ಫಗ್ರಾಯಿಯ ಸೇಲಾನಿಕ Thunb. - ಲೊಗಾನಿಯೇಸಿ

:

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ.ವರೆವಿಗೆ ಬೆಳೆಯುವ ಸಣ್ಣ ಗಾತ್ರದ ಮರಗಳು;ಎಳೆಯದಾಗಿದ್ದಾಗ ಮೇಲೇರುವ ಅಪ್ಪು ಸಸ್ಯಗಳಾಗಿರುತ್ತವೆ.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು, ಆಳ ಹೊಂದಿರದ ಸೀಳಿಕಾ ಮಾದರಿಯಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಬಿಳಿ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಬೆಂಡು ಮಾದರಿಯಲ್ಲಿದ್ದು ನಾಲ್ಕು ಕೋನಗಳನ್ನು ಹೊಂದಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ; ತೊಟ್ಟುಗಳು 0.5- 2.5 ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ತಳಭಾಗಕ್ಕೆ ವಿಸ್ತರಿಸಿದ ಎಲೆಬುಡದ ಸಮೇತವಿರುತ್ತವೆ;ಕಾವಿನೆಲೆಗಳು ಬುಡದಲ್ಲಿ ಒರೆಯುಳ್ಳ ಕೋಶಪೊರೆಯನ್ನು ಹೊಂದಿರುತ್ತವೆ; ಪತ್ರಗಳು 9-18 x 4-8.5 ಸೆಂ.ಮೀ ಗಾತ್ರ ಹೊಂದಿದ್ದು ಸಾಮಾನ್ಯವಾಗಿ ಬುಗುರಿಯ ಆಕಾರದಲ್ಲಿರುತ್ತವೆ. ಪತ್ರಗಳು ದುಂಡಾಗಿರುವುದರಿಂದ ಥಟ್ಟನೆ ಕ್ರಮೇಣ ಚೂಪಾಗುವ ಕಿರಿದಾದ ತುದಿಯನ್ನು ಹೊಂದಿರುತ್ತವೆ ಮತ್ತು ಸಂಕುಚಿತವಾದ ಬೆಣೆಯಾಕಾರದ ಬುಡ ಹೊಂದಿದ್ದು ತಳಭಾಗಕ್ಕೆ ವಿಸ್ತರಿಸುವ ಮಾದರಿಯಲ್ಲಿರುತ್ತದೆ; ಅಂಚು ನಯವಾಗಿರುತ್ತದೆ ಮತ್ತು ಮಾಂಸಲವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ತುಸು ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿ ಕಾವಂತವು;ಮೂರನೇ ಮತ್ತು ಉನ್ನತ ದರ್ಜೆಯ ನಾಳಗಳು ಗೋಚರಿಸುವುದಿಲ್ಲ.
ಪುಷ್ಪಮಂಜರಿ/ಹೂಗಳು : ಹೂಗಳು ದೊಡ್ಡದಾಗಿದ್ದು ತುದಿಯಲ್ಲಿನ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ;ಪುಷ್ಪದಳಗಳು ಹೊರಗಡೆ ಹಳದಿ ಹಾಗೂ ಒಳಗಡೆ ಬಿಳಿ ಬಣ್ಣ ಹೊಂದಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಅಂಡವೃತ್ತದಿಂದ ಗೋಳಾಕಾರದಲ್ಲಿದ್ದು 3 - 5 ಸೆಂ.ಮೀ. ಅಗಲ ಹೊಂದಿದ್ದು ಅಗ್ರದಲ್ಲಿ ಮೊನಚು ಮುಳ್ಳಿನ ಸಮೇತವಿರುತ್ತವೆ ಹಾಗೂ ಶಾಶ್ವತವಾಗಿರುವ ಪುಷ್ಪಪಾತ್ರೆಯ ದಳಗಳನ್ನು ಹೊಂದಿರುತ್ತವೆ; ಒಂದು ಹಲವಾರು.

ಜೀವಪರಿಸ್ಥಿತಿ :

1800 ಮೀ. ಎತ್ತರದವರೆಗಿನ ಪ್ರದೇಶಗಳ ತೆರೆದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯ;ಪಶ್ಚಿಮ ಘಟ್ಟದಲ್ಲಿ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Vetensk. Acad. Handl. 3:132.1872;Gamble,Fl.Madras 2:865. 1993 (rep.ed.); Sasidharan, Biodiversity documentation for Kerala Plants, part 6, 295.2004;Keshava Murthy and Yoganarasimhan, Fl. Coorg (kodagu) 287. 1990;Cooke, Fl. Bombay 1:183.1902.

Top of the Page