ಫೈಕಸ್ ಕ್ಯಾಲ್ಲೋಸ Willd. - ಮೊರೇಸಿ

:

Vernacular names : Tamil: ಕಡಪ್ಲಾವು;ಕಡಪಿಲವು;ಕಲ್ಲಲುMalayalam: ನೀರುವಾಟೆ;ತಗಡು ಗೋಳಿಮರ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಆನಿಕೆ ಬೇರುಗಳನ್ನೊಳಗೊಂಡ, 25 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ; ಕಚ್ಚು ಮಾಡಿದ ಜಾಗ ಹಳದಿ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಧೃಢ ಹಾಗೂ ದುಂಡಾಗಿದ್ದು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ ಮತ್ತುರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಜಿನುಗು ದ್ರವ ಬಿಳಿ ಬಣ್ಣದಲ್ಲಿದ್ದು ವಿಫುಲವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದುಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು 3 ಸೆಂ.ಮೀ.ವರೆಗಿನ ಉದ್ದವಿದ್ದು ಭರ್ಜಿಯ ಆಕಾರ ಹೊಂದಿದ್ದು ಮತ್ತು ವಲಯಾಕಾರದ ಗುರುತುಗಳನ್ನುಳಿಸಿ ಉದುರಿ ಹೋಗುತ್ತವೆ;ತೊಟ್ಟುಗಳು 2 - 7 ಸೆಂ.ಮೀ. ಉದ್ದ ಹೊಂದಿದ್ದು ಕಾಲುವೆ ಗೆರೆ ಸಮೇತವಾಗಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ;ಪತ್ರಗಳು 10 – 20(30) X 5 – 11(15) ಸೆಂ.ಮೀ. (ಸಸಿಗಳಲ್ಲಿ -50 X 23 ಸೆಂ.ಮೀ.)ಗಾತ್ರವಿದ್ದು ಅಂಡವೃತ್ತದಿಂದ ವಿಶಾಲ ಅಂಡವೃತ್ತ ಕೆಲವು ವೇಳೆ ಅಂಡಾಕಾರದ ಆಕಾರ ಹೊಂದಿದ್ದು, ಚೂಪಾದುದರಿಂದ ಚೂಪಲ್ಲದ ಅಥವಾ ಕೊಂಚವಾಗಿ ಕ್ರಮೇಣ ಚೂಪಾಗುವ ತುದಿ, ಚೂಪಾದುದರಿಂದ ದುಂಡಾದ ಅಥವಾ ಉಪ-ಹೃದಯಾಕಾರದ ಬುಡ, ನಯವಾದ ಮತ್ತು ಹಿಂಸುರಿಯಾದ ಅಂಚು , ತೊಗಲನ್ನೋಲುವ ಮೇಲ್ಮೈ,ರೋಮರಹಿತವಾದ ಮೇಲ್ಭಾಗ, ಒರಟಾದ ಮತ್ತು ಸ್ವಲ್ಪವಾಗಿ ಮೃದು ತುಪ್ಪಳವುಳ್ಳ ತಳ ಭಾಗ ಹೊಂದಿದ್ದು ಒಣಗಿದಾಗ ಬೂದುಮಿಶ್ರಿತ ಹಸಿರು ಬಣ್ಣ ಹೊಂದಿರುತ್ತವೆ;ಪತ್ರಗಳು ಬುಡದಲ್ಲಿ 3 ಆಧಾರ ನಾಳಗಳನ್ನು ಹೊಂದಿರುತ್ತವೆ; ಮಧ್ಯ ನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 7-15 ಜೋಡಿಗಳಿದ್ದು ಪತ್ರದ ಮೇಲ್ಭಾಗದಲ್ಲಿ ಕೊಂಚವಾಗಿ ಮೇಲೆದ್ದಿರುತ್ತವೆ ಮತ್ತು ಅಂಚಿನ ಬಳಿ ಅನಿಯತವಾಗಿ ಕುಣಿಕೆಗೊಂಡಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲ ಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಸೈಕೋನಿಯ ರೀತಿಯವುಗಳಾಗಿದ್ದುಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ ಮತ್ತು ಉಪ-ಗೋಳ - ಬುಗುರಿಯ ಆಕಾರದಲ್ಲಿದ್ದು 3 ಸೆಂ.ಮೀ. ಅಡ್ಡಗಲತೆ ಹೊಂದಿದ್ದು ಒರಟಾಗಿರುತ್ತವೆ; ಪುಷ್ಪವೃಂತ 1.5 ಸೆಂ.ಮೀ. ಉದ್ದವಿರುತ್ತದೆ; ಹೂಗಳು ಏಕ ಲಿಂಗಿಗಳು.
ಕಾಯಿ / ಬೀಜ : ಸೈಕೋನಿಯ (ಸಂಯುಕ್ತ ಫಲ) ಕಳೆತಾಗ ಹಳದಿಬಣ್ಣದಲ್ಲಿದ್ದು 3 ಸೆಂ.ಮೀವರೆಗಿನ ಅಡ್ಡಗಲತೆಯನ್ನು ಹೊಂದಿರುತ್ತವೆ;ಅಖೀನುಗಳು ಚತುರಸ್ರ ಆಕಾರದಲ್ಲಿರುತ್ತವೆ.

ಜೀವಪರಿಸ್ಥಿತಿ :

1200 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಮತ್ತುಅರೆನಿತ್ಯ ಹರಿದ್ವರ್ಣ ಕಾಡುಗಳ ಕೆಲವು ವೇಳೆ ಎರಡನೇ ದರ್ಜೆಯ ಕಾಡುಗಳ ಮೇಲ್ಛಾವಣಿ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಸಿಯ;ಪಶ್ಚಿಮ ಘಟ್ಟದಲ್ಲಿ ಈ ಪ್ರಭೇಧ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Mem.Acad. Roy. Soc. Hist. (Berlin)102.1798; 1887;Gamble, Fl. Madras 3:1364.1998(rep.ed.); Sasidharan, Biodiversity documentation for Kerala- Flowering Plants, part 6:438.2004.

Top of the Page