ಡೆಂಡ್ರೋಕ್ನಿಡೆ ಸಿನುಯೇಟ (Bl.) Chew - ಅರ್ಟಿಕೇಸಿ

ಪರ್ಯಾಯ ನಾಮ : ಅರ್ಟಿಕ ಸಿನುಯೇಟ Bl.;ಲಪೋರ್ಶಿಯ ಕ್ರೆನ್ಯುಲೇಟ (Roxb.) Gaud.

Vernacular names : Tamil: ಆನಮಯಕ್ಕಿ,ಆನ್ನವಂನ್ನಂಗಿ,ಆನ್ನಯವಿಟ್ಟಿ,ಕಾಟ್ಟನ್ಪಪ್ಲಾವುಕನ್ನಡದ ಪ್ರಾದೇಶಿಕ ಹೆಸರು: ಎಲೆಫೆಂಟ್ ಫೀವರ್ ನೆಟ್ಟ್ಲ್, ಡೆವಿಲ್ ನೆಟ್ಟ್ಲ್ ,ಮೌಸ್ ನೆಟ್ಟ್ಲ್

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ ಅಂದಾಜು 5 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬಿಳಿ ಬಣ್ಣದಲ್ಲಿದ್ದು,ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ.ಕಚ್ಚು ಮಾಡಿದ ಜಾಗ ಬಿಳಿ ಛಾಯೆ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು,ರಸಗ್ರಂಥಿಗಳ ಸಮೇತವಾದ ತುರಿಕೆ ಬರಿಸುವ ರೋಮಗಳಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಕಾವಿನೆಲೆಗಳು ಉದುರುವ ಮಾದರಿಯಲ್ಲಿದ್ದು ಉದುರಿ ಹೋದ ನಂತರ ಗುರುತುಗಳನ್ನು ಉಳಿಸುತ್ತವೆ;ತೊಟ್ಟುಗಳು 2- 6 ಸೆಂ.ಮೀ.ವರೆಗಿನ ಉದ್ದವಿದ್ದು,ದುಂಡಾಗಿರುತ್ತವೆ, ರಸಗ್ರಂಥಿಗಳ ಸಮೇತವಾದ ತುರಿಕೆ ಬರಿಸುವ ರೋಮಗಳಿಂದ ಕೂಡಿರುತ್ತವೆ;ಪತ್ರಗಳು 9.5–34(-23) X2– 11.5 ಸೆಂ.ಮೀ. ಗಾತ್ರ, ಸಂಕುಚಿತ ಬುಗುರಿಯಿಂದ ಚತುರಸ್ರದವರೆಗಿನ ಆಕಾರ ಹೊಂದಿದ್ದು, ಕ್ರಮೇಣ ಚೂಪಾಗುವ ತುದಿ, ಒಳಬಾಗಿದ – ಬೆಣೆಯಾಕಾರದಿಂದ ಚೂಪಲ್ಲದ ಮಾದರಿವರೆಗಿನ ಬುಡ, ಉಪ-ನಯವಾದ ಅಥವಾ ಸೂಕ್ಷ್ಮ ದುಂಡೇಣಿನ ಅಂಚು ಹೊಂದಿದ್ದು, ರಸಗ್ರಂಥಿಗಳ ಸಮೇತವಿರುವ ತುರಿಕೆ ಬರಿಸುವ ರೋಮಗಳಿಂದ ಕೂಡಿದ ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 8 ರಿಂದ 11 ಜೋಡಿಗಳಿದ್ದು,ಅಗ್ರದ ಕಡೆಗೆ ಆರೋಹಣವಾಗುವ ಮಾದರಿಯಲ್ಲಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಂತರ ಹೊಂದಿದ್ದು, ಓರೆಯಾಗಿ ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯ ಮಂಜರಿಯಲ್ಲಿದ್ದು ಜೋತಾಡುತ್ತಿರುತ್ತವೆ ಹಾಗೂ 20 ಸೆಂ.ಮೀ.ವರೆಗಿನ ಉದ್ದ ಹೊಂದಿರುತ್ತವೆ; ಹೂಗಳು ಏಕಲಿಂಗಿಗಳಾಗಿದ್ದು ಉಪ-ತೊಟ್ಟುಸಹಿತವಾಗಿರುತ್ತವೆ.
ಕಾಯಿ / ಬೀಜ : ಫಲಗಳು ಅಖೀನು ಮಾದರಿಯವು.

ಜೀವಪರಿಸ್ಥಿತಿ :

ನೀರಿನ ಝರಿಗಳ ಬಳಿ ಮತ್ತು 1200 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಒಳಛಾವಣಿಯಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Chew, Gard. Bull. Singapore 21: 206. 1965; Gamble, Fl. Madras 3: 1373. 1998 (re. ed); Sasidharan, Biodiversity documentation for Kerala- Flowering Plants, part 6: 431. 2004.

Top of the Page