ಬ್ಲೆಫ್ಯಾರಿಸ್ಟೆಮ್ಮ ಸೆರ್ರೇಟಮ್ (Densst.) Suresh - ರೈಜೋಫೊರೇಸಿ

ಪರ್ಯಾಯ ನಾಮ : ರಾಡ್ಶೀಡಿಯ ಸೆರ್ರೇಟ Densest.; ಬ್ಲೆಫ್ಯಾರಿಸ್ಟೆಮ್ಮ ಕೋರಿಂಬೋಸಮ್ Benth.; ಬ್ಲೆಫ್ಯಾರಿಸ್ಟೆಮ್ಮ ಮೆಂಬ್ರೇನಿಫೋಲಿಯ (Miq.) Ding Hou

Vernacular names : Tamil: ಕರುಮರಚೆಡಿ;ನಿಕುರುಂದ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 6 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ಬೆಂಡುಯುಕ್ತ ವಾಯುವಿನಿಮಯ ರಂಧ್ರಗಳ ಸಮೇತವಿರುತ್ತವೆ; ಕಚ್ಚು ಮಾಡಿದ ಜಾಗ ಹಳದಿ ಬಣ್ಣದ ಛಾಯೆಯಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿರುತ್ತವೆ,ಸೂಕ್ಷ್ಮ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ತೊಟ್ಟುಗಳ ನಡುವೆ ಇರುತ್ತವೆ,ಉದುರಿದ ನಂತರ ಗುರುತುಗಳನ್ನು ಉಳಿಸುತ್ತವೆ; ತೊಟ್ಟು 1 ಸೆಂ.ಮೀ.ವರೆಗಿನ ಉದ್ದವಿದ್ದು,ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರವನ್ನು ಹೊಂದಿದ್ದು ಎಳೆಯದಾಗಿದ್ದಾಗ ಮೃದು ತುಪ್ಪಳದಿಂದ ಆವೃತವಾಗಿರುತ್ತದೆ; ಪತ್ರಗಳು7.5 -16.5 X 4–7.45 ಸೆಂ.ಮೀ. ಗಾತ್ರ, ಅಂಡವೃತ್ತ ಅಥವಾ ಸಂಕುಚಿತ ಬುಗುರಿಯ ಆಕಾರ ಹೊಂದಿದ್ದು, ಕ್ರಮೇಣ ಚೂಪಾಗುವ ಮಾದರಿಯ ತುದಿ, ಚೂಪಾದ ಅಥವಾ ಬೆಣೆಯಾಕಾರದ ಬುಡ, ದುಂಡೇಣಿನ ಅಂಚು (ಸಾಮಾನ್ಯವಾಗಿ ಅಂಚಿನ ಉದ್ದದ ಮೂರನೇ ಎರಡರಷ್ಟು) ತೆಳುಪದರದ ಅಥವಾ ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ತಳಭಾಗದಲ್ಲಿ ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ ಅಥವಾ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 7 ರಿಂದ 8 ಜೋಡಿಗಳಿದ್ದು ಕ್ರಮೇಣವಾಗಿ ಬಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಂತರವುಳ್ಳ ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯವು..
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಮಾದರಿಯಲ್ಲಿರುತ್ತವೆ;ಹೂಗಳು ಸಂಕೀರ್ಣ ಲಿಂಗಿಗಳಾಗಿದ್ದು ಹೆಣ್ಣು ಮತ್ತು ಗಂಡು ಹೂಗಳು ಪ್ರತ್ಯೇಕ ಸಸ್ಯಳಲ್ಲಿರುತ್ತವೆ ಹಾಗೂ ಬಿಳಿ ಬಣ್ಣದಲ್ಲಿರುತ್ತವೆ;ಪುಷ್ಪ ದಳಗಳು ಆಳವಾದ ಸೀಳಿಕೆಗಳ ಸಮೇತವಿರುತ್ತವೆ.
ಕಾಯಿ / ಬೀಜ : ಸಂಪುಟ ಫಲಗಳು ಉಪಗೋಳಾಕಾರದಲ್ಲಿದ್ದು, 0.7 ಸೆಂ.ಮೀ. ಅಡ್ಡಗಲತೆಯಲ್ಲಿದ್ದು ಹಸಿರು ಮಿಶ್ರಿತ ಕಪ್ಪು ಬಣ್ಣಹೊಂದಿರುತ್ತವೆ;ಬೀಜಗಳು ಪತ್ರೆ ಸಮೇತವಿರುತ್ತವೆ.

ಜೀವಪರಿಸ್ಥಿತಿ :

700 ಮೀ. ಎತ್ತರದ ಪ್ರದೇಶಗಳಲ್ಲಿನ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಮರಗಳು ಅಪರೂಪವಾಗಿ ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ (ಉತ್ತರ ಮಲಬಾರು ಮತ್ತು ದಕ್ಷಿಣ ಕನ್ನಡ) ಸಹ್ಯಾದ್ರಿಯಲ್ಲಿ ಕಂಡುಬರುತ್ತದೆ.

ಸ್ಥಿತಿ :

ದುರ್ಬಲ ಸ್ಥಿತಿ (Nayar, 1997).

ಗ್ರಂಥ ಸೂಚಿ :

Nicols. et al., Interp. Hort. Malab. 214. 1988;Gamble, Fl. Pres.Madras 1:460.1997(rep.ed.); Sasidharan, Biodiversity documentation for Kerala- Flowering Plants,part 6:169.2004;Saldanha,Fl. Karnataka 2:57.1996;

Top of the Page