ಡಯೋಸ್ಪೈರಾಸ್ ನೀಲ್ಗೆರೆನ್ಸಿಸ್ (Wt.) Kosterm. - ಎಬೆನೇಸಿ

Synonym : ಮ್ಯಾಬ ನೀಲ್ಗೆರೆನ್ಸಿಸ್ Wight ಮತ್ತು ಡಯೋಸ್ಪೈರಾಸ್ ಫೆರ್ರಿಯ (Willd.)Bakh. var. ನೀಲ್ಗೆರೆನ್ಸಿಸ್

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಪ್ಪು ಬಣ್ಣದಲ್ಲಿರುತ್ತದೆ; ಕಚ್ಚು ಮಾಡಿದ ಜಾಗ ಮಂದವಾದ ಕಂದು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.5 ಸೆಂ. ಮೀ ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಕಾರದಲ್ಲಿರುತ್ತವೆ; ಪತ್ರಗಳು 4.5 – 8.5 X 1.5 – 3.5 ಸೆಂ.ಮೀ. ಗಾತ್ರ, ಅಂಡವೃತ್ತ-ಭರ್ಜಿಯ ಆಕಾರ, ಮೊಂಡಾದ ಅಗ್ರವುಳ್ಳ ಚೂಪಾದ ತುದಿ; ಚೂಪಾದ ಬುಡ ,ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಕಾಲುವೆಗೆರೆಯನ್ನು ಹೊಂದಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 11 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ತೀರಾ ಸನಿಹವಾಗಿದ್ದು ಜಾಲ ಬಂಧ ನಾಳವಿನ್ಯಾಸವನ್ನು ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕ ಲಿಂಗಿಗಳು; ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿದ್ದು ಕೆನೆ ಬಣ್ಣದಲ್ಲಿದ್ದು ರೋಮಗಳನ್ನುಳ್ಳ ಪುಷ್ಪಪತ್ರಗಳನ್ನು ಹೊಂದಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಪುಷ್ಪಪಾತ್ರೆ ಸಮೇತವಿರುತ್ತವೆ ಹಾಗೂ 1 ರಿಂದ 3 ಬೀಜಗಳನ್ನು ಒಳಗಳನ್ನು ಹೊಂದಿರುತ್ತವೆ..

ಜೀವಪರಿಸ್ಥಿತಿ :

1800 ಮೀ.ವರೆಗಿನ ಎತ್ತರದ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ; ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿಯ ಬೆಟ್ಟದ ಗಾಳಿ ಮರೆಯ ದಿಕ್ಕಿನ ಪ್ರದೇಶಗಳು ಮತ್ತು ನೀಲಗಿರಿಯ ಪೂರ್ವ ಭಾಗದಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Sri Lanka J. sci. Biol.Sci. 12(2) 106.1977;Gamble, Fl. Madras 2:776.1997(rep.ed.)

Top of the Page