ಚಿಯೊನ್ಯಾಂತಸ್ ಮಲ-ಎಲೆಂಜಿ (Dennst.) P.S. Green - ಓಲಿಯೇಸಿ

ಪರ್ಯಾಯ ನಾಮ : ಫೊರ್ಸಿತಿಯ ಮಲ-ಎಲೆಂಜಿ Dennst.; ಲಿನೋಸಿಯೆರ ಮಲಬಾರಿಕ Wall. ex G.Don; ಚಿಯೊನ್ಯಾನ್ತಸ್ ಮಲಬಾರಿಕಸ್ (Wall. ex G.Don) Bedd.

Vernacular names : Tamil: ಕಲೆತಲ;ಮಲ ಎಲೆಂಜಿ;ಪೆರುಂಬಾಲ್Malayalam: ಹರಿಯಾಗೆ,ಹೊರೆಯಕ್ಕಿಮರ,ಕೊಂಡೆಮರ,ಮದ್ದಲೆ,ಮಹಿಸಾಲೆ ಮರ.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು ನಯವಾಗಿರುತ್ತದೆ ಮತ್ತು ಹೊಳಪಾಗಿದ್ದು ಉಬ್ಬಿದ ವಾಯುವಿನಿಮಯ ಬೆಂಡು ರಂಧ್ರಗಳಿಂದ ಆವೃತವಾಗಿರುತ್ತದೆ;ಕಚ್ಚು ಮಾಡಿದ ಜಾಗ ಮಾಸಲು ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪ-ದುಂಡಾಗಿದ್ದು ರೋಮರಹಿತವಾಗಿರುತ್ತವೆ ಹಾಗೂ ಬಿಳಿ ಬಣ್ಣ ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ ; ಎಲೆತೊಟ್ಟುಗಳು 0.5 ರಿಂದ 1.2 ಸೆಂ.ಮೀ.ಉದ್ದವಿದ್ದು ,ಕಾಲುವೆ ಗೆರೆಯನ್ನು ಹೊಂದಿದ್ದು ರೋಮರಹಿತವಾಗಿರುತ್ತದೆ; ಪತ್ರಗಳು 5-14.5X 2.5-5 ಸೆಂ.ಮೀ. ಗಾತ್ರ, ಅಂಡವೃತ್ತ-ಬುಗುರಿಯ ಆಕಾರ,ಥಟ್ಟನೆ ಕ್ರಮೇಣ ಚೂಪಾಗುವ ಅಥವಾ ಕೆಲವು ವೇಳೆ ದುಂಡಾದ ತುದಿ, ಬೆಣೆಯಾಕಾರದ ಬುಡ, ನಯವಾದ ಅಥವಾ ತುಸುವಾಗಿ ಹಿಂಸುರುಳಿಯಾದ ಅಂಚು, ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ಮಬ್ಬು ಹಳದಿ ಛಾಯೆಯುಳ್ಳ ಹಸಿರು ಬಣ್ಣದಲ್ಲಿರುತ್ತವೆ ಹಾಗೂ ತಳಭಾಗದಲ್ಲಿ ರೋಮರಹಿತ -ವಾಗಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು ತೀರಾ ತೆಳುವಾಗಿರುತ್ತವೆ ಮತ್ತು ಹೆಚ್ಚೂ ಕಡಿಮೆ ಸಮಾಂತರ -ದಲ್ಲಿರುತ್ತವೆ ;ಮೂರನೇ ದರ್ಜೆಯ ಮತ್ತು ಮೇಲ್ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಕೆಲವು ಹೂಗಳನ್ನೊಳಗೊಂಡ ಮಧ್ಯಾರಂಭಿ ಮಾದರಿಯಲ್ಲಿರುತ್ತವೆ ಅಥವಾ ಅಕ್ಷಾಕಂಕುಳಿನಲ್ಲಿನ ಗುಛ್ಛಗಳ ಮೇಲಿರುತ್ತವೆ;ಪುಷ್ಪಮಂಜರಿ ವೃಂತ ತೆಳುವಾಗಿರುತ್ತವೆ ; ಹೂಗಳು ತೊಟ್ಟುರಹಿತವಾಗಿದ್ದು ಹಳದಿ ಮಿಶ್ರಿತ ಬಿಳಿ ಬಣ್ಣ ಹೊಂದಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಅಂಡವೃತ್ತ ಅಥವಾ ಅಂಡಾಕಾರ ಹೊಂದಿದ್ದು 1.5 ಸೆಂ.ಮೀ. ಉದ್ದ ಹೊಂದಿರುತ್ತವೆ; ಬೀಜಗಳ ಸಂಖ್ಯೆ ಒಂದು.

ಜೀವಪರಿಸ್ಥಿತಿ :

1000 ಮೀ. ಎತ್ತರದವರೆಗಿನ ಭಗ್ನಗೊಂಡ ನಿತ್ಯ ಹರಿದ್ವರ್ಣದಿಂದ ಅರೆ ನಿತ್ಯ ಹರಿದ್ವರ್ಣದವರೆಗಿನ ಕಾಡುಗಳಲ್ಲಿನ ಒಳ ಛಾವಣಿಯಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳು.

ಗ್ರಂಥ ಸೂಚಿ :

Bull.Bot ;Gamble, . Surv. India 26:124.1984;Fl. Madras 2:794.1993(rep. ed.);Sasidharan,Biodiversity documentation for Kerala- Flowering Plants,part 6:275.2004;Cooke,Fl. Bombay 2:117.1908; Almeida,Fl.Maharashtra 3:181.2001

Top of the Page