ಕರಾಲ್ಲಿಯ ಬ್ರಾಖಿಯೇಟ (Lour.) Merrill - ರೈಜೋಫೊರೇಸಿ

ಪರ್ಯಾಯ ನಾಮ : ಡಯಾಟೊಮ ಬ್ರಾಖಿಯೇಟ Lour.;ಕರಾಲ್ಲಿಯ ಇಂಟೆಜೆರ್ರಿಮ

Vernacular names : Tamil: ಕರಕಂಡೆಲ್;ವಲ್ಲಭಂ;ವಲೋವಮ್;ವಂಕಣ;ವರಂಗುMalayalam: ಅಂದಿಪುನಾರ್ ;ಅಂಡಿಮುರಿಯ;ಉಂಡಿಗಿಡ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ಕವಲುಗಳು ಸಾಮಾನ್ಯವಾಗಿ ಕಾಂಡದ ಲಂಬ ರೇಖೆಗೆ ಸಮಕೋನದಲ್ಲಿರುತ್ತವೆ;ಕೆಲವು ವೇಳೆ ಕಾಂಡದ ಮೇಲೆ ಮಾಂಸಲವಾದ ಅಪಸ್ಥಾನಿಕ ಬೇರುಗಳಿರುತ್ತವೆ;ತೊಗಟೆ ಎಳೆಯದಾಗಿದ್ದಾಗ ಬೂದು ಬಣ್ಣದಲ್ಲಿದ್ದು ನಂತರ ದೊಡ್ಡ ಗಾತ್ರದ ಮತ್ತು ವಾಯುವಿನಿಮಯ ಬೆಂಡು ರೂಪದ ರಂಧ್ರಗಳ ಸಮೇತವಿರುತ್ತದೆ;ಕಚ್ಚು ಮಾಡಿದ ಜಾಗ ಕಂದು ಬಣ್ಣದ ಛಾಯೆಯಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಅಂತಿಮ ಕಿರುಕೊಂಬೆಗಳು ಕೊಂಚ ಮಟ್ಟಿಗೆ ಕೋನಯುಕ್ತವಾಗಿರುತ್ತವೆ, ರೋಮರಹಿತವಾಗಿರುತ್ತವೆ , ಬೆಂಡುಯುಕ್ತ ವಾಯುವಿನಿಮಯ ರಂಧ್ರಗಳ ಸಮೇತವಿರುತ್ತವೆ
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ತೊಟ್ಟುಗಳ ನಡುವೆ ಇರುತ್ತವೆ,ಉದುರಿದ ನಂತರ ಗುರುತುಗಳನ್ನು ಉಳಿಸುತ್ತವೆ; ತೊಟ್ಟು 0.3-0.5 ಸೆಂ.ಮೀ.ವರೆಗಿನ ಉದ್ದವಿದ್ದು,ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರವನ್ನು ಹೊಂದಿದ್ದು ರೋಮರಹಿತವಾಗಿರುತ್ತವೆ; ಪತ್ರಗಳು7 -10(12.6) X 4–6.5 ಸೆಂ.ಮೀ. ಗಾತ್ರ, ವಿಶಾಲ ಬುಗುರಿ ಅಥವಾ ವಿಶಾಲ ಅಂಡವೃತ್ತದ ಆಕಾರ ಹೊಂದಿದ್ದು, ಚೂಪಾದ ಅಥವಾ ಚೂಪಲ್ಲದ ಮಾದರಿಯ ತುದಿ, ಬೆಣೆಯಾಕಾರದ ಬುಡ, ನಯವಾದ ಮತ್ತು ಹಿಂಚಾಚಿದ ಅಂಚು,ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ತಳಭಾಗದಲ್ಲಿ ರೋಮರಹಿತವಾಗಿರುತ್ತವೆ, ಒಣಗಿದಾಗ ಕಂದು ಬಣ್ಣದಲ್ಲಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು 6 ರಿಂದ 10 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಮಧ್ಯಾರಂಭಿ ಮಾದರಿಯಲ್ಲಿರುತ್ತವೆ;ಹೂಗಳು ತೊಟ್ಟುರಹಿತವಾಗಿದ್ದು,ಕೆನೆ ಬಣ್ಣದಲ್ಲಿರುತ್ತವೆ.
ಕಾಯಿ / ಬೀಜ : ಬೆರ್ರಿ ಗಳು ಕೆಂಪು ಬಣ್ಣ ಹೊಂದಿದ್ದು ಗೋಳಾಕಾರದಲ್ಲಿತ್ತವೆ;ಬೀಜ ಒಂದಿದ್ದು ಮೂತ್ರ ಪಿಂಡದ ಆಕಾರದಲ್ಲಿರುತ್ತದೆ.

ಜೀವಪರಿಸ್ಥಿತಿ :

1200 ಮೀ. ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಉಪಛಾವಣಿಯಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ಆಸ್ಟ್ರೇಲಿಯ;ಪಶ್ಚಿಮ ಘಟ್ಟದಲ್ಲಿನ ಎಲ್ಲಾ ಪ್ರದೇಶಗಳು.

ಗ್ರಂಥ ಸೂಚಿ :

Philipp.J.Sci. 15:249.1919;Gamble, Fl. Pres.Madras 1:459.1997(rep.ed.); Sasidharan, Biodiversity documentation for Kerala- Flowering Plants,part 6:170.2004;Saldanha,Fl. Karnataka 2:59.1996; Cooke,Fl. Bombay 1:476.1903; Almeida,Fl.Maharashtra 2:244.1998.

Top of the Page