ಡ್ರೈಪೆಟೆಸ್ ವೈಟಿಯೈ (J. Hk.) Pax & Hoffm. - ಯೂಫೊರ್ಬಿಯೇಸಿ

Synonym : ಹೆಮಿಸೈಕ್ಲಿಯ ವೈಟಿಯೈ Hk.f.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿರುತ್ತವೆ ಮತ್ತು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ; ತೊಟ್ಟುಗಳು ಅಂದಾಜು 0.2 – 9 ಸೆಂ.ಮೀ.ಉದ್ದವಿದ್ದು ರೋಮರಹಿತವಾಗಿರುತ್ತವೆ;ಪತ್ರಗಳು 4 -9 X 1.5 – 3.5 ಸೆಂ. ಮೀ. ಗಾತ್ರ, ಅಂಡವೃತ್ತದಿಂದ ………… ಆಕಾರ ಹೊಂದಿರುತ್ತವೆ; ಪತ್ರಗಳ ತುದಿ ಕ್ರಮೇಣವಾಗಿ ಚೂಪಾಗುವ ಬುಡ ಸ್ವಲ್ಪಮಟ್ಟಿಗೆ ಅಸಮವಾಗಿರುತ್ತದೆ;ಅಂಚು ನಯವಾಗಿರುತ್ತದೆ;ಮೇಲ್ಮೈ ಉಪ-ತೊಗಲನ್ನೋಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತದೆ ಹಾಗೂ ಒಣಗಿದಾಗ ತೆಳು ಹಸಿರಿನಿಂದ ಕಂದು ಬಣ್ಣ ಹೊದಿರುತ್ತದೆ.ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 6 ರಿಂದ 9 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಯ ಅಕ್ಷದ ದಿಕ್ಕಿನ ಕಡೆಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿರುತ್ತವೆ ; ಗಂಡು ಹೂಗಳು ಅಕ್ಷಾಕಂಕುಳಿನಲ್ಲಿನ ಗುಚ್ಛಗಳಲ್ಲಿರುತ್ತವೆ; ಹೆಣ್ಣು ಹೂಗಳು ಒಂಟಿಯಾಗಿರುತ್ತವೆ ಮತ್ತು ಅಕ್ಷಾಕಂಕುಳಿನಲ್ಲಿರುತ್ತವೆ.
ಕಾಯಿ /ಬೀಜ : ಡ್ರೂಪ್ಗಳು ಅಂಡಾಕಾರದಿಂದ ಅಂಡವೃತ್ತದವರೆಗಿನ ಆಕಾರ ಹೊಂದಿದ್ದು 1.7-2 X 1.5 ಸೆಂ.ಮೀ. ಗಾತ್ರದಲ್ಲಿದ್ದು ನಯ ಹಾಗೂ ರೋಮರಹಿತವಾಗಿರುತ್ತವೆ ಮತ್ತು ಒಂದು ಬೀಜವನ್ನು ಒಳಗೊಂಡಿರುತ್ತವೆ.

ಜೀವಪರಿಸ್ಥಿತಿ :

900 ರಿಂದ 1500 ಮೀ. ಮಧ್ಯಮ ಎತ್ತರದ ನಡುವಿನ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಅಪರೂಪವಾಗಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಣ್ಣಾಮಲೈ ಮತ್ತು ದಕ್ಷಿಣ ನೀಲಗಿರಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Engl., Pflanzenr. 81:273.1922; Gamble, Fl.Madras 2:1300.1993 Sasidharan, Biodiversity documentation for Kerala – Flowering plants, part 6, 416.2004.

Top of the Page