ಚಿಯೊನಾಂತಸ್ ಜೇಲಾನಿಕಸ್ L. - ಓಲಿಯೇಸಿ

Synonym : ಲಿನೋಸಿಯೆರ ಜೇಲಾನಿಕ (L.) Gamble

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು,ಚಕ್ಕೆಯೇಳುವ ರೂಪದಲ್ಲಿರುತ್ತವೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು, ಬೆಂಡು ರಂಧ್ರಗಳ ಸಮೇತವಿರುತ್ತವೆ, ರೋಮರಹಿತವಾಗುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖಿ ಕತ್ತರಿಯ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.7 ಸೆಂ.ಮೀ. ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದಿಂದ ಒಣಗಿದಾಗ ಕೊಂಚ ಮಟ್ಟಿಗೆ ಕಾಲುವೆಗೆರೆವರೆಗಿನ ಆಕಾರದಲ್ಲಿರುತ್ತವೆ, ರೋಮರಹಿತವಾಗಿರುತ್ತವೆ; ಪತ್ರಗಳು 4 - 7 X 1.5 – 3 ಸೆಂ.ಮೀ. ಗಾತ್ರ, ಬುಗುರಿ ಅಥವಾ ಬುಗುರಿ-ಭರ್ಜಿಯವರೆಗಿನ ಆಕಾರ ಹೊಂದಿದ್ದು, ಚೂಪಲ್ಲದ ಮಾದರಿಯ ತುದಿ,ಬೆಣೆಯಾಕಾರದ ಅಥವಾ ಒಳಬಾಗಿದ ಮಾದರಿಯ ಬುಡ, ನಯವಾದ ಅಂಚು, ರೋಮರಹಿತವಾದ ತಳಭಾಗ, ತೊಗಲನ್ನು ಹೋಲುವ ಮೇಲ್ಮೈ ಹೊಂದಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು 7 ಜೋಡಿಗಳಿದ್ದು ಅಸ್ಪಷ್ಟವಾಗಿರುತ್ತವೆ ಅಥವಾ ಒಣಗಿದಾಗ ಸ್ಪಷ್ಟವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ / ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿನ ಮಧ್ಯಾಭಿಸರ ಮಾದರಿಯವು; ಹೂಗಳು ಬಿಳಿ ಬಣ್ಣದಲ್ಲಿರುತ್ತವೆ.
ಕಾಯಿ / ಬೀಜ : ಫಲಗಳು ಡ್ರೂಪ್ ಮಾದರಿಯವು;ಬೀಜದ ಸಂಖ್ಯೆ 1.

ಜೀವಪರಿಸ್ಥಿತಿ :

800 ಮತ್ತು 1200 ಮೀ. ನಡುವಿನ ಮಧ್ಯಮ ಎತ್ತರದ ಪ್ರದೇಶಗಳ ಭಗ್ನಗೊಂಡ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ದಕ್ಷಿಣ ಭಾರತ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Linnaeus, Sp. Pl. 8. 1753; Gamble, Fl. Madras 2: 794.1993 (re.ed); Sasidharan, Biodiversity documentation for Kerala- Flowering Plants, part 6: 276. 2004.

Top of the Page