ಬೆಲ್ಶಮಿಯೆಡಿಯ ಡಾಲ್ಝೆಲ್ಲಿಯೈ (Meissn.) Kosterm. - ಲಾರೇಸಿ

Synonym : ಬೆಲ್ಶಮಿಯೆಡಿಯ ಫ್ಯಾಗಿಫೋಲಿಯ var. ಡಾಲ್ಝೆಲ್ಲಿಯೈ Meissn.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿರುತ್ತದೆ ಮತ್ತು ನಯವಾಗಿರುತ್ತದೆ.;ಕಚ್ಚು ಮಾಡಿದ ಜಾಗ ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ; ಅಗ್ರದಲ್ಲಿನ ಅಂಕುರಗಳು ಕಿರಿದಾಗಿರುತ್ತವೆ ಮತ್ತು ತೊಗಲು ಮಾದರಿಯ ಶಲ್ಕೆಗಳನ್ನು ಹೊಂದಿರುವುದಿಲ್ಲ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿ ಅಥವಾ ಕೆಲವು ವೇಳೆ ಉಪ-ಅಭಿಮುಖಿಗಳಾಗಿರುತ್ತವೆ ಹಾಗೂ ಕುಡಿಕೊಂಬೆಗಳ ತುದಿಯಲ್ಲಿರುತ್ತವೆ ; ತೊಟ್ಟುಗಳು 1-1.5 ಸೆಂ.ಮೀ. ವರೆಗಿನ ಉದ್ದವಿರುತ್ತವೆ;ಪತ್ರಗಳು 9.5-15 x 3.5-6 ಸೆಂ.ಮೀ ಗಾತ್ರ ಹೊಂದಿದ್ದು ಅಂಡವೃತ್ತದಿಂದ ಅಂಡ- ಭರ್ಜಿಯ ಆಕಾರದಲ್ಲಿರುತ್ತವೆ. ಪತ್ರದ ತುದಿ ಚೂಪಾಗಿರುವುದರಿಂದ ಹಿಡಿದು ಮೊಂಡಾಗ್ರವುಳ್ಳ ಕ್ರಮೇಣ ಚೂಪಾಗುವ ಮಾದರಿಯಲ್ಲಿರುತ್ತದೆ;ಬುಡ ಚೂಪಾದುದರಿಂದ ಒಳಬಾಗಿದ ಮಾದರಿಯನ್ನು ಹೊಂದಿರುತ್ತದೆ;ಅಂಚು ನಯವಾಗಿರುತ್ತದೆ;ಪತ್ರಗಳ ಮೇಲ್ಮೈ ಕಾಗದವನ್ನೋಲುವ ಮಾದರಿಯಲ್ಲಿದ್ದು ಮೇಲ್ಭಾಗದಲ್ಲಿ ನಯವಾಗಿರುತ್ತದೆ ಹಾಗೂ ಹೊಳಪನ್ನು ಹೊಂದಿ ರೋಮರಹಿತವಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು ತೆಳುವಾದ 10 ಜೋಡಿಗಳಿದ್ದು ಕ್ರಮೇಣವಾಗಿ ಬಾಗಿರುತ್ತವೆ.ಮೂರನೇ ದರ್ಜೆಯ ನಾಳಗಳು ದೃಢವಾದ ಜಾಲಬಂಧ ನಾಳ ವಿನ್ಯಾಸ ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿರುವ ಕಿರು ಗಾತ್ರದ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಅಂಡವೃತ್ತಾಕಾರದಲ್ಲಿದ್ದು ಅಂದಾಜು 1.7 ಸೆಂಮೀ. ಉದ್ದವನ್ನು ಹೊಂದಿರುತ್ತವೆ;ಕಾಯಿಗಳ ತೊಟ್ಟು ದಪ್ಪವಾಗಿರುತ್ತದೆಮತ್ತು ಕೆಂಪು ಬಣ್ಣದಲ್ಲಿರುತ್ತದೆ; ಕಾಯಿಗಳ ಪುಷ್ಪಾವರಣ ಉದುರಿ ಹೋಗುತ್ತವೆ.

ಜೀವಪರಿಸ್ಥಿತಿ :

1200 ಮೀ. ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿಯ ಮರಗಳಾಗಿ ಈ ಪ್ರಬೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರ ಸಹ್ಯಾದ್ರಿಯ ನಡುವಿನ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

DC., Prodr. 15(1)64.1864;;Gamble,Fl.Madras 2:1221. 1993(rep.ed.); Saldanha, Fl. Karnataka 1;59. 1984

Top of the Page