ಕೆನೇರಿಯಂ ಸ್ಟ್ರಿಕ್ಟಮ್ Roxb. - ಬರ್ಸರೇಸಿ

ಕನ್ನಡದ ಪ್ರಾದೇಶಿಕ ಹೆಸರು : ಹಾಲು ಮಡ್ಡಿ, ಕರೀಧೂಪ, ಮಂಡಧೂಪ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಬೃಹತ್ ವೃಕ್ಷಗಳಾದ ಈ ಪ್ರಭೇದ ಆನಿಕೆಗಳನ್ನೊಂಡು 30 ಮೀ. ವರೆಗಿನ ಎತ್ತರದವರೆಗೂ ಬೆಳೆಯುತ್ತವೆ.
ಕಾಂಡ ಮತ್ತು ತೊಗಟೆ : ಸ್ಪಷ್ಟವಾದ ಬುಡವುಳ್ಳಕಾಂಡವನ್ನು ಈ ಸಸ್ಯ ಹೊಂದಿರುತ್ತದೆ; ತೊಗಟೆ ಕಡು ಕಂದು ಬಣ್ಣದಲ್ಲಿದ್ದು, ವಾಯುವಿನಿಮಯ ಬೆಂಡು ಸಮೇತವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ತುಕ್ಕು ವರ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ.
ಜಿನುಗು ದ್ರವ : ಕಾಂಡದ ಕತ್ತರಿಸಿದ ತುದಿಗಳಿಂದ ಹೊಮ್ಮುವ ಅಂಟು ದ್ರವ ಕಡು ಕಂದು ಬಣ್ಣದಿಂದ ಕಪ್ಪು ಬಣ್ಣದ್ದಾಗಿರುತ್ತದೆ.
ಎಲೆಗಳು : ಅಸಮ ಸಂಖ್ಯಾ ಗರಿರೂಪಿ ಸಂಯುಕ್ತ ಮಾದರಿಯಲ್ಲಿನ ಎಲೆಗಳು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುವ ಎಲೆಗಳು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ, ಹಾಗೂ 40 ಸೆ.ಮೀ.ವರೆಗಿನ ಉದ್ದ ಹೊಂದಿರುತ್ತದೆ; ಕಿರು ಎಲೆಗಳು 3 ರಿಂದ 9 ಜೋಡಿಗಳ ಜೊತೆ ಒಂದು ಅಗ್ರವಾದದ್ದನ್ನೂ ಹೊಂದಿರುತ್ತವೆ, ಕಿರು ಎಲೆಗಳ ತೊಟ್ಟು 0.3 ರಿಂದ 0.7 ಸೆ.ಮೀ. ಅಗಲವಿದ್ದು, ಸಾಮಾನ್ಯವಾಗಿ ಚತುರಸ್ರಾಕಾರದಲ್ಲಿದ್ದು ಕೆಲವು ವೇಳೆ ಅಂಡಾಕಾರದಲ್ಲಿರುತ್ತದೆ, ಕಿರುಪತ್ರಗಳ ತುದಿ ಕ್ರಮೇಣವಾಗಿ ಚೂಪಾಗುವ ಮಾದರಿಯಲ್ಲಿದ್ದು, ಬುಡ ಭಾಗ ಅಸಮ್ಮಿತಿಯಾದ ಗುಂಡಾಕಾರವನ್ನು ಹೊಂದಿರುತ್ತದೆ; ಅಂಚು ಗರಗಸದಂತಿತ ಅಥವಾ ಸೂಕ್ಷ್ಮಗರಗಸ ದಂತಿತವಾಗಿರುತ್ತದೆ, ಮೇಲ್ಮೈ ತೊಗಲನ್ನು ಹೋಲುವ ರೀತಿ ಇರುತ್ತದೆ, ಪತ್ರದ ತಳಭಾಗ ತುಕ್ಕು ವರ್ಣದ ಮೃದು ತುಪ್ಪಳ ಅಥವಾ ದಟ್ಟ ತುಪ್ಪಳವನ್ನು ಹೊಂದಿದ್ದು ಮೇಲ್ಭಾಗ ರೋಮರಹಿತವಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು ಬಲಿಷ್ಠವಾಗಿದ್ದು, 11 ರಿಂದ 18 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ದುರ್ಬಲವಾಗಿ ಎಲೆದಿಂಡಿಗೆ ಅಡ್ಡವಾಗಿ ಕೂಡುವಂತಹವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿರುವ ಕವಲೊಡೆದ ಮಧ್ಯಾಭಿಸರ ಮಾದರಿಯಲ್ಲಿದ್ದು, ತುಕ್ಕು ವರ್ಣದ ದಟ್ಟವಾದ ಮೃದು ತುಪ್ಪಳದಿಂದ ಕೂಡಿರುತ್ತದೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯಲ್ಲಿದ್ದು, 5 ಸೆ.ಮೀ.ನವರೆಗಿನ ಉದ್ದವಿದ್ದು, ಅಂಡವೃತ್ತಾಕಾರವಾಗಿರುತ್ತದೆ.

ಜೀವಪರಿಸ್ಥಿತಿ :

1600 ಮೀ. ಎತ್ತರ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಆಗಾಗ್ಗೆ ಕಂಡು ಬರುತ್ತದೆ.

ವ್ಯಾಪನೆ :

ಭಾರತ ಮತ್ತು ಮ್ಯಾನ್ಮಾರ್ ; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Roxburgh, Fl. Ind. 3:138. 1832; Gamble, Fl. Madras 1:172. 1997 (re.ed); Sasidharan, Biodiversity documentation for Kerala - Flowering Plants, part 6:86. 2004; Saldanha, Fl. Karnataka 2:199. 1996. Cooke, Fl. Bombay 1:202. 1902.

Top of the Page