ಕ್ರೋಟಾನ್ ಗಿಬ್ಸೋನಿಯಾನಸ್ Nimmo - ಯೂಫೊರ್ಬಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ 4 ಮೀ. ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆ ಕಿರುಕೊಂಬೆಗಳು ವಿರಳವಾದ ನಕ್ಷತ್ರ-ಮೃದುತುಪ್ಪಳದಿಂದ ಕೂಡಿರುತ್ತವೆ ಬಲಿತಾಗ ರೋಮರಹಿತ -ವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 5 ಸೆಂ.ಮೀ. ವರೆಗಿನ ಉದ್ದವಿರುತ್ತವೆ;ಪತ್ರಗಳು 7.5-17.8 X3.2-6.4 ಸೆಂ. ಮೀ. ಗಾತ್ರ, ಅಂಡವೃತ್ತ-ಚತುರಸ್ರದ ಆಕಾರ ಹೊಂದಿರುತ್ತವೆ;ತುದಿ ಕ್ರಮೇಣ ಚೂಪಾಗುವುದರಿಂದ ಹಿಡಿದು ಬಾಲರೂಪಿ-ಕ್ರಮೇಣ ಚೂಪಾಗುವ ಮಾದರಿಯಲ್ಲಿರುತ್ತದೆ, ಬುಡ ದುಂಡಾಗಿರುತ್ತದೆ, ಪತ್ರದ ಬುಡ ಮತ್ತು ತೊಟ್ಟು ಸಂಧಿಸುವಲ್ಲಿ ವೃಂತವುಳ್ಳ 2 ರಸಗ್ರಂಥಿಗಳು ಇರುತ್ತವೆ, ಅಂಚು ಸೂಕ್ಷ್ಮವಾಗಿ ಗರಗಸ ದಂತಿತವಾಗಿರುತ್ತದೆ; ಪತ್ರಗಳು ರೋಮರಹಿತವಾಗಿರುತ್ತದೆ ಅಥವಾ ಕೆಲವು ನಕ್ಷತ್ರ ತುಪ್ಪಳದಿಂದ ಕೂಡಿರುತ್ತದೆ;ಮಧ್ಯನಾಳ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು 6-8 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲವಾಗಿ ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿರುತ್ತವೆ.ಗಂಡು ಮತ್ತು ಹೆಣ್ಣು ಹೂಗಳು ಒಂದೇ ಸಸ್ಯದಲ್ಲಿರುತ್ತವೆ;ಗಂಡು ಹೂಗಳು ಹಲವು ವೇಳೆ ಗುಚ್ಛಗಳಲ್ಲಿದ್ದು 12 -25 ಸೆಂ ಮೀ. ಉದ್ದವಾದ ತೆಳುವಾದ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿ ಇರುತ್ತವೆ; ಹೆಣ್ಣು ಹೂಗಳು ಸಾಧಾರಣವಾಗಿ ಒಂಟಿಯಾಗಿರುತ್ತವೆ ಮತ್ತು ಮಧ್ಯಾಭಿಸರ ಪುಷ್ಪಮಂಜರಿಯ ಬುಡದ ಬಳಿಯಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು 3 ಕೋಶಗಳನ್ನು ಹೊಂದಿದ್ದು ಗೋಳಾಕಾರದಲ್ಲಿರುತ್ತವೆ ಹಾಗೂ ದಟ್ಟವಾದ ನಕ್ಷತ್ರ ರೋಮಗಳಿಂದ ಕೂಡಿರುತ್ತವೆ ಮತ್ತು 3 ಬೀಜಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ ನಿತ್ಯ ಹರಿದ್ವರ್ಣ ಕಾಡುಗಳ ನೆಲದಲ್ಲಿ ಬೆಳೆಯುವ ಪ್ರಭೇದ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ಮಧ್ಯ ಸಹ್ಯಾದ್ರಿಯಲ್ಲಿ ಬೆಳೆಯುತ್ತದೆ.

ಗ್ರಂಥ ಸೂಚಿ :

Graham, Cat. Pl. Bombay 251.1839; Saldnha, Fl. Karnataka 2:127.1996.

Top of the Page