ಚಿಯೊನ್ಯಾಂತಸ್ ರಾಮಿಫ್ಲೋರಸ್ Roxb. var. ಪೆನಿನ್ಸ್ಯುಲ್ Ravikumar & Lakshmanan - ಓಲಿಯೇಸಿ

Synonym : ಲಿನೋಸಿಯೆರ ಮ್ಯಾಕ್ರೋಫಿಲ್ಲWall. ಲಿನೋಸಿಯೆರ ರಾಮಿಪ್ಲೋರ Roxb.

Vernacular names : Malayalam: ಕುಂಡೆ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಂದು ಬಣ್ಣ ಹೊಂದಿದ್ದು ವಾಯುವಿನಿಮಯ ‘ದಟ್ಟ ಬೆಂಡು’ ರಂಧ್ರಗಳ ಸಮೇತವಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ನಾಲ್ಕುಕೋನಗಳನ್ನು ಹೊಂದಿದ್ದು ಬಲಿತಾಗ ದುಂಡಗಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ ಹಾಗೂ ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಎಲೆತೊಟ್ಟುಗಳು 2 ರಿಂದ 3 ಸೆಂ.ಮೀ.ಉದ್ದವಿದ್ದು ,ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ, ಮತ್ತು ರೋಮರಹಿತವಾಗಿರುತ್ತದೆ; ಪತ್ರಗಳು8-15 X 4.5-5 ಸೆಂ.ಮೀ. ಗಾತ್ರ, ಅಂಡವೃತ್ತದ ಆಕಾರ,ಚೂಪಾದ ತುದಿ,ಒಳಬಾಗಿದ ಬುಡ, ನಯವಾದ ಅಥವಾ ತುಸುವಾಗಿ ತರಂಗಿತವಾದ ಅಂಚು, ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ತಳಭಾಗದಲ್ಲಿ ರೋಮರಹಿತವಾಗಿರುತ್ತವೆ ಮತ್ತು ತೆಳು ಬಣ್ಣ ಹೊಂದಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಸ್ವಲ್ಪ ಮಟ್ಟಿನ ಕಾಲುವೆ ಗೆರೆ ಹೊಂದಿರುತ್ತದೆ;ಎರಡನೇ ದರ್ಜೆಯ ನಾಳಗಳು 8 ರಿಂದ 12 ಜೋಡಿಗಳಿದ್ದು ತೆಳುವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ ಅಥವಾ ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾರಂಭಿ ಮಾದರಿಯಲ್ಲಿರುತ್ತವೆ;ಹೂಗಳು ತೆಳು ಹಳದಿ ಬಣ್ಣದವು;ತೊಟ್ಟುಗಳು 0.2 ಸೆಂ.ಮೀ. ಉದ್ದವನ್ನು ಹೊಂದಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಅಂಡವೃತ್ತದ ಆಕಾರದಲ್ಲಿದ್ದು ,ಓರೆಯಾಗಿರುತ್ತವೆ ಮತ್ತು 3.5 ಸೆಂ.ಮೀ. ಉದ್ದ ಹೊಂದಿದ್ದು, ರೋಮರಹಿತವಾಗಿದ್ದು,ಕಳಿತಾಗ ಕೆನ್ನೀಲಿ ಬಣ್ಣದಲ್ಲಿರುತ್ತವೆ; ಬೀಜಗಳ ಸಂಖ್ಯೆ ಒಂದು.

ಜೀವಪರಿಸ್ಥಿತಿ :

1300 ಮತ್ತು 2000 ಮೀ.ನಡುವಿನ ಅತಿಎತ್ತರದವರೆಗಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಮೇಲ್ಛಾವಣಿಯಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿಯ ವರಶನಾಡು, ಅಣ್ಣಾಮಲೈ ಮತ್ತು ಪಳನಿ ಬೆಟ್ಟಗಳು ಮತ್ತು ಉತ್ತರ ಸಹ್ಯಾದ್ರಿಯ ಬಾಬಾಬುಡನ್ ಗಿರಿ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Ravikumar & Lakshmanan, Bull. Bot. Surv. India 31: 163.1989; Sasidharan, Biodiversity documentation for Kerala- Flowering Plants,part 6:276.2004;

Top of the Page