ಕ್ಯಾಸೈನ್ ಪ್ಯಾನಿಕ್ಯುಲೇಟ (Wight & Arn.) Lobr.-Callen - ಸೆಲಾಸ್ಟ್ರೇಸಿ

Synonym : ಈಲಿಯೋಡೆಂಡ್ರಾನ್ ಪ್ಯಾನಿಕ್ಯುಲೇಟಮ್ Wt. & Arn.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಆನಿಕೆಗಳ ನ್ನುಳ್ಳ 40 ಮೀ ಎತ್ತರದವರೆಗೆ ಬೆಳೆಯುವ ದೊಡ್ಡ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ಅತಿವಯಸ್ಸಾದ ಮರಗಳಲ್ಲಿ ಕಾಂಡ ಟೊಳ್ಳಾಗಿರುತ್ತದೆ;ತೊಗಟೆ ಬೂದುಬಣ್ಣ ಹೊಂದಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ನಸುಗೆಂಪು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಕತ್ತರಿಸಿದ ಕೊನೆಗಳಿಂದ ಜಲರೂಪಿ ದ್ರವ ಹೊರಹೊಮ್ಮುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಅಭಿಮುಖಿ ಅಥವಾ ಉಪಅಭಿಮುಖಿಗಳಾಗಿತ್ತವೆ.;ಎಲೆತೊಟ್ಟುಗಳ ಉದ್ದ 1.5 ಸೆಂ.ಮೀ ಇದ್ದು ಕಾಲುವೆಗೆರೆ ಸಮೇತವಾಗಿರುತ್ತವೆ;;ಪತ್ರಗಳು 7-8 X 2.5-3.5 ಸೆಂ.ಮೀ ಗಾತ್ರವಿದ್ದು,ಅಂಡವೃತ್ತಾಕೃತಿಯಲ್ಲಿಅಥವಾ ಕ್ರಮೇಣ ಚೂಪಾಗುವ ಮಾದರಿಯ ತುದಿ ಹೊಂದಿದ್ದು ತಿರುಚಿಕೊಂಡಿ-ರುತ್ತದೆ,ಎಲೆ ಬುಡ ಚೂಪಾದ ಮಾದರಿಯಿಂದ ಬೆಣೆಯಾಕಾರ-ದವರೆವಿಗೂ ಇರುತ್ತದೆ,ಪತ್ರದ ಮೇಲ್ಮೈ ರೋಮರಹಿತ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ; ಎಲೆಯ ಅಂಚು ಗುಂಡೇಣಿನ ಹಲ್ಲುಗಳನ್ನು ಹೊಂದಿರುತ್ತದೆ;ಎರಡನೇ ದರ್ಜೆಯ ನಾಳಗಳು 7 ರಿಂದ 9 ಜೋಡಿಗಳಿದ್ದು ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ನೀಳಛತ್ರ ಮಾದರಿಯವು; ಹೂಗಳು ಹಸಿರು ಛಾಯೆಯುಳ್ಳ ಶ್ವೇತ ಬಣ್ಣ ಹೊಂದಿದ್ದು ಚಮಚದಾಕಾರದ ಪುಷ್ಪದಳಗಳನ್ನು ಹೊಂದಿರುತ್ತವೆ.
ಕಾಯಿ /ಬೀಜ : ಡ್ರೂಪುಗಳು ಗೋಳಾಕರದಲ್ಲಿದ್ದು ಎರಡು ಬೀಜಗಳನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

ಹೊರಹೊಮ್ಮುವ ಮರಗಳಾಗಿ 700 ರಿಂದ 1400 ಮೀ.ವರೆಗಿನ ಮಧ್ಯಮ ಎತ್ತರದ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿಈ ಪ್ರಬೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಣ್ಣಾಮಲೈ ಮತ್ತು ಪಾಲಕ್ಕಾಡು ಪ್ರದೇಶಗಳಲ್ಲಿ ಬೆಳೆಯುತ್ತದೆ.

ಗ್ರಂಥ ಸೂಚಿ :

Adansonia ser.: 2 :15.220. 1976; Gamble, Fl. Madras 1:212. 1997(re. ed..); Sasidharan, Biodiversity documentation for Kerala- Flowering Plants, part 6:95.2004.

Top of the Page