ಡಯೋಸ್ಪೈರಾಸ್ ಬಾರ್ಬೆರಿ Ramas. - ಎಬೆನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಪ್ಪು ಬಣ್ಣದಲ್ಲಿದ್ದು ಉದ್ದುದ್ದವಾಗಿ ಸೀಳಿದ ವಿನ್ಯಾಸದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು, ಅಪ್ಪು-ಮೃದುತುಪ್ಪಳದಿಂದ ಕೂಡಿರುತ್ತವೆ; ಬಲಿತ ಕಿರುಕೊಂಬೆಗಳು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.6 ರಿಂದ 0.9 ಸೆಂ.ಮೀಉದ್ದವಿರುತ್ತವೆ ಹಾಗೂ ಕಾಲುವೆ ಗೆರೆಗಳನ್ನೊಳಗೊಂಡಿರುತ್ತವೆ; ಪತ್ರಗಳು 5 -8 X1. 3 – 2.5 ಸೆಂ.ಮೀ. ಗಾತ್ರ, ಅಂಡವೃತ್ತ –ಭರ್ಜಿಯ ಆಕಾರ, ಚೂಪಾದ ಅಥವಾ ಮೊಂಡಾದ ಅಗ್ರವುಳ್ಳ ಕ್ರಮೇಣ ಚೂಪಾಗುವ ತುದಿ, ಚೂಪಾದುದರಿಂದ ಒಳಬಾಗಿದ ಬುಡ, ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ. ಮಧ್ಯನಾಳ ಚಪ್ಪಯಾಗಿರುತ್ತದೆ.; ಎರಡನೇ ದರ್ಜೆಯ ನಾಳಗಳು ಅಂದಾಜು 6 ಜೋಡಿಗಳಿದ್ದು ಆರೋಹಣ ಮಾದರಿಯವು, ತಳಗಿನ ಜೋಡಿಗಳು ಸನಿಹವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ಪ್ರಮುಖವಾದ ಜಾಲಬಂಧನಾಳ ವಿನ್ಯಾಸದಲ್ಲಿರುತ್ತವೆ .
ಪುಷ್ಪಮಂಜರಿ/ಹೂಗಳು : ಹೂಗಳು ಏಕ ಲಿಂಗಿಗಳು;ಗಂಡು ಹೂಗಳು ತೊಟ್ಟುರಹಿತವಾಗಿದ್ದು ಕಿರಿದಾದ ಅಕ್ಷಾಕಂಕುಳಿನಲ್ಲಿನ ಪುಷ್ಪಮಂಜರಿವೃಂತದ ಮೇಲಿರುತ್ತವೆ; ಹೆಣ್ಣು ಹೂಗಳು ಒಂಟಿಯಾಗಿದ್ದು ತೊಗಲು ಮಾದರಿಯ ,ಮಡಚಿದ, ದೊಡ್ಡ ಗಾತ್ರದ ಎಲೆರೂಪಿ ಪುಷ್ಪಪಾತ್ರೆಯ ದಳಗಳ ಸಮೇತವಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಅಂದಾಜು 4 ಸೆಂ. ಮೀ. ವ್ಯಾಸ ಹೊಂದಿದ್ದು ಗೋಳಾಕಾರದಲ್ಲಿರುತ್ತವೆ ಹಾಗೂ ಕಪ್ಪು ಬಣ್ಣದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ; ಬೀಜಗಳು 4 ಇದ್ದು ಚತುರಸ್ರಾಕಾರ ಹೊಂದಿದ್ದು ಸಂಕುಚಿತವಾಗಿರುತ್ತವೆ.

ಜೀವಪರಿಸ್ಥಿತಿ :

ಮಧ್ಯಮ (700 ದಿಂದ 1000 ಮೀ) ಎತ್ತರದವರೆಗಿನ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳ ಉಪ- ಮೇಲ್ಛಾವಣಿಯಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿಯ ಅಗಸ್ತ್ಯಮಲೆಯಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

J. Asiat. Soc. Bengal 10:47.t34.1914;Singh, Monograph on Indian Diospyros L.(persimmon, Ebony)Ebenaceae 50.2005; Gamble, Fl. Madras 2: 774.19979 (rep.ed.); Sasidharan, Biodiversity documentation for Kerala-Flowering Plants,part 6,269.2004:

Top of the Page