ಕ್ರಿಪ್ಟೋಕಾರ್ಯ ಲಾಸೋನಿಯೈ Gamble - ಲಾರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪ-ದುಂಡಾಗಿದ್ದುದೊಡ್ಡ ಗಾತ್ರದ ವಾಯು ವಿನಿಮಯ ಬೆಂಡು ರಂಧ್ರ ಸಮೇತವಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿ -ರುತ್ತವೆ;ತೊಟ್ಟುಗಳು ಅಂದಾಜು 1 ಸೆಂ.ಮೀ. ಉದ್ದವಿರುತ್ತದೆ ಮತ್ತು ಅಡ್ಡ ಸೀಳಿದಾಗ ಸಪಾಟ ಪೀನಮಧ್ಯ ಆಕಾರದಲ್ಲಿರುತ್ತವೆ; ಹಾಗೂ ರೋಮರಹಿತವಾಗಿರುತ್ತವೆ; ಪತ್ರಗಳು 7.5-13 X2.5-4 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದು ಅಂಡವೃತ್ತ-ಚತುರಸ್ರದಿಂದ ಭರ್ಜಿಯವರೆಗಿನ ಆಕಾರ ಹೊಂದಿದ್ದು ಚೂಪಾದ ಅಥವಾ ಚೂಪಲ್ಲದ ತುದಿ, ಚೂಪಾದುದರಿಂದ ದುಂಡಾದ ಬುಡಹೊಂದಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ; ಪತ್ರದ ತಳಭಾಗ ಮಾಸಲು ಬೂದು ಹಸಿರು ಬಣ್ಣ ಹೊಂದಿರುತ್ತದೆ;ಮಧ್ಯ ನಾಳ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 6- 8 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲವಾದ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿನ ಅಥವಾ ತುದಿಯಲ್ಲಿನ ಮೃದು ತುಪ್ಪಳವುಳ್ಳ ಪುನರಾವೃತ್ತಿಯಾಗಿ ಕವಲೊಡೆಯುವ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಡ್ರೂಪ್ಗಳು 1.5 ಸೆಂ.ಮೀ. ಅಡ್ಡಗಳತೆ ಹೊಂದಿದ್ದು ಅಂಡಾಕಾರದಲ್ಲಿರುತ್ತವೆ ಮತ್ತು ವಾಯು ವಿನಿಮಯ ಬೆಂಡು ರಂಧ್ರ ಸಮೇತವಿದ್ದು ಒಣಗಿದಾಗ ಸ್ಪಷ್ಟವಾಗಿ ಕಾಣುವ ಉಬ್ಬು ತಗ್ಗುಳ್ಳ ಗೆರೆಗಳನ್ನು ಹೊಂದಿರುತ್ತವೆ ಮತ್ತು ಒಂದು ಬೀಜವನ್ನು ಒಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1400 ಮತ್ತು 2200 ಮೀ. ನಡುವಿನ ಉನ್ನತ ಎತ್ತರದಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಮೇಲ್ಛಾವಣಿ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ನೀಲಗಿರಿ, ಅಣ್ಣಾಮಲೈ ಮತ್ತು ಶಿವಮೊಗ್ಗ(ಅಪರೂಪವಾಗಿ) ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Bull.Misc.Inform. Kew 127.1925; Gamble,Fl.Madras 2:1218. 1993(rep.ed.); Sasidharan, Biodiversity documentation for Kerala Flowering Plants, part 6: 397. 2004; Saldanha, Fl. Karnataka 1:63.1996.

Top of the Page