ಚುಕ್ರಾಸಿಯ ಟ್ಯಾಬ್ಯುಲಾರಿಸ್ A. Juss. - ಮೀಲಿಯೇಸಿ

:

Vernacular names : Tamil: ಚುವನ್ನಕಿಲ್,ಕರಡಿ,ನೀರ್ಮುಳಿ,ನೀರ್ಮುಲೈ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ. ಎತ್ತರದವರೆವಿಗೆ ಬೆಳೆಯುವ ಎಲೆಯುದುರು ಮಾದರಿಯ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕೆಂಪು ಮಿಶ್ರಿತ ಕಂದು ಬಣ್ಣ ಹೊಂದಿದ್ದು ತೆಳುವಾದ ಹಾಗೂ ಅವ್ಯವಸ್ಥಿತ ಚಕ್ಕೆಗಳ ಸಮೇತವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕಂಬೆಗಳು ದುಂಡಾಗಿದ್ದು,ಸೂಕ್ಷ್ಮ ವಾಯು ವಿನಿಮಯ ರಂಧ್ರ ಸಮೇತವಿದ್ದು, ಬೂದು ಬಣ್ಣದ ಮಖಮಲ್ಲಿನ ರೀತಿಯ ದಟ್ಟ ಮೃದು ತುಪ್ಪಳದಿಂದ ಕೂಟಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ ಮಾದರಿಯವು, ಸಮಸಂಖ್ಯಾ ಗರಿ ರೂಪಿಗಳಾಗಿದ್ದು 12 ರಿಂದ 50 ಸೆಂ.ಮೀ.ಉದ್ದ ಹೊಂದಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಉಬ್ಬಿದ ಎಲೆ ಬುಡವನ್ನು ಹೊಂದಿರುತ್ತವೆ;ಸಂಯುಕ್ತ ಪರ್ಣದ ನಡು ದಿಂಡು 16 ಸೆಂ ಮೀ. ಉದ್ದವಿದ್ದು ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ; ಕಿರುತೊಟ್ಟು0.2 ರಿಂದ 1 ಸೆಂ.ಮೀ. ಉದ್ದವಿರುತ್ತವೆ; ಕಿರುಪತ್ರಗಳು 10 ರಿಂದ 24ಇದ್ದು ಪರ್ಯಾಯ ಅಥವಾ ಉಪ-ಅಭಿಮುಖಿಗಳಾಗಿರುತ್ತವೆ(ಕೆಲವು ವೇಳೆ ಎಳೆಯದಾಗಿದ್ದಾಗ 1 ಅಥವಾ 2 ಜೋಡಿಗಳಿರುತ್ತವೆ) , ಗಾತ್ರ 5--13 X 2.5-6.5 ಸೆಂ.ಮೀ., ಹಲವು ವೇಳೆ ಕೆಳಗಿನ ಕಿರು ಪತ್ರಗಳು ಮೇಲಿನವುಗಳಿಗಿಂತ ಸಣ್ಣದಾಗಿರುತ್ತವೆ,ಸಂಕುಚಿತ ಅಂಡಾಕೃತಿಯಿಂದ ಈಟಿ ಆಕಾರ ಹೊಂದಿದ್ದು, ಸಂಕುಚಿತ ಹಾಗೂ ಕ್ರಮೇಣವಾಗಿ ಚೂಪಾಗುವ ತುದಿ,ಅಸಮ್ಮಿತಿಯಾದ ಬುಡ,ನಯವಾದ ಅಂಚು,ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ತಳಭಾಗ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು 6 ರಿಂದ 8 ಜೋಡಿಗಳಿದ್ದು ಹಲವು ವೇಳೆ ಕವಲುಗೊಂಡಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳವಿನ್ಯಾಸ ಹೊಂದಿರುತ್ತವೆ ಅಥವಾ ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ತುದಿಯಲ್ಲಿದ್ದು ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯಲ್ಲಿದ್ದು ಬೂದು ಬಣ್ಣದ ಮಖಮಲ್ಲಿನ ರೀತಿಯ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ;ಹೂಗಳು ಕೆನೆ ಬಣ್ಣದವು.
ಕಾಯಿ / ಬೀಜ : ಸಂಪುಟ ಫಲ ಗೋಳಾಕಾರದಲ್ಲಿದ್ದು 4 ಸೆಂ.ಮೀ.ವರೆಗಿನ ಅಡ್ಡಳತೆಯನ್ನು ಹೊಂದಿದ್ದು,4 ರಿಂದ 5 ಕೋಶಗಳ ಸಮೇತವಿರುತ್ತದೆ ಹಾಗೂ ರೋಮರಹಿತವಾಗಿರುತ್ತದೆ;ಬೀಜ ಹಲವಾರು ಇದ್ದು ಬುಡದಲ್ಲಿ ವಿಶಾಲವಾದ ರೆಕ್ಕೆ ಸಮೇತವಿರುತ್ತದೆ.

ಜೀವಪರಿಸ್ಥಿತಿ :

ನಿತ್ಯಹರಿದ್ವರ್ಣದಿಂದ ಅರೆನಿತ್ಯ ಹರಿದ್ವರ್ಣ ಮತ್ತು ಎಲೆಯುದುರು ಕಾಡುಗಳ ಮೇಲ್ಛಾವಣಿ ಮರಗಳಾಗಿ ಈ ಪ್ರಭೇಧ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಬರ್ಮ;ಪಶ್ಚಿಮ ಘಟ್ಟದಲ್ಲಿನ ದಕ್ಷಿಣ,ಮಧ್ಯ ಮತ್ತು ಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Mem. Mus.Hist.Nat.Paris 19:251.t.22.1830;Gamble,Fl.Madras 1: 186.1997(rep.ed.);Sasidharan,Biodiversity documentation for Kerala- Flowering Plants,part 6:89.2004.

Top of the Page