ಫೈಕಸ್ ಮೈಕ್ರೋಕಾರ್ಪ L.f. - ಮೊರೇಸಿ

ಪರ್ಯಾಯ ನಾಮ : ಫೈಕಸ್ ರೆಟ್ಯೂಸ L.

Vernacular names : Tamil: ಇತ್ತಿ;ಇತಿಯಾಲ್;ಕಲ್ಲಿತ್ತಿMalayalam: ಪಿಲಾಲ;ಕಿರುಗೋಳಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಬಿಳಲು ಬೇರುಗಳನ್ನೊಳಗೊಂಡ ದೊಡ್ಡ ಗಾತ್ರದ ಮರಗಳಾದ ಈ ಪ್ರಭೇದ ಪ್ರಾರಂಭದಲ್ಲಿ ಅಪ್ಪು ಸಸ್ಯವಾಗಿದ್ದು ನಂತರ ಆಶ್ರಯದ ಸಸ್ಯವನ್ನು ಅದುಮಿ ಬೆಳೆದು ನಂತರ ಸ್ವತಂತ್ರವಾಗುತ್ತದೆ.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ; ಕಚ್ಚು ಮಾಡಿದ ಜಾಗ ಹಳದಿಯಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯದಾದ ಕಿರುಕೊಂಬೆಗಳು ಉಪ-ದುಂಡಾಗಿದ್ದು ರೋಮರಹಿತವಾಗಿರುತ್ತವೆ ಮತ್ತು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ. ಹಾಗೂ ಚಿಕ್ಕದಾದ ಅಂತರ ಗಿಣ್ಣನ್ನು ಹೊಂದಿರುತ್ತವೆ.
ಜಿನುಗು ದ್ರವ : ಜಿನುಗು ದ್ರವ ಬಿಳಿಯ ಬಣ್ಣ ಹೊಂದಿದ್ದು ವಿಫುಲವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು 1.5 ಸೆಂ.ಮೀ.ವರೆಗಿನ ಉದ್ದ ಹೊಂದಿದ್ದು ಭರ್ಜಿಯಾಕಾರದಲ್ಲಿದ್ದು ವಲಯಾಕಾರದ ಗುರುತುಗಳನ್ನುಳಿಸಿ ಉದುರಿ ಹೋಗುತ್ತವೆ; ಮತ್ತು ಉಪ-ರೋಮರಹಿತವಾಗಿರುತ್ತವೆ;ತೊಟ್ಟುಗಳು 0.5 – 2 ಸೆಂ.ಮೀ. ಉದ್ದ ಹೊಂದಿದ್ದು ಕಾಲುವೆಗೆರೆ ಸಮೇತವಾಗಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ; ಪತ್ರಗಳು 2.5 – 11 X 1.5 – 6 ಸೆಂ.ಮೀ. ಗಾತ್ರವಿದ್ದು ಅಂಡವೃತ್ತ, ಅಂಡವೃತ್ತ- ಬುಗುರಿಯ ಆಕಾರ ಹೊಂದಿದ್ದು, ಮೊಂಡಾಗ್ರ ಅಥವಾ ಚೂಪಲ್ಲದ ಅಗ್ರವುಳ್ಳ ಚಿಕ್ಕದಾದ ಕ್ರಮೇಣ ಚೂಪಾಗುವ ತುದಿ, ಬೆಣೆ ಅಥವಾ ಚೂಪಾದ ಬುಡ, ನಯವಾದ ಅಂಚು,ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯ ನಾಳ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ ,3 ಉಚ್ಛ ಆಧಾರ ನಾಳಗಳು ಪತ್ರಗಳ ಬುಡದಲ್ಲಿರುತ್ತವೆ(ಎರಡು ಪಾರ್ಶ್ವ ನಾಳಗಳು ಪತ್ರದ ಅರ್ಧ ಅಥವಾ ಇನ್ನೂ ಹೆಚ್ಚು ಉದ್ದವಿರುತ್ತವೆ), ಎರಡನೇ ದರ್ಜೆಯ ನಾಳಗಳು 4- 9 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಯ ಅಕ್ಷದ ಕಡೆಗೆ ಇರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಸೈಕೋನಿಯ ರೀತಿಯವುಗಳಾಗಿದ್ದು ತೊಟ್ಟುರಹಿತವಾಗಿರುತ್ತವೆ, ಅಕ್ಷಾಕಂಕುಳಿನಲ್ಲಿದ್ದು ಗೋಳಾಕಾರ ಹೊಂದಿರುತ್ತವೆ ಹಾಗೂ ರೋಮರಹಿತವಾಗಿದ್ದು 0.7 ಸೆಂ.ಮೀ. ಅಡ್ಡಗಲತೆಯನ್ನು ಹೊಂದಿರುತ್ತವೆ;ಹೂಗಳು ಏಕ ಲಿಂಗಿಗಳು.
ಕಾಯಿ / ಬೀಜ : ಸೈಕೋನಿಯ (ಸಂಯುಕ್ತ ಫಲ) ಗೋಳಾಕಾರದಲ್ಲಿದ್ದು 1 ಸೆಂ.ಮೀ.ವರೆಗಿನ ಅಡ್ಡಗಲತೆಯನ್ನು ಹೊಂದಿದ್ದು, ಕಳೆತಾಗ ಕಂದು ಬಣ್ಣದ ಚುಕ್ಕೆಗಳಿಂದ ಕೂಡಿದ ಹಳದಿ ಬಣ್ಣದಲ್ಲಿರುತ್ತವೆ; ಅಖೀನುಗಳು ನಯವಾಗಿರುತ್ತವೆ.

ಜೀವಪರಿಸ್ಥಿತಿ :

1200 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ಭಗ್ನಗೊಂಡ ನಿತ್ಯ ಹರಿದ್ವರ್ಣ ಅರೆ ನಿತ್ಯ ಹರಿದ್ವರ್ಣ ಮತ್ತು ತೇವಾಂಶದಿಂದ ಕೂಡಿದ ಕಾಡುಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಸಿಯದಿಂದ ಪೆಸಿಫಿಕ್ ದ್ವೀಪಗಳು ಮತ್ತುದಕ್ಷಿಣ ಚೈನ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

Suppl. Pl. 442. 1781;Gamble, Fl. Madras 3:1362.1998(rep.ed.); Sasidharan, Biodiversity documentation for Kerala- Flowering Plants, part 6:440.2004.

Top of the Page