ಡಿಪ್ಟೆರೋಕಾರ್ಪಸ್ ಇಂಡಿಕಸ್ Bedd. - ಡಿಪ್ಟೆರೋಕಾರ್ಪೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 60 ಮೀ. ಎತ್ತರದವರೆಗೆ ಬೆಳೆಯುವ ದೊಡ್ಡಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದುಬೂದು ಬಣ್ಣ ಹೊಂದಿರುತ್ತದೆ; ಕಚ್ಚು ಮಾಡಿದ ಜಾಗ ಕಂದು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು,ರೋಮರಹಿತವಾಗಿರುತ್ತವೆ ಹಾಗೂ ಉದುರಿದ ಕಾವಿನೆಲೆಗಳಿಂದುಂಟಾದ ವಲಯಾಕಾರದ ಗುರುತುಗಳಿಂದ ಕೂಡಿರುತ್ತವೆ;ಕಿರುಕೊಂಬೆಗಳು ನಕ್ಷತ್ರಾಕಾರದ ಮೃದು ತುಪ್ಪಳದಿಂದ ಕೂಡಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ ಮತ್ತು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಕಾವಿನೆಲೆಗಳು ಎಳೆಯದಾಗಿದ್ದಾಗ ಭರ್ಜಿಯಾಕಾರದಲ್ಲಿದ್ದು,5.5 ಸೆಂ.ಮೀ. ಉದ್ದವಿದ್ದು ದಟ್ಟವಾದ ನಕ್ಷತ್ರಾಕಾರದ ಮೃದು ತುಪ್ಪಳದಿಂದ ಕೂಡಿರುತ್ತವೆ;ಎಲೆತೊಟ್ಟುಗಳು 3 ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ಬುಡಭಾಗದಲ್ಲಿ ಕೊಂಚ ಉಬ್ಬಿರುತ್ತವೆ, ಎಳೆಯ ಮರಗಳಲ್ಲಿ ಕಾವಿನೆಲೆಗಳು ನಕ್ಷತ್ರಾಕಾರದ ಮೃದು ತುಪ್ಪಳದಿಂದ ಕೂಡಿರುತ್ತವೆ; ಬಲಿತ ಮರಗಳಲ್ಲಿ ಪತ್ರಗಳು 8-12 X 4-6 ಸೆಂ.ಮೀ. ಗಾತ್ರ,ಅಂಡವೃತ್ತಾಕಾರ ಅಥವಾ ಸಂಕುಚಿತ ಅಂಡಾಕಾರದ ಆಕಾರ ,ಚೂಪಾದ ಅಥವಾ ತುಸುವಾಗಿ ಕ್ರಮೇಣವಾಗಿ ಚೂಪಾಗುವ ತುದಿ, ದುಂಡಾದ ಬುಡ,ನಯವಾದ ಅಂಚು,ಉಪ-ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಎರಡನೇ ದರ್ಜೆಯ ನಾಳಗಳು ನೆಟ್ಟಗಿದ್ದು ಹೆಚ್ಚೂ ಕಡಿಮೆ ಸಮಾನಾಂತರವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ಓರೆಯಾಗಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತಹವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು 3 ರಿಂದ 8 ಹೂಗಳಿರುವ ಅಕ್ಷಾಕಂಕುಳಿನಲ್ಲಿರುವ ಮಧ್ಯಾಭಿಸರ ಮಾದರಿಯವು;ಹೂಗಳು ಬಿಳಿ ಬಣ್ಣದವುಗಳಾಗಿದ್ದು ಸುವಾಸನಾಯುಕ್ತವಾಗಿರುತ್ತವೆ.
ಕಾಯಿ /ಬೀಜ : ಕಾಯಿಗಳು ಕರಟ ಮಾದರಿಯವು ಹಾಗೂ ನಯವಾದ, ವೃದ್ಧಿಸಿದ 3 ಕಿರಿದಾದ ಹಾಗೂ 2 ದೊಡ್ಡದಾದ ಪುಷ್ಪಪಾತ್ರೆಯ ನಾಳಗಳಿಂದ ಆವೃತವಾಗಿರುತ್ತವೆ; ಬೀಜಗಳು 1 ರಿಂದ 2.

ಜೀವಪರಿಸ್ಥಿತಿ :

800ಮೀ.ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಮೇಲಚ್ಚಾವಣಿಯಲ್ಲಿರುವ ಮತ್ತು ಹೊರಹೊಮ್ಮುವ ಮರಗಳು.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ- ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಈ ಸಸ್ಯ ವ್ಯಾಪಿಸಿದೆ.

ಗ್ರಂಥ ಸೂಚಿ :

Beddome, Flora Sylvatica 94.1871;Gamble,Fl.Madras 1:81.1997(re.ed.); Sasidharan, Biodiversity documentation for Kerala- Flowering Plants, part 6:44.2004;Saldanha, Fl. Karnataka 1:191.1996.

Top of the Page