ಕ್ಳಸೀನ ಅನಿಸಾಟ (Willd.) J.Hk. ex Benth. - ರೂಟೇಸಿ

Synonym : ಕ್ಳಸೀನ ಡೆಂಟೇಟ (Willd.) Roemer; ಅಮೈರಿಸ್ ಡೆಂಟೇಟ Willd. ಮತ್ತು ಕ್ಳಸೀನ ವಿಲ್ಡೆನೋವಯೈ Wt. & Arn.

Vernacular names : Tamil: Kattu-veppilai, Kattukarveppilai, PothiMalayalam: Kattukariveppila, Kariveppila, Suganthaveppu, Potti

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಎತ್ತರದವರೆಗಿನ ಸಣ್ಣಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕೆಂಪು ಮಿಶ್ರಿತ ಕಂದು ಬಣ್ಣ ಹೊಂದಿದ್ದು ಚಕ್ಕೆಯುಕ್ತವಾಗಿರುತ್ತದೆ;ಕಚ್ಚು ಮಾಡಿದ ಜಾಗ ನಸುಗೆಂಪು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿರುತ್ತವೆ ಮತ್ತು ಬೂದು ಬಣ್ಣದ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತವಾಗಿದ್ದು, ಸಾಮಾನ್ಯವಾಗಿ ಅಸಮ ಸಂಖ್ಯೆ ಏಕಗರಿ ರೂಪಿಗಳಾಗಿರುತ್ತವೆ,ಕೆಲವು ವೇಳೆ ಸಮಗರಿ ರೂಪಿಗಳಾಗಿರುತ್ತವೆ,ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಅಕ್ಷದಿಂಡು ದುಂಡಾಗಿದ್ದು ಬೂದು ಬಣ್ಣದ ಮೃದುತುಪ್ಪಳದಿಂದ ಕೂಡಿರುತ್ತವೆ,ಕೆಲವು ವೇಳೆ ಉದುರಿ ಹೋಗುತ್ತವೆ;ಉಪತೊಟ್ಟುಗಳು 0.2 ಸೆಂ.ಮೀ ವರೆಗಿನ ಉದ್ದ ಹೊಂದಿರುತ್ತವೆ;ಕಿರುಪತ್ರಗಳು 7 ರಿಂದ 13 ಇದ್ದು, 2.5 -8(12) X 1. 3 – 3.5(-6.5) ಸೆಂ.ಮೀ. ಗಾತ್ರ ಹೊಂದಿದ್ದು ಸಾಮಾನ್ಯವಾಗಿ ಮೇಲೆ ಹೋದಂತೆ ಗಾತ್ರ ಹೆಚ್ಚುತ್ತಾ ಹೋಗುತ್ತದೆ,ಕಿರುಪತ್ರಗಳು ಅಸಮವಾದ ಪಾರ್ಶ್ವಗಳನ್ನು ಹೊಂದಿದ ಅಂಡದ ಆಕಾರದಲ್ಲಿದ್ದು,ಅಗಲವಾದ ಹಾಗೂ ದುಂಡನೆಯ ತುದಿಯಲ್ಲಿ ತಗ್ಗುಳ್ಳ ಅಗ್ರವನ್ನುಳ್ಳ ಕ್ರಮೇಣ ಚೂಪಾಗುವ ತುದಿ, ಅಸಮಪಾರ್ಶ್ವತೆಯುಳ್ಳ ಬುಡ ಹೊಂದಿದ್ದು, ನಯವಾದುದರಿಂದ ಸೂಕ್ಷ್ಮ ದುಂಡೇಣಿನವರೆಗಿನ ರೀತಿಯ ಸಮೇತವಿರುವ ಅಂಚು, ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ,ಮಚ್ಚೆ ರೀತಿಯ ರಸಗ್ರಂಥಿಗಳನ್ನು ಹೊಂದಿದ್ದು ಸಾಮಾನ್ಯವಾಗಿ ಎರಡೂ ಬದಿಯಲ್ಲಿನ ನಾಳಗಳ ಮತ್ತು ಮಧ್ಯನಾಳ ಮೇಲೆ ಬೂದು ಬಣ್ಣದ ಮೃದು ತುಪ್ಪಳವಿರುತ್ತವೆ, ಕೆಲವು ವೇಳೆ ಉದುರಿ ಹೋಗುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತವೆ; ಎರಡನೇ ದರ್ಜೆಯ ನಾಳಗಳು 7-11 ಜೋಡಿಗಳಿರುತ್ತವೆ ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಮಧ್ಯಾಭಿಸರ ಮಾದರಿಯವು;ಹೂಗಳು ಬಿಳಿ ಬಣ್ಣದವು ಮತ್ತು ಹೂಗಳ ಭಾಗಗಳು 4 ಸಂಖ್ಯೆಯ ಗುಣಕದಲ್ಲಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು ಗೋಳಾಕಾರದಲ್ಲಿರುತ್ತವೆ, 1.3 ಸೆಂ.ಮೀ. ಅಡ್ಡಗಲತೆಯನ್ನು ಹೊಂದಿರುತ್ತವೆ; ಬೀಜಗಳು ಚತುರಸ್ರದ ಆಕಾರ ಹೊಂದಿರುತ್ತವೆ.

ಜೀವಪರಿಸ್ಥಿತಿ :

800 ಮೀ.ವರೆಗಿನ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣದಿಂದ ಅರೆನಿತ್ಯ ಹರಿದ್ವರ್ಣ ರೀತಿಯ ಕಾಡುಗಳ ಒಳಾವರಣದಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಭಾರತ,ನೇಪಾಳ, ಶ್ರೀಲಂಕಾ ಮತ್ತು ಆಫ್ರಿಕ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳು.

ಗ್ರಂಥ ಸೂಚಿ :

Hooker, Niger Fl. 256. 1849; Syn. Hesper. 1: 44. 1846; Gamble, Fl. Madras 1: 155. 1997 (re. ed); Sasidharan, Biodiversity documentation for Kerala- Flowering Plants, part 6: 80. 2004; Cooke, Fl. Bombay 1: 183.1903; Almeida, Fl. Maharashtra 1:205. 1996; Saldanha, Fl. Karnataka 2: 218. 1996.

Top of the Page