ಕ್ಯಾಸಿಯಾರಿಯ ತ್ವಾಯ್ಟೆಸಿಯೈ Briq. - ಫ್ಲಕೋರ್ಶಿಯೇಸಿ

Synonym : ಕ್ಯಾಸಿಯಾರಿಯ ಕೊರಿಯಾಸಿಯ Thw.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಹಳದಿ ಮಿಶ್ರಿತ ಕಂದುಬಣ್ಣ ಹೊಂದಿದ್ದು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದುಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ ; ಕಾವಿನೆಲೆಗಳು ಅಸ್ಥಿರವಾಗಿರುತ್ತವೆ;ತೊಟ್ಟುಗಳು 0.7 ರಿಂದ 1 ಸೆಂ.ಮೀ. ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಮತ್ತು ರೋಮರಹಿತವಾಗಿದ್ದು ಎಳೆಯದಾಗಿದ್ದಾಗ ಕೆಂಪಾಗಿರುತ್ತದೆ; ಪತ್ರಗಳು 4.5 – 11.5 X 2 – 7.5 ಸೆಂ.ಮೀ. ಗಾತ್ರವಿದ್ದು ಸಾಮಾನ್ಯವಾಗಿ ಬುಗುರಿ ಆಕಾರ ಕೆಲವು ವೇಳೆ ಬುಗುರಿ – ಈಟಿಯ ಅಥವಾ ವಿಶಾಲ ಅಂಡವೃತ್ತದಿಂದ ಉಪ-ವೃತ್ತದ ಆಕಾರ ಹೊಂದಿದ್ದು ಚೂಪಲ್ಲದುದರಿಂದ ದುಂಡಾದ ಅಥವಾ ಅಪರೂಪವಾಗಿ ಅಗ್ರದಲ್ಲಿ ಆಳವಿಲ್ಲದ ಕಚ್ಚುಳ್ಳ ಅಥವಾ ಅಗ್ರದಲ್ಲಿ ಆಳವಾದ ಕಚ್ಚುಳ್ಳ ತುದಿ,ಬೆಣೆಯಾಕಾರದ ಅಥವಾ ಒಳಬಾಗಿದ ತಳವುಳ್ಳ ಬುಡ , ಅಂಚು ನಯವಾಗಿದ್ದು ಹಿಂಸುರುಳಿಗೊಂಡಿರುತ್ತದೆ,ಮೇಲ್ಮೈ ಚರ್ಮ ಅಥವಾ ಉಪ-ಚರ್ಮವನ್ನೋಲುವ ರೀತಿ ಇದ್ದು ಮೇಲ್ಭಾಗ ಹೊಳಪಿನ ಸಮೇತವಿರುತ್ತದೆ, ರೋಮರಹಿತವಾಗಿರುತ್ತದೆ ಮತ್ತು ಪ್ರಕಾಶ ಭೇಧ್ಯ ರಸಗ್ರಂಥಿಗಳನ್ನು ಹೊಂದಿರುತ್ತದೆ.ಎರಡನೇ ದರ್ಜೆಯ ನಾಳಗಳು 6 ರಿಂದ 7ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳವಿನ್ಯಾಸದಲ್ಲಿರುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿರುವ ಗುಚ್ಛಗಳಲ್ಲಿರುತ್ತವೆ ಮತ್ತು 4ರಿಂದ 6 ಗುಚ್ಛಗಳು ಗುಂಪಾಗಿರುತ್ತವೆ ಹಾಗೂ ಹಸಿರು ಬಣ್ಣದಲ್ಲಿದ್ದು ಅಂದಾಜು 0.4 ಸೆಂ.ಮೀ. ಅಡ್ಡಗಲತೆಯನ್ನು ಹೊಂದಿರುತ್ತವೆ.
ಕಾಯಿ / ಬೀಜ : ಸಂಪುಟ ಫಲಗಳು ಅಂಡವೃತ್ತದ ಆಕಾರದಲ್ಲಿದ್ದು ಮಾಂಸಲವಾಗಿರುತ್ತದೆ ಹಾಗೂ ಅಂದಾಜು 1.7 ಸೆಂ.ಮೀ. ಉದ್ದವಿದ್ದು ಕಳಿತಾಗ ಹಳದಿ ಬಣ್ಣದಲ್ಲಿದ್ದು 2 ಕವಾಟಗಳನ್ನು ಹೊಂದಿರುತ್ತವೆ; ಬೀಜಗಳು 6 ರಿಂದ 9 ಇದ್ದು ಕೆಂಪು ಮಿಶ್ರಿತ ಕಿತ್ತಳೆ ಬಣ್ಣದ ಪತ್ರೆ ಸಮೇತವಾಗಿರುತ್ತವೆ.

ಜೀವಪರಿಸ್ಥಿತಿ :

ಅತಿ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಭಾರತ ಮತ್ತು ಶ್ರೀಲಂಕಾ ;ಪಶ್ಚಿಮ ಘಟ್ಟದಲ್ಲಿನ ಅಗಸ್ತ್ಯಮಲೆ, ಅಣ್ಣಾಮಲೈ,ಪಳನಿ ಬೆಟ್ಟಗಳು ಮತ್ತು ನೀಲಗಿರಿಯಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Briq., Ann. Cons. Jard. Bot. Geneve 62.1898;Gamble, Fl. Madras 1:521. 1997(rep.ed.) ; Sasidharan, Biodiversity documentation for Kerala- Flowering Plants, part 6:31.2004.

Top of the Page