ಎಲೆಯೋಕಾರ್ಪಸ್ ಮುನ್ರೋನಿಯೈ (Wl.) Masters - ಎಲೆಯೋಕಾರ್ಪೇಸಿ

Synonym : ಮೋನೋಸೆರ ಮುನ್ರೋನಿಯೈ Wt.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆವಿಗೆ ಬೆಳೆಯುವ ಮರಗಳು
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು “ಆಬ್ರೆವಿಲ್ಲೆ “ ಮಾದರಿಯಲ್ಲಿರುತ್ತವೆ;ಕಿರುಕೊಂಬೆಗಳು ದುಂಡಾಗಿದ್ದು ಎಲೆಉದುರಿದ ಗುರುತು ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಕಾವಿನೆಲೆಗಳು ಭರ್ಜಿಯಾಕಾರದಲ್ಲಿದ್ದು, 0.3 ಸೆಂ.ಮೀ.ಉದ್ದವಿದ್ದು,ಉದುರಿ ಹೋಗುವಂತಹವು;ತೊಟ್ಟುಗಳು 1.8 - 4.5 ಸೆಂ.ಮೀ. ಉದ್ದವಿದ್ದು,ತೆಳು ಹಾಗೂ , ದುಂಡಾಗಿರುತ್ತವೆ ಹಾಗೂ ಎರಡೂ ತುದಿಯಲ್ಲಿ ಊದಿಕೊಂಡಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಪತ್ರಗಳು 4.5 – 9 X 2 – 4.5 ಸೆಂ. ಮೀ. ಗಾತ್ರ, ಅಂಡಾಕಾರದಿಂದ ಸಂಕುಚಿತ ಅಂಡಾಕಾರದವರೆಗಿನ ಆಕಾರ, ಮೊಂಡು-ಅಗ್ರವುಳ್ಳ ಉದ್ದವಾದ ಹಾಗೂ ಕ್ರಮೇಣ ಚೂಪಾಗುವ ತುದಿ, ದುಂಡಾದ ಅಥವಾ ಉಪ-ಛಿನ್ನಾಗ್ರ ಮಾದರಿಯ ಬುಡ,ದುಂಡೇಣಿನ ಹಲ್ಲುಳ್ಳ ಅಂಚು ಹೊಂದಿದ್ದು , ಉಪ-ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 4-7 ಕವಲೊಡೆದ ಜೋಡಿಗಳಿದ್ದು ಪತ್ರದ ತಳಬಾಗದ ಅಕ್ಷಾಕಂಕುಳಿನಲ್ಲಿ ಸಹಜೀವಿ ಗೂಡುಗಳ ಸಮೇತವಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತಹವು;ಮೇಲ್ದರ್ಜೆಯ ನಾಳಗಳು ಧೃಢವಾದ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ..
ಪುಷ್ಪಮಂಜರಿ/ಹೂಗಳು : ಹೂಗಳು ಬಿಳಿಬಣ್ಣ ಹೊಂದಿದ್ದು ಮದ್ಯಾಭಿಸರ ಮಾದರಿಯ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಡ್ರೂಪ್ಗಳು ವಿಶಾಲವಾದ ಅಂಡವೃತ್ತಾಕಾರದಲ್ಲಿದ್ದು 2ಸೆಂ.ಮೀ. ಉದ್ದವಿದ್ದು ನಯವಾಗಿದ್ದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ ಮಧ್ಯಮ ಹಾಗೂ ಬಹುಎತ್ತರದ (700 ಮತ್ತು 2300 ನಡುವಿನ) ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಕಂಡುಬರುತ್ತದೆ..

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಬೆಳೆಯುತ್ತದೆ.

ಗ್ರಂಥ ಸೂಚಿ :

Hook.f., Fl.Brit. India 1:407.1874;Gamble, Fl.Madras 1: 124. 1997(rep.ed.);Sasidharan, Biodiversity documentation for Kerala- Flowering Plants,part 6, 64.2004: Saldanha, Fl. Karnataka 1:212. 1996.

Top of the Page