ಸೆಲ್ಟಿಸ್ ಫಿಲಿಪ್ಪೆನ್ಸಿಸ್ Bl. var. ವೈಟಿಯೈ (Planch.) Soep. - ಅಲ್ಮೇಸಿ

ಪರ್ಯಾಯ ನಾಮ : ಸೆಲ್ಟಿಸ್ ವೈಟಿಯೈ

Vernacular names : Tamil: ಭೂತಕ್ಕಾಲಿ,ಕಲ್ಲುವೀರ,ಪೀನಾರಿ,ವೆಳ್ಳಕ್ಕುಯನ್,ಬೂತ,ಮನಲ್ಲಿMalayalam: ಅಡುವ ಮರ,ಬಿಳಿಕಾಕ ಮುಷ್ಟಿ,ಗೋರುಕಲ್ಲು,ಪಿಳ್ಳೆ ಮರ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು,ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ;ಕಚ್ಚು ಮಾಡಿದ ಜಾಗ ಕಂದು ಬಣ್ಣದ ಛಾಯೆಯಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕೋನಯುಕ್ತದಿಂದ ಉಪದುಂಡಾಗಿರುವ ರೀತಿಯಲ್ಲಿರುತ್ತವೆ, ಎಳೆಯದಾಗಿದ್ದಾಗ ಮೃದುತುಪ್ಪಳದಿಂದ ಕೂಡಿರುತ್ತವೆ ನಂತರ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮಾದರಿಯಲ್ಲಿ ಜೋಡಣೆಯಾಗಿದ್ದು, ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ; ಕಾವಿನೆಲೆಗಳು ಪಾರ್ಶ್ವದಲ್ಲಿದ್ದು ಮೃದುತುಪ್ಪಳದಿಂದ ಕೂಡಿರುತ್ತವೆ,ಉದುರುವ ಮಾದರಿಯಲ್ಲಿದ್ದು ಉದುರಿ ಹೋದ ನಂತರ ಗುರುತುಗಳನ್ನು ಉಳಿಸುತ್ತವೆ; ತೊಟ್ಟುಗಳು 1-1.5 ಸೆಂ.ಮೀ. ಉದ್ದವಿದ್ದು, ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತವೆ,ಎಳೆಯದಾಗಿದ್ದಾಗ ಮೃದುತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 4.5 – 11.5 X2-5 ಸೆಂ.ಮೀ. ಗಾತ್ರ, ಅಂಡವೃತ್ತದಿಂದ ಅಂಡವೃತ್ತ - ಅಂಡದವರೆಗಿನ ಆಕಾರ,ಚೂಪಾದ ಮಾದರಿಯಿಂದ ಕ್ರಮೇಣ ಚೂಪಾಗುವವರೆಗಿನ ತುದಿ, ದುಂಡಾದ ಅಥವಾ ಚೂಪಾದ,ಕೆಲವು ವೇಳೆ ಅಸಮ್ಮಿತಿಯಾದ ಬುಡ,ನಯವಾದಅಂಚು,ಕಾಗದವನ್ನೋಲುವರೀತಿಯಿಂದತೊಗಲನ್ನೋಲುವವರೆಗಿನಮೇಲ್ಮೈಹೊಂದಿದ್ದು,ರೋಮರಹಿತವಾಗಿರುತ್ತವೆ;ಪತ್ರಗಳ ಬುಡದಲ್ಲಿ 3-ನಾಳಗಳಿರುತ್ತವೆ;ಮಧ್ಯನಾಳಪತ್ರದಮೇಲ್ಭಾಗದಲ್ಲಿಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 3 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದವುಗಳಾಗಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಮಾದರಿಯವು;ಹೂಗಳು ಸಂಕೀರ್ಣ ಲಿಂಗಿಗಳು,ಸಾಮಾನ್ಯವಾಗಿ ಹೊಸ ಕಿರುಕೊಂಬೆಗಳ ಮೇಲಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು 0.8 ಸೆಂ.ಮೀ.ವರೆಗಿನ ುದ್ದವಿರುತ್ತವೆ; ಬೀಜಗಳ ಸಂಖ್ಯೆ 1.

ಜೀವಪರಿಸ್ಥಿತಿ :

1400 ಮೀ. ಎತ್ತರದಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಬೆಳೆಯುವ ಮರಗಳು.

ವ್ಯಾಪನೆ :

ಭಾರತ,ಮ್ಯಾನ್ಮಾರ್,ಶ್ರೀಲಂಕಾ ಮತ್ತು ಇಂಡೋಚೈನ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Steenis, Fl. Males. I, 8: 62. 1977; Gamble, Fl. Madras 3: 1349. 1998 (re. ed); Sasidharan, Biodiversity documentation for Kerala- Flowering Plants, part 6: 436. 2004.

Top of the Page