ಕೊಲೆಡೆಪಾಸ್ ಕೇಲಿಸಿನಮ್ Bedd. - ಯೂಫೊರ್ಬಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆ ಕಿರುಕೊಂಬೆಗಳು ನಕ್ಷತ್ರ-ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಗರಿ ರೂಪಿಗಳಾಗಿದ್ದು ಉದುರಿಹೋಗುವಂತಹವು;ತೊಟ್ಟುಗಳು 0.7 ಸೆಂ.ಮೀ. ವರೆಗಿನ ಉದ್ದವಿದ್ದು, ದುಂಡಾಗಿದ್ದು ದೃಢವಾಗಿರುತ್ತವೆ;ಪತ್ರಗಳು 18 X 5 ಸೆಂ. ಮೀ. ಗಾತ್ರ, ಅಂಡವೃತ್ತ-ಚತುರಸ್ರದ ಆಕಾರ ಹೊಂದಿರುತ್ತವೆ;ತುದಿ ಕ್ರಮೇಣ ಚೂಪಾಗುವ ರೀತಿಯಲ್ಲಿ ಇರುತ್ತದೆ,ಬುಡ ಚೂಪಾಗಿರುವುದರಿಂದ ದುಂಡಾಕಾರದವರೆಗಿನ ಮಾದರಿಯಲ್ಲಿರುತ್ತದೆ, ಅಂಚು ದಂತಗಳ ಬಳಿಯಲ್ಲಿ ರಸಗ್ರಂಥಿಗಳನ್ನೊಳಗೊಂಡ ದುಂಡೇಣಿನ ದಂತಗಳಿಂದ ಕೂಡಿರುತ್ತದೆ ಪತ್ರಗಳು ಎಳೆಯದಾಗಿದ್ದಾಗ ಮೇಲ್ಮೈ ನಕ್ಷತ್ರ-ರೋಮಗಳ ಸಹಿತವಾಗಿದ್ದು ನಂತರ ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು ಕ್ರಮೇಣವಾಗಿ ಬಾಗುವ 8-12 ಜೋಡಿಗಳಿರುತ್ತವೆ ಮೂರನೇ ದರ್ಜೆಯ ನಾಳಗಳು ಓರೆಯಾಗಿ ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿರುತ್ತವೆ.ಗಂಡು ಹೂಗಳು ಗುಚ್ಛಗಳಲ್ಲಿದ್ದು ಉದ್ದವಾದ ಕದಿರು ಪುಷ್ಪಮಂಜರಿಯಲ್ಲಿ ಇರುತ್ತವೆ; ಹೆಣ್ಣು ಹೂಗಳು ಕಿರಿದಾದ ಕದಿರು ಪುಷ್ಪಮಂಜರಿಯಲ್ಲಿ ಇರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು 1.2 ಸೆಂ.ಮೀ. ಅಡ್ಡಗಲದ ಅಳತೆ ಹೊಂದಿದ್ದು, 3 ರಿಂದ 2 ಕೋಶಗಳನ್ನು ಹೊಂದಿರುತ್ತವೆ;ಬೀಜಗಳು 3 ಇದ್ದು ಉಪಗೋಳಾಕಾರದವುಗಳಾಗಿರುತ್ತವೆ.

ಜೀವಪರಿಸ್ಥಿತಿ :

600 – 1000 ಮೀ. ನಡುವಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಫ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಸಹ್ಯಾದ್ರಿಯ ಅಗಸ್ತ್ಯಮಲೆಯ ಇಳಿಜಾರು ಪ್ರದೇಶ ಮತ್ತು ವರುಶುನಾಡಿನಲ್ಲಿ ಬೆಳೆಯುತ್ತದೆ.

ಗ್ರಂಥ ಸೂಚಿ :

Bedd., Fl. Sylv. S.Ind. 2(27) 320, Fl. Madras 2:1324.1993 (rep.ed.);

Top of the Page