೆ. ಕಿರು ಎಲೆಯ ಮೇಲ್ಭಾಗ ಕಡು ಹಸಿರು ಬಣ್ಣವನ್ನೂ ತಳಭಾಗ ಮಾಸಲು ಬೂದು ಹಸಿರು ಬಣ್ಣವನ್ನೂ ಹೊಂದಿರುತ್ತದೆ. ಎಲೆಪತ್ರದ ಅಗ್ರದ ಮೇಲು ಅರೆಭಾಗ ನಯವಾಗಿ ಅಥವಾ ದಂತಿತವಾಗಿರುತ್ತದೆ.
ಪುಷ್ಪಮಂಜರಿ/ಹೂಗಳು : ಹೆಣ್ಣು ಮತ್ತು ಗಂಡು ಹೊಂಬಾಳೆಗಳು ಬೇರ್ಪಡಿಸಿರುತ್ತವೆ ಹಾಗೂ 1ಮೀ. ಉದ್ದವಿರುತ್ತದೆ.
ಕಾಯಿ /ಬೀಜ : ಕಾಯಿಗಳು ಬೆರ್ರಿ ಮಾದರಿಯವು ಹಾಗೂ ಗಟ್ಟಿಯಾಗಿರುವಂತಹವು; ಬೀಜಗಳು 2 ರಿಂದ 3.

ಜೀವಪರಿಸ್ಥಿತಿ :

1500ಮೀ ಎತ್ತರದ ಪ್ರದೇಶಗಳಲ್ಲಿನ ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳ ಕಡಿದಾದ ಇಳಿಜಾರುಗಳಲ್ಲಿ ಸಾಮಾನ್ಯವಾಗಿ ಈ ಪ್ರಬೇಧ ಕಾಣಸಿಗುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಬೇಧ ದಕ್ಷಿಣ ಹಾಗೂ ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಸ್ಥಿತಿ :

ದುರ್ಬಲ ಸ್ಥಿತಿ (IUCN 2000)

ಗ್ರಂಥ ಸೂಚಿ :

Calcutta J. Nat. Hist. 5: 475. 1845; Gamble, Fl. Madras 3: 1558. 1998 (re. ed); Cook, Fl. Bombay 2: 804. 1902; Sasidharan, Biodiversity documentation for Kerala- Flowering Plants, part 6: 504. 2004.

Top of the Page