ಅಟಲಾಂಟಿಯ ರಸಿಮೋಸ Wt. - ರೂಟೇಸಿ

:

Vernacular names : Tamil: ಕಾಟ್ಟಟ್ಟು ನರಗಂ,ಮಲನರಗಂMalayalam: ಹುಚ್ಚು ನಿಂಬೆ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 4 ಮೀ. ಎತ್ತರದವರೆಗಿನ ಪೊದೆಗಳು ಅಥವಾ ಸಣ್ಣಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ ಹೊಂದಿದ್ದು ನಯವಾಗಿರುತ್ತದೆ;ಕತ್ತರಿಸಿದ ಜಾಗ ಹಳದಿ ಛಾಯೆಯನ್ನು ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಉದ್ದವಾದ ಮುಳ್ಳುಗಳನ್ನು ಹೊಂದಿರುತ್ತವೆ;ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟು ಗಳು 0.5-1ಸೆಂ.ಮೀ.ವರೆಗಿನ ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ, ರೋಮರಹಿತವಾಗಿದ್ದು ಗಿಣ್ಣುಗಳಿಂದ ಕೂಡಿರುತ್ತವೆ ; ಪತ್ರಗಳು 4.5-9 X 2.5 –5 ಸೆಂ.ಮೀ. ಗಾತ್ರ ಹೊಂದಿದ್ದು,ಅಂಡವೃತ್ತದಿಂದ ಅಂಡವೃತ್ತ-ಅಂಡದ ಆಕಾರ ಹೊಂದಿದ್ದು,ದೀರ್ಘ ಕಚ್ಚುಳ್ಳ ತುದಿ ಚೂಪಾದುದದರಿಂದ ಡುಂಡಾದವರೆಗಿನ ಬುಡ, ನಯವಾದ ಅಂಚು ಹೊಂದಿದ್ದು ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ ಹಾಗೂ ಮಚ್ಚೆ ರೀತಿಯ ರಸಗ್ರಂಥಿಗಳ ಸಮೇತವಿರುತ್ತವೆ ಮತ್ತು ಒಣಗಿದಾಗ ಮಬ್ಬು ಹಳದಿ ಛಾಯೆಯ ಹಸಿರು ಬಣ್ಣದಲ್ಲಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತವೆ ; ಎರಡನೇ ದರ್ಜೆಯ ನಾಳಗಳು 10-18 ಜೋಡಿಗಳಿರುತ್ತವೆ ;ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಯ ಅಕ್ಷದ ಕಡೆಗೆಇರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಚಿಕ್ಕ ಗಾತ್ರದ ಮಧ್ಯಾರಂಭಿ ಮಾದರಿಯವು; ಹೂಗಳು ಬಿಳಿ ಬಣ್ಣದವು;ತೊಟ್ಟುಗಳು 0.4 ಸೆಂ.ಮೀ. ಉದ್ದವಿರುತ್ತವೆ;ಕೇಸರಗಳು ಆಜನ್ಮ ರೀತಿಯವು.
ಕಾಯಿ / ಬೀಜ : ಡ್ರೂಪ್ಗಳು ಗೋಳಾಕಾರದಲ್ಲಿದ್ದು, 1.9 ಸೆಂ.ಮೀ.ಉದ್ದವನ್ನು ಹೊಂದಿರುತ್ತವೆ;ಬೀಜಗಳ ಸಂಖ್ಯೆ 4.

ಜೀವಪರಿಸ್ಥಿತಿ :

1000 ಮೀ. ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಾವರಣದಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ದಕ್ಷಿಣ,ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Bull. Soc. Bot. France 75: 714. 1928; Gamble, Fl. Madras 1: 159.1997 (re. ed); Sasidharan, Biodiversity documentation for Kerala- Flowering Plants, part 6: 78. 2004; Cooke, Fl. Bombay 1: 187.1903; Almeida, Fl. Maharashtra 1:199. 1996; Saldanha, Fl. Karnataka 2: 216. 1996.

Top of the Page