ಫೈಕಸ್ ಆ್ಯಂಪ್ಲಿಸಿಮ Smith - ಮೊರೇಸಿ

ಪರ್ಯಾಯ ನಾಮ : ಫೈಕಸ್ ಸಿಎಲ Roxb. ex Buch.-Ham.

Vernacular names : Tamil: ಚೇಲ;ಕೊಯಲಿMalayalam: ಬಿಳಿಬಸುರಿ; ಬಿಳಿಬಸರಿ ಮರ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆಗಿನ,ಬಿಳಿಲು ಬೇರುಗಳ ಸಮೇತವಿರುವ ಮಧ್ಯಮ ಗಾತ್ರದ ಮರಗಳಾದ ಈ ಸಸ್ಯ ಹಲವು ವೇಳೆ ಅಪ್ಪು ಸಸ್ಯಗಳಾಗಿ ಕಂಡುಬರುತ್ತವೆ.
ಕಾಂಡ ಮತ್ತು ತೊಗಟೆ : ತೊಗಟೆ ಹಸಿರು ಮಿಶ್ರಿತ ಬೂದು ಬಣ್ಣದಲ್ಲಿದ್ದು ನಯವಾಗಿರುತ್ತವೆ;ಕಚ್ಚು ಮಾಡಿದ ಜಾಗ ಹಳದಿ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಉದುರು ರೋಮಗಳಿಂದ ಅಥವಾ ಸೂಕ್ಷ್ಮ ಮೃದು ತುಪ್ಪಳದಿಂದ ಕೂಡಿರುತ್ತವೆ ಮತ್ತು ವಲಯಾಕಾರದ ಗುರುತುಗಳಿಂದ ಕೂಡಿರುತ್ತವೆ.
ಜಿನುಗು ದ್ರವ : ಜಿನುಗು ದ್ರವ ಬಿಳಿ ಬಣ್ಣದಲ್ಲಿದ್ದು ವಿಫುಲವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದುಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು 2.5 ಸೆಂ.ಮೀ.ವರೆಗಿನ ಉದ್ದವಿದ್ದು ಭರ್ಜಿಯ ಆಕಾರದಲ್ಲಿದ್ದು ವಲಯಾಕಾರದ ಗುರುತುಗಳನ್ನುಳಿಸಿ ಉದುರಿ ಹೋಗುತ್ತವೆ;ತೊಟ್ಟುಗಳು 1.5 -5 ಸೆಂ.ಮೀ. ಉದ್ದ ಹೊಂದಿದ್ದು ಕಾಲುವೆ ಗೆರೆ ಸಮೇತವಾಗಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಪತ್ರಗಳು 5 - 14 X 2.5 – 9 ಸೆಂ.ಮೀ. ಗಾತ್ರವಿದ್ದು ವಿಶಾಲ ಅಂಡ ಅಥವಾ ಅಂಡ - ಅಂಡವೃತ್ತದ ಆಕಾರದಲ್ಲಿದ್ದು , ಮೊಂಡಾದ ಅಥವಾ ಚೂಪಾದ ಅಗ್ರವನ್ನಳ್ಳ ಕ್ರಮೇಣ ಚೂಪಾಗುವ ತುದಿ,ಚೂಪು – ಬೆಣೆ ಅಥವಾ ದುಂಡಾದ ಬುಡವನ್ನು ಹೊಂದಿರುತ್ತವೆ, ಅಂಚು ನಯವಾಗಿರುತ್ತದೆ ,ಪತ್ರಗಳು ಮಂದವಾಗಿದ್ದು, ಮೆಲ್ಲೆಲುಬು ರೀತಿಯಲ್ಲಿದ್ದು ರೋಮರಹಿತವಾಗಿದ್ದು ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ ಹಾಗೂ ಬುಡದಲ್ಲಿ 3 ಆಧಾರ ನಾಳಗಳ ಸಮೇತವಿರುತ್ತವೆ;ಮಧ್ಯ ನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 8 ರಿಂದ 10 ಜೋಡಿಗಳಿದ್ದು ಸೂಕ್ಷ್ಮವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲ ಬಂಧ ನಾಳ ವಿನ್ಯಾಸದಲ್ಲಿದ್ದು ಅಗೋಚರವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿರುವ ಸೈಕೋನಿಯ ರೀತಿಯವುಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಒಂದೇ ಸಸ್ಯದಲ್ಲಿರುತ್ತವೆ , ಸೈಕೋನಿಯಗಳು ಉಪ-ತೊಟ್ಟು ಹೊಂದಿದ್ದು ಅದುಮಿದ ಗೋಳಾಕಾರದಲ್ಲಿರುತ್ತವೆ;ಹೂಗಳು ಏಕ ಲಿಂಗಿಗಳಾಗಿದ್ದು ಸೈಕೋನಿಯಾದ ಒಳಪ್ರಾಕಾರದಲ್ಲಿರುತ್ತವೆ.
ಕಾಯಿ / ಬೀಜ : ಸಂಯುಕ್ತ ಫಲ(ತಿರುಳುಳ್ಳ ಸಂಯುಕ್ತ ಫಲ) ಕಳೆತಾಗ ಕೆಂಪು ಅಥವಾ ಕೆನ್ನೀಲಿ ಬಣ್ಣ ಹೊಂದಿರುತ್ತದೆ; ಅಖೀನುಗಳು ನಯವಾಗಿರುತ್ತವೆ.

ಜೀವಪರಿಸ್ಥಿತಿ :

1000 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ಭಗ್ನಗೊಂಡ ನಿತ್ಯ ಹರಿದ್ವರ್ಣ ಕಾಡುಗಳ ಉಪ-ಮೇಲ್ಛಾವಣಿ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಪ್ರದೇಶಗಳು, ಶ್ರೀಲಂಕಾ ಮತ್ತು ಮಾಲ್ಡೈವ್ಸ್; ಪಶ್ಚಿಮ ಘಟ್ಟದಲ್ಲಿ ಈ ಪ್ರಭೇಧ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Rees, Cyclop. 14:n.1.1810;Gamble,Fl. Madras 3:1362. 1998(rep.ed.); Sasidharan, Biodiversity documentation for Kerala- Flowering Plants, part 6:438.2004.

Top of the Page