ಕ್ಲೀರೋಡೆಂಡ್ರಮ್ ವಿಸ್ಕೋಸಮ್ Vent. - ವೆರ್ಬೆನೇಸಿ

ಪರ್ಯಾಯ ನಾಮ : ಕ್ಲೀರೋಡೆಂಡ್ರಮ್ ಇನ್ಫಾರ್ಚ್ಯುನೇಟಮ್ non L.

Vernacular names : Tamil: ವಟ್ಟ-ಪೆರಿವಲಂ,ಪರಗಮ್,ಪೆರುಕುMalayalam: ಯೇಸಗ,ಇಸಗ,ಇಟ್ಟಿಮರ,ಪರಲೆಕನ್ನಡದ ಪ್ರಾದೇಶಿಕ ಹೆಸರು: ಗ್ಳೋರಿ ಟ್ರೀ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ ಅಂದಾಜು 4 ಮೀ. ಎತ್ತರದ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು 4-ಕೋನಯುಕ್ತವಾಗಿದ್ದು ನಸುಗೆಂಪಿನಿಂದ ಕೂಡಿದ ಹಳದಿ ಬಣ್ಣದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖ,ಕತ್ತರಿಯಾಕಾರದ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 2.5 –8 ಸೆಂ.ಮೀ. ಉದ್ದವಿದ್ದು, ದುಂಡಾಗಿರುತ್ತವೆ, ನಸುಗೆಂಪಿನಿಂದ ಕೂಡಿದ ಹಳದಿ ಬಣ್ಣದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 7- 17(-23) X 7.5 –15 ಸೆಂ.ಮೀ. ಗಾತ್ರ,ವಿಶಾಲ ಅಂಡವೃತ್ತ- ಅಂಡಾಕಾರ ಅಥವಾ ಉಪಅಂಡಾಕಾರದ ಆಕಾರ ಹೊಂದಿದ್ದು, ಕ್ರಮೇಣ ಚೂಪಾಗುವ ತುದಿ, ಹೃದಯಾಕಾರದ ಬುಡ, ನಯವಾದ ಅಥವಾ ಅಥವಾ ದಂತಿತವಾದ ಅಂಚು ,ಉಪ ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ನಸುಗೆಂಪಿನಿಂದ ಕೂಡಿದ ಹಳದಿ ಬಣ್ಣದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಮೇಲೆದ್ದಿದ್ದು ನಸುಗೆಂಪಿನಿಂದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ ; ಪತ್ರಗಳ ಬುಡದಲ್ಲಿ 5 – 7 ನಾಳಗಳಿರುತ್ತವೆ; ಎರಡನೇ ದರ್ಜೆಯ ಅಂದಾಜು 2 ರಿಂದ 3 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಂತರ ಹೊಂದಿದ್ದು,ಲಂಬ ರೇಖೆಗೆ ಸಮಕೋನದಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ತುದಿಯಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವುಗಳಾಗಿದ್ದು 18 ಸೆಂ.ಮೀವರೆಗಿನ ಉದ್ದವನ್ನು ಹೊಂದಿರುತ್ತವೆ, ನಸುಗೆಂಪಿನಿಂದ ಕೂಡಿದ ಹಳದಿ ಬಣ್ಣದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ ; ಹೂಗಳು ಉಭಯ ಪಾರ್ಶ್ವ ಅಸಮಾಂಗತೆಯುಳ್ಳ ಮಾದರಿಯಲ್ಲಿದ್ದು ಬಿಳಿಬಣ್ಣದವುಗಳಾಗಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಕಪ್ಪಾಗಿರುತ್ತವೆ ಹಾಗೂ ಹೆಚ್ಚೂ ಕಡಿಮೆ ಗೋಳಾಕಾರದಲ್ಲಿದ್ದು,ವಿಕಸಿತಗೊಂಡ,ನಸುಗೆಂಪು ಬಣ್ಣದ ಪುಷ್ಪ ಪಾತ್ರೆಯ ಮೇಲೆ ಆಸೀನವಾಗಿರುತ್ತವೆ.

ಜೀವಪರಿಸ್ಥಿತಿ :

1800 ಮೀ. ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣದಿಂದ ಅರೆನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ; ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Vent., Jard. Mal. 1: t. 25. 1803; Gamble, Fl. Madras 2: 1100. 1993 (re.ed.); Sasidharan, Biodiversity documentation for Kerala- Flowering Plants, part 6: 357. 2004.

Top of the Page