ಕ್ಳಸೀನ ಆಸ್ಟ್ರೋಇಂಡಿಕ Stone & Nair - ರೂಟೇಸಿ

Synonym : ಕ್ಳಸೀನ ಹೆಪ್ಟಾಫಿಲ್ಲ auct. Non. (Roxb.) Wt. & Arn. Ex Steud.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗಿನ ಸಣ್ಣಗಾತ್ರದ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿರುತ್ತವೆ ಮತ್ತು ಬೂದು ಬಣ್ಣದ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ, ಅಸಮ ಸಂಖ್ಯೆ ಏಕಗರಿ ರೂಪಿ ಮಾದರಿಯಲ್ಲಿದ್ದು, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಅಕ್ಷದಿಂಡು ದುಂಡಾಗಿದ್ದು ರೋಮರಹಿತವಾಗಿರುತ್ತವೆ;ಉಪತೊಟ್ಟುಗಳು 0.5 ಸೆಂ.ಮೀ ವರೆಗಿನ ಉದ್ದ ಹೊಂದಿರುತ್ತವೆ;ಕಿರುಪತ್ರಗಳು 5 ರಿಂದ 11 ಇದ್ದು, 7.5-13.5 X 3 – 4.2 ಸೆಂ.ಮೀ. ಗಾತ್ರ ಹೊಂದಿದ್ದು,ಅಂಡವೃತ್ತ- ವಜ್ರಾಕೃತಿಯ ಆಕಾರದಲ್ಲಿದ್ದು ಅಸಮವಾದ ಪಾರ್ಶ್ವಗಳನ್ನು ಹೊಂದಿರುತ್ತವೆ,ತುದಿ ಬರಬರುತ್ತಾ ಚೂಪಾಗುವ ಮಾದರಿಯಿಂದ ಕ್ರಮೇಣ ಚೂಪಾಗುವವರೆಗಿನ ರೀತಿಯಲ್ಲಿರುತ್ತದೆ, ಬುಡ ಅಸಮಪಾರ್ಶ್ವತೆ ಮತ್ತು ಒಳಬಾಗಿದ ಮಾದರಿಯಲ್ಲಿರುತ್ತದೆ, ಅಂಚು ಸೂಕ್ಷ್ಮ ದುಂಡೇಣಿನ ದಂತಗಳ ಮಾದರಿಯಿಂದ ಉಪ – ನಯವಾದ ವರೆಗಿನ ರೀತಿಯಲ್ಲಿರುತ್ತದೆ, ಮಚ್ಚೆ ರೀತಿಯ ರಸಗ್ರಂಥಿಗಳ ಸಮೇತವಿದ್ದು, ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತವೆ; ಎರಡನೇ ದರ್ಜೆಯ ನಾಳಗಳು 7-9 ಜೋಡಿಗಳಿರುತ್ತವೆ ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಸಂಕುಚಿತ ಅಥವಾ ಅಂಡಾಕಾರದ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾರಂಭಿ ಮಾದರಿಯವು;ಹೂಗಳು ಬಿಳಿ ಬಣ್ಣದವು ಮತ್ತು ಹೂಗಳ ಭಾಗಗಳು 5 ಸಂಖ್ಯೆಯ ಗುಣಕದಲ್ಲಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು ಗೋಳಾಕಾರದಲ್ಲಿರುತ್ತವೆ;ಬೀಜಗಳು ಚತುರಸ್ರದ ಆಕಾರ ಹೊಂದಿರುತ್ತವೆ.

ಜೀವಪರಿಸ್ಥಿತಿ :

ನಿತ್ಯ ಹರಿದ್ವರ್ಣ,ಒಣ ನಿತ್ಯ ಹರಿದ್ವರ್ಣ, ಅರೆನಿತ್ಯ ಹರಿದ್ವರ್ಣ ಮತ್ತು ತೇವಾಂಶದಿಂದ ಕೂಡಿದ ಕಾಡುಗಳ ಒಳಾವರಣದಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Stone & Nair, Nordic J. Bot. 14: 491. 1994; Gamble, Fl. Madras 1: 155. 1997 (re. ed); Sasidharan, Biodiversity documentation for Kerala- Flowering Plants, part 6: 80. 2004.

Top of the Page