ಫೈಕಸ್ ಎಕ್ಸಾಸ್ಪೆರೇಟ Vahl. - ಮೊರೇಸಿ

:

Vernacular names : Tamil: ಪರಕಂ,ತೇರಕಂMalayalam: ಗರಗತ್ತಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 18 ಮೀ. ಎತ್ತರದವರೆಗಿನ ಎಲೆಉದುರು ಮಾದರಿಯ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ತೆಳು ಹಸಿರು ಬಣ್ಣದಲ್ಲಿದ್ದು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಧೃಢವಾದ ಬಿಳಿ ಬಣ್ಣದ ಒರಟು ರೋಮಗಳಿಂದ ಕೂಡಿರುತ್ತವೆ..
ಜಿನುಗು ದ್ರವ : ಜಿನುಗು ದ್ರವ ಜಲರೂಪಿಯಾಗಿದ್ದು ವಿಫುಲವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದುಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಜೋಡಿಯಾಗಿರುತ್ತವೆ ಮತ್ತು ಪಾರ್ಶ್ವದಲ್ಲಿರುತ್ತವೆ ಮತ್ತು ವಲಯಾಕಾರದ ಗುರುತುಗಳನ್ನುಳಿಸಿ ಉದುರಿ ಹೋಗುತ್ತವೆ;ತೊಟ್ಟುಗಳು 1 – 6 ಸೆಂ.ಮೀ. ಉದ್ದ ಹೊಂದಿದ್ದು ಕಾಲುವೆ ಗೆರೆ ಸಮೇತವಾಗಿರುತ್ತವೆ ಮತ್ತು ಧೃಢವಾದ ಬಿಳಿ ಬಣ್ಣದ ಒರಟು ರೋಮಗಳಿಂದ ಕೂಡಿರುತ್ತವೆ;ಪತ್ರಗಳು 5.5– 17 X 3 – 7.5 ಸೆಂ.ಮೀ. ಗಾತ್ರವಿದ್ದು ವಿಶಾಲ ಅಂಡವೃತ್ತದಿಂದ ಬುಗುರಿಯವರೆಗಿನ ಆಕಾರ ಹೊಂದಿದ್ದು, ಥಟ್ಟನೆ ಕ್ರಮೇಣ ಚೂಪಾಗುವ ತುದಿ, ದುಂಡಾದ ಅಥವಾ ಚೂಪು –ಬೆಣೆಯಾಕಾರದ ಬುಡ, ದಂತಿತವಾದ ಅಥವಾ ವಂಕಿ ಏಣಿನ ರೀತಿಯಿಂದ ಹಿಡಿದು ದುಂಡೇಣಿನ ಮಾದರಿಯ ಅಂಚು ಹೊಂದಿರುತ್ತವೆ(ಅಪರೂಪವಾಗಿ ಹಾಲೆಯುಕ್ತವಾಗಿರುತ್ತವೆ),ಪತ್ರಗಳ ೆರಡೂ ಬದಿಗಳು ಒರಟು ರೋಮಗಳಿಂದ ಕೂಡಿರುತ್ತವೆ,ಪತ್ರಗಳ ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿರುತ್ತವೆ,ಪತ್ರಗಳ ಬುಡದಲ್ಲಿ 3 ಆಧಾರ ನಾಳಗಳಿರುತ್ತವೆ; ಮಧ್ಯ ನಾಳ ಮೇಲ್ಭಾಗದಲ್ಲಿ ಕೊಂಚ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 3- 6 ಜೋಡಿಗಳಿದ್ದು ಪ್ರಮುಖವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲ ಬಂಧ ನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಸೈಕೋನಿಯ ರೀತಿಯವುಗಳಾಗಿದ್ದುಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ ಮತ್ತು ಒರಟು ರೋಮಗಳಿಂದ ಕೂಡಿರುತ್ತವೆ;ಹೂಗಳು ಏಕ ಲಿಂಗಿಗಳು;ಪುಷ್ಪಮಂಜರಿ ವೃಂತ 1.5 ಸೆಂ.ಮೀ.ವರೆಗಿನ ಉದ್ದವನ್ನು ಹೊಂದಿರುತ್ತದೆ.
ಕಾಯಿ / ಬೀಜ : ಸೈಕೋನಿಯ (ಸಂಯುಕ್ತ ಫಲ) ಬುಗುರಿ ಆಕಾರದಲ್ಲಿದ್ದು 1.5 ಸೆಂ.ಮೀ.ವರೆಗಿನ ಉದ್ದ ಹೊಂದಿರುತ್ತವೆ,ಕಳೆತಾಗ ಹಳದಿ ಅಥವಾ ಕೆನ್ನೀಲಿ ಬಣ್ಣದಲ್ಲಿರುತ್ತವೆ ;ಅಖೀನುಗಳು ಚತುರಸ್ರದ ಆಕಾರವನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

1200 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ಭಗ್ನಗೊಂಡ ನಿತ್ಯ ಹರಿದ್ವರ್ಣ ದಿಂದ ಅರೆನಿತ್ಯ ಹರಿದ್ವರ್ಣವರೆಗಿನ ಕಾಡುಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಭಾರತ,ಪೂರ್ವ ಆಫ್ರಿಕ, ಅರೇಬಿಯ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದಲ್ಲಿ ಈ ಪ್ರಭೇದ ದಕ್ಷಿಣ, ಮಧ್ಯ ಮತ್ತು ಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Vahl, Enum. Pl.2: 197.1805;Gamble, Fl. Madras 3:1366.1998(rep.ed.); Sasidharan, Biodiversity documentation for Kerala- Flowering Plants, part 6:439.2004.

Top of the Page