ಚಿಯೊನ್ಯಾಂತಸ್ ರಾಮಿಫ್ಲೋರಸ್ Roxb. - ಓಲಿಯೇಸಿ

ಪರ್ಯಾಯ ನಾಮ : ಲಿನೋಸಿಯೆರ ಮ್ಯಾಕ್ರೋಫಿಲ್ಲWall. ಲಿನೋಸಿಯೆರ ರಾಮಿಫ್ಲೋರ Roxb.

Vernacular names : Malayalam: ಕುಂಡೆ ಮರ,ಲಾವಂತಿ ಮರ,ಮಣಕಿ ಮರ,ತೊಂಡೆ ಮರ.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಂದು ಬಣ್ಣ ಹೊಂದಿದ್ದು ವಾಯುವಿನಿಮಯ ‘ದಟ್ಟ ಬೆಂಡು’ ರಂಧ್ರಗಳ ಸಮೇತವಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು ಛಾಯೆಯುಳ್ಳ ಮಚ್ಚೆಗಳಿಂದ ಕೂಡಿದ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ನಾಲ್ಕುಕೋನಗಳನ್ನು ಹೊಂದಿದ್ದು ಬಲಿತಾಗ ದುಂಡಗಿರುತ್ತವೆ ಮತ್ತು ರೋಮರಹಿತವಾಗಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿ -ರುತ್ತವೆ; ಎಲೆತೊಟ್ಟುಗಳು 2 ರಿಂದ 3.5 ಸೆಂ.ಮೀ.ಉದ್ದವಿದ್ದು ,ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ, ಮತ್ತು ರೋಮರಹಿತವಾಗಿರುತ್ತದೆ; ಪತ್ರಗಳು7. 5-14X 3.5-5 ಸೆಂ.ಮೀ. ಗಾತ್ರ, ಅಂಡವೃತ್ತ, ಅಂಡವೃತ್ತ-ಚತುರಸ್ರ ಅಥವಾ ಅಂಡವೃತ್ತ-ಬುಗುರಿಯವರೆಗಿನ ಆಕಾರ, ಕ್ರಮೇಣ ಚೂಪಾಗುವ ಅಥವಾ ಕೆಲವು ವೇಳೆ ಚೂಪಾಗಿರುವ ತುದಿ, ಒಳಬಾಗಿದ ಬುಡ, ನಯವಾದ ಅಥವಾ ಸ್ವಲ್ಪಮಟ್ಟಿಗೆ ಹಿಂಸುರುಳಿಯಾದ ಅಂಚು, ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ತಳಭಾಗದಲ್ಲಿ ರೋಮರಹಿತವಾಗಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 8 ರಿಂದ 14 ಜೋಡಿಗಳಿದ್ದು, ತೆಳುವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ ಅಥವಾ ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಥವಾ ಅಕ್ಷಾಕಂಕುಳು ಅಥವಾ ತುದಿಯಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾಭಿಸರ ಮಾದರಿಯಲ್ಲಿರುತ್ತವೆ;ಹೂಗಳು ಉಪ ತೊಟ್ಟು ಸಹಿತವಾಗಿದ್ದು ಬಿಳಿ ಬಣ್ಣ ಹೊಂದಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಚತುರಸ್ರದ ರೀತಿಯಲ್ಲಿದ್ದು, 2 ಸೆಂ.ಮೀ. ಉದ್ದ ಹೊಂದಿದ್ದು, ರೋಮರಹಿತವಾಗಿದ್ದು, ಒಣಗಿದಾಗ ಉಬ್ಬು ತಗ್ಗು ಗೆರೆಗಳ ಸಮೇತವಿರುತ್ತವೆ; ಬೀಜ ಒಂದು.

ಜೀವಪರಿಸ್ಥಿತಿ :

800 ಮತ್ತು 1400 ಮೀ.ನಡುವಿನ ಎತ್ತರದವರೆಗಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಅಂಚಿನಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಇಂಡೋಮಲೇಸಿಯ;ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Fl. Ind. 1: 106.1820;Fl. Madras 2:795.1993(rep. ed.); Sasidharan, Biodiversity documentation for Kerala- Flowering Plants,part 6:275.2004;

Top of the Page