ಸಿನ್ನಮೋಮಮ್ ವಲೈವರೆನ್ಸ್ Kosterm. - ಲಾರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 6 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು, ತೆಳು ಕಂದು ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿರುತ್ತವೆ ಮತ್ತು ಕೋನಯುಕ್ತವಾಗಿದ್ದು ಸೂಕ್ಷ್ಮವಾದ ಉಪ-ರೇಷ್ಮೆ ರೋಮಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಅಭಿಮುಖದಿಂದ ಉಪಅಭಿಮುಖವರೆಗಿನ ಮಾದರಿಯಲ್ಲಿ ಜೋಡನೆಗೊಂಡಿರುತ್ತವೆ;ತೊಟ್ಟುಗಳು 0.5-1.5 ಸೆಂ.ಮೀ. ಉದ್ದವಿರುತ್ತದೆ ಮತ್ತು ಅಡ್ಡ ಸೀಳಿದಾಗ ಸಪಾಟ ಪೀನಮಧ್ಯ ಆಕಾರದಲ್ಲಿರುತ್ತವೆ; ಪತ್ರಗಳು 7-11 x 2-4 ಸೆಂ.ಮೀ. -ವರೆಗಿನ ಗಾತ್ರ ಹೊಂದಿದ್ದು ಅಂಡವೃತ್ತ-ಚತುರಸ್ರದಿಂದ ಭರ್ಜಿಯವರೆಗಿನ ಆಕಾರ -ದಲ್ಲಿರುತ್ತವೆ. ಪತ್ರದ ತುದಿ ಕ್ರಮೇಣ ಚೂಪಾಗುವ ಮಾದರಿಯಲ್ಲಿರುತ್ತದೆ;ಬುಡ ಚೂಪಾಗಿರುತ್ತದೆ;ಅಂಚು ನಯವಾಗಿರುತ್ತದೆ;ಪತ್ರಗಳ ಮೇಲ್ಮೈ ಕಾಗದವನ್ನೋಲುವ ಮಾದರಿಯಲ್ಲಿರುತ್ತದೆ;ಪತ್ರಗಳು 3 ಆಧಾರ ನಾಳಗಳನ್ನು ಹೊಂದಿದ್ದು ಪಾರ್ಶ್ವ ನಾಳಗಳು ಎಲೆಯ ಅಗ್ರವನ್ನು ತಲುಪುವುದಿಲ್ಲ; ಮೂರನೇ ದರ್ಜೆಯ ನಾಳಗಳು ಲಂಬ ರೇಖೆಗೆ ಸಮಕೋನದಲ್ಲಿರುತ್ತವೆ ಹಾಗೂ ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ;ಉನ್ನತ ದರ್ಜೆಯ ನಾಳಗಳು ತೀರಾಸನಿಹವಾಗಿದ್ದು ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನ ಕೆಲವು ಹೂಗಳನ್ನೊಳಗೊಂಡ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾರಂಭಿ ಮಾದರಿಯದಾಗಿರುತ್ತದೆ ಮತ್ತು ರೋಮರಹಿತ -ವಾಗಿರುತ್ತದೆ.
ಕಾಯಿ /ಬೀಜ : ಬೆರ್ರಿಗಳು ಅಂಡವೃತ್ತದ ಆಕಾರದಲ್ಲಿದ್ದು ಅಗ್ರದಲ್ಲಿಸೂಕ್ಷ್ಮವಾದ ಮೊನಚು ಮುಳ್ಳನ್ನು ಹೊಂದಿರುತ್ತವೆ ; ಕಾಯಿಗಳ ಪುಷ್ಪಾವರಣದ ಬಟ್ಟಲು ಆಳವನ್ನು ಹೊಂದಿರುವುದಿಲ್ಲ ಮತ್ತು ಶಾಶ್ವತವಾದ ದಳಗಳ ಸಮೇತವಿರುತ್ತವೆ ಹಾಗೂ ಒಂದು ಬೀಜವನ್ನೊಳ -ಗೊಂಡಿರುತ್ತವೆ.

ಜೀವಪರಿಸ್ಥಿತಿ :

ಅಂದಾಜು 1100 ಮೀ. ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಒಳಛಾವಣಿ ಮರಗಳಾಗಿ ಈ ಪ್ರಭೇದ ಅಪರೂಪವಾಗಿ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಬೆಟ್ಟ ಅಗಸ್ತ್ಯಮಲೈ ಬೆಟ್ಟ ಪ್ರದೇಶಗಳಲ್ಲಿ ಬೆಳೆಯುತ್ತದೆ.

ಗ್ರಂಥ ಸೂಚಿ :

Bull. Bot. Surv. India 25:119.1983.

Top of the Page