ಬೊಹ್ಮೆರಿಯ ಗ್ಲಾಮೆರುಲಿಫೆರ Miq. - ಅರ್ಟಿಕೇಸಿ

Synonym : ಬೊಹ್ಮೆರಿಯ ಮಲಬಾರಿಕ Wedd.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ ಅಂದಾಜು 4 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಂದು ಬಣ್ಣದಲ್ಲಿದ್ದು,ನಯವಾಗಿರುತ್ತದೆ .
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪದುಂಡಾಗಿದ್ದು,ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಕಾವಿನೆಲೆಗಳು ಉದುರುವ ಮಾದರಿಯಲ್ಲಿದ್ದು ಉದುರಿ ಹೋದ ನಂತರ ಗುರುತುಗಳನ್ನು ಉಳಿಸುತ್ತವೆ;ತೊಟ್ಟುಗಳು 9.5 ಮೀ.ವರೆಗಿನ ಉದ್ದವಿದ್ದು,ದುಂಡಾಗಿರುತ್ತವೆ,ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ ;ಪತ್ರಗಳು 8–16 X 3.5 - 6 ಸೆಂ.ಮೀ. ಗಾತ್ರ, ಅಂಡ - ಭರ್ಜಿಯ ಆಕಾರ ಹೊಂದಿದ್ದು, ಕ್ರಮೇಣ ಚೂಪಾಗುವವರೆಗಿನ ತುದಿ, ದುಂಡಾದ ಬುಡ,ದುಂಡೇಣು -ಗರಗಸ ದಂತಿತ ಅಂಚು ಹೊಂದಿದ್ದು, ತಳ ಭಾಗದಲ್ಲಿ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತದೆ ; ಪತ್ರಗಳ ಬುಡದಲ್ಲಿ 3 ನಾಳಗಳಿರುತ್ತವೆ; ಎರಡನೇ ದರ್ಜೆಯ ನಾಳಗಳು ಅಂದಾಜು 4 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಲಂಬ ರೇಖೆಗೆ ಸಮಕೋನದಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿನ ಗುಚ್ಛಗಳಲ್ಲಿರುತ್ತವೆ.
ಕಾಯಿ / ಬೀಜ : ಫಲಗಳು ಅಖೀನು ಮಾದರಿಯವು.

ಜೀವಪರಿಸ್ಥಿತಿ :

1200 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣದಿಂದ ಅರೆ ನಿತ್ಯ ಹರಿದ್ವರ್ಣದವರೆಗಿನ ಕಾಡುಗಳ ಒಳಾವರಣದಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ; ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Zoll., Syst. Veg. Ind. Archip. 101, 104. 1854; Gamble, Fl. Madras 3: 1387. 1998 (re. ed); Sasidharan, Biodiversity documentation for Kerala- Flowering Plants, part 6: 431. 2004.

Top of the Page